ಹಾಸನದಲ್ಲಿ ಜನನುಡಿ ಪೂರ್ವಭಾವಿ ಸಭೆ – ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ಲಿಂಕ್ ನಕಲಿಸಲಾಗಿದೆ ✓
ಹಾಸನದಲ್ಲಿ ಜನನುಡಿ 2026 ರ ಪೂರ್ವಭಾವಿ ಸಭೆ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ ಇಂದಿನ ಜನಸಂಸ್ಕೃತಿ ಮತ್ತು ಚಳುವಳಿಗಳ ಪ್ರತಿಬಿಂಬವಾಗಿ ಜನನುಡಿ ಕಾರ್ಯನಿರ್ವಹಿಸುತ್ತಾ ಬಂದಿದೆ. ನವೆಂಬರ್ 28-29 ರಂದು ಮಂಗಳೂರಿನಲ್ಲಿ ನಡೆಯುವ ಜನನುಡಿಯಲ್ಲಿ “ಯುವಜನ ರಾಜಕಾರಣ ದಿಕ್ಕು ಭವಿಷ್ಯ ಸವಾಲು” ಎಂಬ ಪ್ರಧಾನ ವಿಷಯದ ಮೇಲೆ ಗೋಷ್ಠಿಗಳು ನಡೆಯಲಿವೆ.
ರಾಜ್ಯದ ಎಲ್ಲಾ ಭಾಗಗಳಿಂದ ಆಸಕ್ತರು ಭಾಗವಹಿಸುತ್ತಿದ್ದಾರೆ. ಯಶಸ್ವಿಗೆ ಅಗತ್ಯವಿರುವ ತಯಾರಿಗಳನ್ನು ಆರಂಭಿಸಲಾಗಿದೆ ಎಂದರು.
ಸಭೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಧರ್ಮೇಶ್, ಹೆಚ್.ಆರ್. ನವೀನ್ ಕುಮಾರ್, ಹೆತ್ತೂರು ನಾಗರಾಜ್, ಚಲಂ ಹಾಡ್ಲಳ್ಳಿ, ಸುಪ್ರಿಯ ಪಿ.ಆರ್, ಪುಷ್ಪ, ಹರೀಶ್ ಕಟ್ಟೆಬೆಳಗಲಿ, ಅಹಮದ್ ಹಗರೆ, ಗುರುರಾಜ್, ಅನ್ಷದ್ ಪಾಳ್ಯ, ಜಗದೀಶ್ ಬಾಬು, ಪೃಥ್ವಿ, ರಮೇಶ್, ಅರವಿಂದ, ಪ್ರಕಾಶ್, ರಾಜಕುಮಾರ್, ಜಾನಕಿ, ಮಧು, ಮುಬಷಿರ್ ಅಹಮದ್ ಮುಂತಾದವರು ಭಾಗವಹಿಸಿದ್ದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ