ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರಮತದಾರರ ಪಟ್ಟಿ ಅಕ್ರಮ, ಎಸ್‌ಐಆರ್‌ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಸಂವಿಧಾನ ರಕ್ಷಾ ಪಾದಯಾತ್ರೆ: ಕಾಂಗ್ರೆಸ್ ಘೋಷಣೆದೇವಸ್ಥಾನದ ಆಸ್ತಿಗಳ ಮೇಲೆ ಅರ್ಚಕರಿಗೆ ಮಾಲೀಕತ್ವದ ಹಕ್ಕಿಲ್ಲ: ಕೇರಳ ಹೈಕೋರ್ಟ್ರಾಜಸ್ಥಾನದ ರೈಲು ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಶಂಕೆ; ಮಹಕ್‌ದೀಪ್ ಕೌರ್, ದವೀಂದರ್ ಸಿಂಗ್ ಬಂಧನನೀವೊಬ್ಬ ಸಂಸದರು, ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಬಗ್ಗೆ ಓದಿ – ಕಂಗನಾ ವಿರುದ್ಧ ರಮ್ಯಾ ಕಿಡಿದಾವಣಗೆರೆಯಲ್ಲಿ ಅಮಾನವೀಯ ಘಟನೆ ಸಾಲದ ಕಾರಣ ಕುಟುಂಬವನ್ನು – ಮನೆಯಿಂದ ಹೊರಹಾಕಿದ ಮೈಕ್ರೋಫೈನಾನ್ಸ್ ಸಂಸ್ಥೆKPSC ಹಗರಣ ED ದಾಳಿ ವೇಳೆ 1.22 ಕೋಟಿ – ಮೌಲ್ಯದ ಆಸ್ತಿ ಜಪ್ತಿಬೈಕಿಗೆ KSRTC ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ – ಇಬ್ಬರ ಅಂತ್ಯವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೆಂಬರ್ 17ರಿಂದ ಆಶಾ ಕಾರ್ಯಕರ್ತೆಯರ – ಅನಿರ್ದಿಷ್ಟಾವಧಿ ಮುಷ್ಕರಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ 3.83 ಕೋಟಿ ಖರ್ಚು – ಒಂದೇ ದಿನಕ್ಕೆ ಇಷ್ಟು ಖರ್ಚಾ ?ತುರ್ಕಿಯಿಂದ ಹೈದರಾಬಾದಿಗೆ ಬಂದ ರಾಜಕುಮಾರಿಯರು: ನಿಜಾಮರೊಂದಿಗೆ ಬೆಸೆದ ಉಸ್ಮಾನಿಯಾ ಖಿಲಾಫತ್ತಿನ ಸಂಬಂಧಸೂರತ್‌ನಲ್ಲಿ ಬೃಹತ್ ಬಟ್ಟೆ ಗೋದಾಮಿಗೆ ಬೆಂಕಿ: ದಟ್ಟ ಹೊಗೆಯಿಂದ ಆತಂಕ, 60 ಸಿಬ್ಬಂದಿಯಿಂದ ಕಾರ್ಯಾಚರಣೆ81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ

ಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪ

PPeepal Media

Peepal Media ರಾಜಕೀಯ

• 2 ನಿಮಿಷದ ಓದು

ಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪ

ಪುಣೆ: ಕಾಂಗ್ರೆಸ್ ಸತತ ಮೂರು ಚುನಾವಣೆಗಳಲ್ಲಿ ಸೋತಿರುವ ಹತಾಶೆಯನ್ನು ವಿವಿಧ ರೀತಿಯಲ್ಲಿ ಹೊರಹಾಕುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ. ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ್ ಸಮಿಟ್‌ 2026’ರಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ದೇಶ-ವಿದೇಶಗಳಿಂದ ಎಡಪಂಥೀಯ ವಿಚಾರಧಾರೆಯ ಬೆಂಬಲಿಗರನ್ನು ಭಾರತಕ್ಕೆ ಆಹ್ವಾನಿಸಿತ್ತು. ಕಾಂಗ್ರೆಸ್‌ನ ಯುವರಾಜ ಎಂದೇ ಉಲ್ಲೇಖಿಸಿದ ರಾಹುಲ್ ಗಾಂಧಿ ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

“ಕಳೆದ ಮೂರು ಚುನಾವಣೆಗಳಲ್ಲಿ ಸತತವಾಗಿ ಸೋತಿರುವ ಕಾಂಗ್ರೆಸ್ ತನ್ನ ಹತಾಶೆಯನ್ನು ವಿವಿಧ ರೀತಿಯಲ್ಲಿ ಹೊರಹಾಕುತ್ತಿದೆ. ಕಳೆದ ಎರಡು ದಿನಗಳಲ್ಲಿ ಹೈದರಾಬಾದ್‌ನಲ್ಲಿ ‘ಭಾರತ್ ಸಮಿಟ್‌ 2026’ ಆಯೋಜಿಸಿತ್ತು. ದೇಶ-ವಿದೇಶಗಳಿಂದ ಎಡಪಂಥೀಯ ವಿಚಾರಧಾರೆಯ ಬೆಂಬಲಿಗರನ್ನು ಭಾರತಕ್ಕೆ ಆಹ್ವಾನಿಸಿತ್ತು. ಕಾಂಗ್ರೆಸ್‌ನ ಯುವರಾಜರೂ ಅಲ್ಲಿಗೆ ಹೋಗಿದ್ದರು. ಸಮಾವೇಶಕ್ಕೆ ‘ಭಾರತ್ ಸಮಿಟ್‌’ ಎಂದು ಹೆಸರಿಟ್ಟಿದ್ದರೂ, ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಭಾರತ ವಿರೋಧಿ ವಿಚಾರಗಳನ್ನು ಮಂಡಿಸುವ ಮೂಲಕ ಜಗತ್ತಿನಾದ್ಯಂತ ಭಾರತದ ಹೆಸರಿಗೆ ಧಕ್ಕೆ ತಂದಿದ್ದಾರೆ,” ಎಂದು ಅಮಿತ್ ಶಾ ಆರೋಪಿಸಿದ್ದಾರೆ.

12 ಲಕ್ಷ ಕೋಟಿ ರೂ. ಹಗರಣದ ಆರೋಪ

ಕಾಂಗ್ರೆಸ್ ನಾಯಕರನ್ನು ಭೇಟಿಯಾದಾಗ ಅವರ ಚುನಾವಣಾ ಸೋಲುಗಳ ಬಗ್ಗೆ ಪ್ರಶ್ನಿಸುವಂತೆ ಮಹಾರಾಷ್ಟ್ರ ಮತ್ತು ದೇಶದ ಜನರಿಗೆ ಅಮಿತ್ ಶಾ ಕರೆ ನೀಡಿದ್ದಾರೆ.

ಚುನಾವಣೆಯಲ್ಲಿ ಗೆಲುವು ಅಥವಾ ಸೋಲು ಪಕ್ಷದ ನಾಯಕರು ಮತ್ತು ಅವರ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ ಅವರು, ಕಾಂಗ್ರೆಸ್‌ಗೆ ದೇಶವನ್ನು ಹತ್ತು ವರ್ಷ ಆಳುವ ಅವಕಾಶ ಸಿಕ್ಕಿತ್ತು. ಆದರೆ ಆ ಅವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿ ಮೊತ್ತದ ಹಗರಣಗಳು ಮತ್ತು ಭ್ರಷ್ಟಾಚಾರ ನಡೆದಿದ್ದವು ಎಂದು ಆರೋಪಿಸಿದ್ದಾರೆ.

“ದೇಶದ ಜನರು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಕಳೆದ 12 ವರ್ಷಗಳಲ್ಲಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರದ ಒಂದು ಸಣ್ಣ ಆರೋಪವೂ ಕೇಳಿಬಂದಿಲ್ಲ,” ಎಂದು ಅಮಿತ್ ಶಾ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಅಮಿತ್ ಶಾ ಸಲಹೆ

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಹೆಸರಿಗೆ ಧಕ್ಕೆ ತರುವುದರಿಂದ ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಅಧಿಕಾರಕ್ಕೆ ಮರಳಲು ಬಯಸುವುದಾದರೆ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಭಾರತದ ಹಳ್ಳಿಗಳಿಗೆ ಭೇಟಿ ನೀಡುವಂತೆ ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

ಜಿಯಾಕೊಮೊ ಫಿಲಿಬೆಕ್ ಹೇಳಿಕೆಗೆ ಬಿಜೆಪಿ ಟೀಕೆ

ಭಾರತ್ ಸಮಿಟ್‌ನಲ್ಲಿ ಇಟಲಿಯ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಅವರು ‘ವೋಟ್ ಚೋರ್, ಗದ್ದಿ ಛೋಡ್’ ಎಂಬ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರು ನಗುತ್ತಿರುವುದು ಕಂಡುಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತಪಡಿಸಿತ್ತು.

ಜಿಯಾಕೊಮೊ ಫಿಲಿಬೆಕ್ ಅವರು ಯುರೋಪಿಯನ್ ಸೋಷಿಯಲಿಸ್ಟ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಇಟಲಿಯ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದು, ಯುರೋಪಿನ ಯುವ ಸಂಘಟನೆಗಳು ಮತ್ತು ಅಂತರರಾಷ್ಟ್ರೀಯ ಪ್ರಗತಿಪರ ರಾಜಕೀಯದಲ್ಲಿ ಸುಮಾರು ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಕೂಡ ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ಕಾಂಗ್ರೆಸ್ ಒಮ್ಮೆ ಇಟಲಿ ಪ್ರಜೆಯೊಬ್ಬರನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನಿಸಿತ್ತು. ಈಗ ಅದರ ‘ಭಾರತ ವಿರೋಧಿ ಸಮಾವೇಶ’ದಲ್ಲಿ ಇಟಲಿಯ ರಾಜಕಾರಣಿಯೊಬ್ಬರು ಭಾರತದ ಆಂತರಿಕ ವಿಚಾರಗಳ ಕುರಿತು ಮಾತನಾಡುತ್ತಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ರೆವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದೇಶಿ ರಾಜಕೀಯ ಪ್ರತಿನಿಧಿಗಳಿಗೆ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ವೇದಿಕೆ ಒದಗಿಸಿದೆ ಎಂದು ಬಂಡಿ ಸಂಜಯ್ ಕುಮಾರ್ ಆರೋಪಿಸಿದ್ದಾರೆ.

PPeepal Media

Peepal Media

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು