ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಎಸ್‌ಐಆರ್ ವೇಳೆ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಕುಟುಂಬದ 6 ಸದಸ್ಯರ ಹೆಸರು ಮರುಸೇರ್ಪಡೆಗೆ ಹೈಕೋರ್ಟ್ ಆದೇಶಕಬ್ಬಿಗೆ ಪ್ರತಿ ಟನ್‌ಗೆ 3600 ರೂ ನೀಡಲು ನಿರ್ಧರಿಸಿದ್ದೇವೆ – ಸತೀಶ್‌ ಜಾರಕಿಹೊಳಿ ಘೋಷಣೆಮೂರು ತಿಂಗಳ ಬಳಿಕ ಚುನಾವಣಾ ಆಯೋಗದ ನಿರ್ಧಾರ ಬದಲಾವಣೆ: ಐಟಿ ವಿಭಾಗದ ಮೇಲ್ವಿಚಾರಣೆ ಮತ್ತೆ ಹಿರಿಯ ಅಧಿಕಾರಿಗೆಯುಜಿಸಿ ನಿಯಮಗಳ ಮರುಪರಿಶೀಲನೆಗೆ ಸಮಿತಿ ರಚಿಸುವ ಕುರಿತು ಯೋಚಿಸಲಾಗುತ್ತಿದೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರಹಾಸನದಲ್ಲಿ ಜನನುಡಿ ಪೂರ್ವಭಾವಿ ಸಭೆ – ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಬರ ಪರಿಹಾರ 2,500 ರೂ.ನಿಂದ 5,000 ರೂ.ಗೆ ಹೆಚ್ಚಳ – ಡಿ.ಕೆ. ಶಿವಕುಮಾರ್ರೇಷನ್ ಕಾರ್ಡ್ ಇ-ಕೆವೈಸಿಗೆ ಕೇವಲ 10 ದಿನ ಬಾಕಿ – 41.33 ಲಕ್ಷ ಫಲಾನುಭವಿಗಳು ಬಾಕಿ ಉಳಿಕೆಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ – BK ಹರಿಪ್ರಸಾದ್ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆಬೆಂಗಳೂರು | ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆಚರ್ಚೆ ನಡೆಸುವುದು ಬೀದಿಯಲ್ಲಲ್ಲ, ಸಂಸತ್ತಿಗೆ ಬನ್ನಿ: ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟುಹವಾಮಾನ ಬದಲಾವಣೆ ಎದುರಿಸಲು ಜಗತ್ತು ಸಿದ್ಧವಾಗಿಲ್ಲ! ವಾರ್ಷಿಕ 305 ಬಿಲಿಯನ್ ಡಾಲರ್ ಅಗತ್ಯ: ವಿಶ್ವಸಂಸ್ಥೆ ವರದಿಭವ್ಯ ದೃಶ್ಯ ವೈಭವಕ್ಕೆ ಮೆಚ್ಚುಗೆ, ಕಥೆಯ ಆಳಕ್ಕೆ ಟೀಕೆ: ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ‘ರಾಮಾಯಣ’!ಬಸ್‌ ದರ ಏರಿಕೆ | ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡಿ ಪ್ರತಿಭಟಿಸಿದ ಬಿಜೆಪಿ; ಅಶೋಕ್‌ ಸೇರಿದಂತೆ ಹಲವರು ವಶಕ್ಕೆಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಿ: ಐಟಿ ಕಂಪನಿಗಳಿಗೆ ಡಿ.ಕೆ. ಶಿವಕುಮಾರ್ ಮನವಿಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲವೇ? ಭಾಷೆ, ಸ್ಥಳೀಯರ ಹಕ್ಕು ಮತ್ತು ಕಾರ್ಪೊರೇಟ್ ಹೊಣೆಗಾರಿಕೆಯ ಸುತ್ತ ಹೊಸ ಸಂಘರ್ಷ!ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿಜನಾಕ್ರೋಶಕ್ಕೆ ಬಗ್ಗಿತಾ ECI!? ; ಫಾರ್ಮ್ 6ರಿಂದ SIR ಘೋಷಣೆ ಪ್ರತ್ಯೇಕಿಸಿ, ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಚುನಾವಣಾ ಆಯೋಗವಿಶ್ವದ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತವೇ ಕಿಂಗ್! ದೇಶಗಳ ರ‍್ಯಾಂಕಿಂಗ್‌ನಲ್ಲೂ ಆರನೇ ಸ್ಥಾನ; ಹಳ್ಳ ಹಿಡಿದ ‘ಸ್ವಚ್ಛ ಭಾರತ ಮಿಷನ್’RSF ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರ ಪಟ್ಟಿಯಲ್ಲಿ ಅದಾನಿ, ಒಪಿಇಂಡಿಯಾ ಮತ್ತು ಟ್ರಂಪ್‌ಗೆ ಸ್ಥಾನ

ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿ

PPeepal Media Desk

Peepal Media Desk ರಾಜ್ಯ

• 2 ನಿಮಿಷದ ಓದು

ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿ

ನ.6ರಿಂದ ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಸಿದ್ಧತೆ; ಬಾಗಲಕೋಟೆಯಲ್ಲಿ ಮುಂದುವರಿದ ರೈತರ ಹೋರಾಟ

ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಹಲವು ದಿನಗಳಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ನಡೆಯುತ್ತಿದ್ದ ಸಂಘರ್ಷಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ತಾತ್ಕಾಲಿಕ ಪರಿಹಾರ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡುವ ನಿರ್ಧಾರಕ್ಕೆ ರೈತ ಸಂಘಟನೆಯ ಒಂದು ಬಣ ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ನವೆಂಬರ್ 6ರಿಂದ ಜಿಲ್ಲೆಯ ಕಾರ್ಖಾನೆಗಳು ಪುನರಾರಂಭಗೊಳ್ಳುವ ನಿರೀಕ್ಷೆ ಮೂಡಿದೆ.

ಬುಧವಾರ ನಡೆದ ಸಂಧಾನ ಸಭೆಯಲ್ಲಿ ಕಿತ್ತೂರು, ಬೈಲಹೊಂಗಲ ಮತ್ತು ಖಾನಾಪುರ ಭಾಗದ ರೈತ ಮುಖಂಡರು ದರ ನಿಗದಿ ಪ್ರಸ್ತಾಪಕ್ಕೆ ಸಮ್ಮತಿಸಿದ್ದಾರೆ. ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೂ ಸುದೀರ್ಘ ಚರ್ಚೆ ನಡೆಸಿದ ಬಳಿಕ ಪ್ರತಿ ಟನ್‌ಗೆ ₹3,500ರಿಂದ ₹3,600ರವರೆಗೆ ಪಾವತಿಸಲು ಒಪ್ಪಿಗೆ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ಸದ್ಯದ ನಿರ್ಧಾರ ಬೆಳಗಾವಿ ಜಿಲ್ಲೆಗೆ ಮಾತ್ರ ಅನ್ವಯಿಸಲಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ದರ ಅಥವಾ ಎಸ್‌ಎಪಿ ನಿಗದಿಗೆ ಸಂಬಂಧಿಸಿದಂತೆ ರೈತರು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಬಹುದು. ಈ ಕುರಿತು ಮುಂದಿನ ಹಂತದಲ್ಲಿ ಚರ್ಚೆ ನಡೆಸಲು ಅವಕಾಶವಿದೆ. ಸದ್ಯ ಪ್ರತಿಭಟನೆ ಸ್ಥಗಿತಗೊಳಿಸಿ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ ಈ ಸಂಧಾನಕ್ಕೆ ರೈತ ಸಂಘಟನೆಯ ಎಲ್ಲ ಬಣಗಳ ಬೆಂಬಲ ದೊರೆತಿಲ್ಲ. ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದ ಬಣ ಸಭೆಯಲ್ಲಿ ಭಾಗವಹಿಸದೆ ತನ್ನ ಹೋರಾಟದ ನಿಲುವನ್ನು ಮುಂದುವರಿಸಿದೆ. ನವೆಂಬರ್ 5ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಬೃಹತ್ ರೈತ ಸಮಾವೇಶ ನಡೆಸುವ ನಿರ್ಧಾರವನ್ನೂ ಪ್ರಕಟಿಸಿದೆ.

ಜೈಲ್ ಭರೋ ಹೋರಾಟಕ್ಕೆ ಸಿದ್ಧತೆ
ಹತ್ತರಗಿ ಟೋಲ್ ಪ್ಲಾಜಾದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ, ಕಬ್ಬಿನ ದರ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗುರುವಾರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ರೈತರು ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

ಇದಕ್ಕೂ ಮೊದಲು ಸಚಿವರಿಂದ ದರ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾದಿದ್ದ ರೈತರು, ಮಧ್ಯಾಹ್ನದವರೆಗೂ ಯಾವುದೇ ಅಂತಿಮ ನಿರ್ಧಾರ ಹೊರಬಾರದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮತ್ತೆ ತೀವ್ರಗೊಳಿಸಿದ್ದರು. ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನದಲ್ಲಿ ತಂಗಿದ್ದ ರೈತರು ಹಿಂಡಲಗಾ ಜೈಲಿನತ್ತ ಪಾದಯಾತ್ರೆ ಆರಂಭಿಸಿ, ನಿಷೇಧಾಜ್ಞೆ ನಡುವೆಯೂ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.

ನವೆಂಬರ್ 5ರಂದು ನಡೆಯಲಿರುವ ಸಮಾವೇಶಕ್ಕೆ ಮುಕ್ತಿಮಠದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಾಹನಗಳ ಮೂಲಕ ಆಗಮಿಸಿ, ಬಳಿಕ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕರೆ ನೀಡಿದ್ದಾರೆ. ಇದೇ ವೇಳೆ ನವೆಂಬರ್ 5ರಂದು ನಿಗದಿಯಾಗಿರುವ ಜೈಲ್ ಭರೋ ಚಳವಳಿಯನ್ನು ಕೈಬಿಡುವಂತೆ ಸಚಿವ ಸತೀಶ ಜಾರಕಿಹೊಳಿ ಚೂನಪ್ಪ ಪೂಜಾರಿ ಬಣಕ್ಕೆ ಮನವಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಬಗೆಹರಿಯದ ವಿವಾದ
ಬೆಳಗಾವಿಯಲ್ಲಿ ಸಂಧಾನ ಯಶಸ್ವಿಯಾಗಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ ದರದ ವಿಚಾರ ಇನ್ನೂ ಬಗೆಹರಿದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಒಮ್ಮತ ಮೂಡಿಲ್ಲ.

ರೈತರು ಹಿಂದಿನ ಬಾಕಿ ಪಾವತಿಯಲ್ಲಿ ಪ್ರತಿ ಟನ್‌ಗೆ ನೀಡಬೇಕಿರುವ ₹300ರ ಎರಡನೇ ಕಂತಿನ ಹಣವನ್ನು ಕಡ್ಡಾಯವಾಗಿ ಪಾವತಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಕಾರ್ಖಾನೆ ಮಾಲೀಕರು ಹಿಂದಿನ ಬಾಕಿ ವಿಚಾರವನ್ನು ಬದಿಗಿಟ್ಟು ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಕುರಿತು ಮಾತ್ರ ಚರ್ಚೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಭಿನ್ನಾಭಿಪ್ರಾಯದಿಂದ ಸಭೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರದೆ ಮುಕ್ತಾಯಗೊಂಡಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು