ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರಮತದಾರರ ಪಟ್ಟಿ ಅಕ್ರಮ, ಎಸ್‌ಐಆರ್‌ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಸಂವಿಧಾನ ರಕ್ಷಾ ಪಾದಯಾತ್ರೆ: ಕಾಂಗ್ರೆಸ್ ಘೋಷಣೆದೇವಸ್ಥಾನದ ಆಸ್ತಿಗಳ ಮೇಲೆ ಅರ್ಚಕರಿಗೆ ಮಾಲೀಕತ್ವದ ಹಕ್ಕಿಲ್ಲ: ಕೇರಳ ಹೈಕೋರ್ಟ್ರಾಜಸ್ಥಾನದ ರೈಲು ಹಳಿ ಸ್ಫೋಟ ಪ್ರಕರಣ: ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಶಂಕೆ; ಮಹಕ್‌ದೀಪ್ ಕೌರ್, ದವೀಂದರ್ ಸಿಂಗ್ ಬಂಧನನೀವೊಬ್ಬ ಸಂಸದರು, ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಬಗ್ಗೆ ಓದಿ – ಕಂಗನಾ ವಿರುದ್ಧ ರಮ್ಯಾ ಕಿಡಿದಾವಣಗೆರೆಯಲ್ಲಿ ಅಮಾನವೀಯ ಘಟನೆ ಸಾಲದ ಕಾರಣ ಕುಟುಂಬವನ್ನು – ಮನೆಯಿಂದ ಹೊರಹಾಕಿದ ಮೈಕ್ರೋಫೈನಾನ್ಸ್ ಸಂಸ್ಥೆKPSC ಹಗರಣ ED ದಾಳಿ ವೇಳೆ 1.22 ಕೋಟಿ – ಮೌಲ್ಯದ ಆಸ್ತಿ ಜಪ್ತಿಬೈಕಿಗೆ KSRTC ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ – ಇಬ್ಬರ ಅಂತ್ಯವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೆಂಬರ್ 17ರಿಂದ ಆಶಾ ಕಾರ್ಯಕರ್ತೆಯರ – ಅನಿರ್ದಿಷ್ಟಾವಧಿ ಮುಷ್ಕರಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ 3.83 ಕೋಟಿ ಖರ್ಚು – ಒಂದೇ ದಿನಕ್ಕೆ ಇಷ್ಟು ಖರ್ಚಾ ?ತುರ್ಕಿಯಿಂದ ಹೈದರಾಬಾದಿಗೆ ಬಂದ ರಾಜಕುಮಾರಿಯರು: ನಿಜಾಮರೊಂದಿಗೆ ಬೆಸೆದ ಉಸ್ಮಾನಿಯಾ ಖಿಲಾಫತ್ತಿನ ಸಂಬಂಧಸೂರತ್‌ನಲ್ಲಿ ಬೃಹತ್ ಬಟ್ಟೆ ಗೋದಾಮಿಗೆ ಬೆಂಕಿ: ದಟ್ಟ ಹೊಗೆಯಿಂದ ಆತಂಕ, 60 ಸಿಬ್ಬಂದಿಯಿಂದ ಕಾರ್ಯಾಚರಣೆ81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ

ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆ

PPeepal Media

Peepal Media ದೇಶ

• 1 ನಿಮಿಷದ ಓದು

ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆ

ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವಿಗ್ರಹ ವಿಸರ್ಜನಾ ಮೆರವಣಿಗೆಯ ವೇಳೆ ಜೋರಾಗಿ ಡಿಜೆ ಸಂಗೀತ ಹಾಕಿಕೊಂಡು ಬಂದ ವಾಹನ ಮನೆಯ ಮುಂದೆ ನಿಂತಿದ್ದರಿಂದ 20 ದಿನದ ಹೆಣ್ಣು ಮಗು ಮೃತಪಟ್ಟಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಡಿಜೆ ಶಬ್ದ ಕಡಿಮೆ ಮಾಡುವಂತೆ ಮತ್ತು ಮನೆಯ ಮುಂದೆ ವಾಹನ ನಿಲ್ಲಿಸದಂತೆ ಹಲವು ಬಾರಿ ಮನವಿ ಮಾಡಿದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಕುಟುಂಬ ದೂರಿದೆ.

ಬಲ್ಲಿಯಾ ಜಿಲ್ಲೆಯ ಮನಿಯಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಡಿಯಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗು ತನ್ನ ತಾಯಿ ರೀಮಾ ದೇವಿ ಪಕ್ಕದಲ್ಲಿ ಮನೆಯೊಳಗೆ ಮಲಗಿತ್ತು. ಈ ಸಂದರ್ಭದಲ್ಲಿ ವಿಗ್ರಹ ವಿಸರ್ಜನಾ ಮೆರವಣಿಗೆಯ ಭಾಗವಾಗಿ ಡಿಜೆ ವ್ಯವಸ್ಥೆ ಹೊಂದಿದ್ದ ವಾಹನ ಮನೆಯ ಮುಂದೆ ಬಂದು ನಿಂತಿದೆ. ಅತಿಯಾದ ಶಬ್ದದಲ್ಲಿ ಸಂಗೀತ ಮುಂದುವರಿದಾಗ ಮಗು ಏಕಾಏಕಿ ಅಳಲು ಆರಂಭಿಸಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮಗುವಿನ ಹೃದಯಬಡಿತ ನಿಂತಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ತಕ್ಷಣವೇ ಸಂಬಂಧಿಕರು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.

ಡಿಜೆ ತಂಡವನ್ನು ಸ್ಥಳದಿಂದ ತೆರಳುವಂತೆ ಮನವಿ ಮಾಡಿದ್ದ ಕುಟುಂಬ

ಮೃತ ಮಗುವಿನ ತಾಯಿ ರೀಮಾ ದೇವಿ ಕಳೆದ 10 ದಿನಗಳಿಂದ ತಮ್ಮ ತವರು ಮನೆಯಲ್ಲಿದ್ದರು. ಪತಿಯ ಮನೆಯಲ್ಲಿದ್ದಾಗ ತಾಯಿ ಮತ್ತು ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರು ತವರು ಮನೆಗೆ ಬಂದಿದ್ದರು ಎಂದು ಮಗುವಿನ ಚಿಕ್ಕಮ್ಮ ತಿಳಿಸಿದ್ದಾರೆ.

“ನನ್ನ ನಾದಿನಿ ತನ್ನ ನವಜಾತ ಮಗಳೊಂದಿಗೆ ಇಲ್ಲಿಗೆ ಬಂದಿದ್ದರು. ಅವರ ಗಂಡನ ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇರಲಿಲ್ಲ. ಕಳೆದ 10 ದಿನಗಳಿಂದ ನಾವು ಅವರಿಬ್ಬರ ಆರೈಕೆ ಮಾಡುತ್ತಿದ್ದೆವು. ಡಿಜೆ ವ್ಯವಸ್ಥೆಯಿದ್ದ ವಾಹನ ಜೋರಾಗಿ ಸಂಗೀತ ಹಾಕಿಕೊಂಡು ಬಂದು ನಮ್ಮ ಮನೆಯ ಮುಂದೆ ನಿಂತಾಗ ಈ ಘಟನೆ ಸಂಭವಿಸಿತು. ಆಗ ಮಗುವಿನ ಹೃದಯಬಡಿತ ನಿಂತಿತು,” ಎಂದು ಅವರು ಹೇಳಿದ್ದಾರೆ.

ಡಿಜೆ ವಾಹನವನ್ನು ಮನೆಯ ಮುಂದೆ ನಿಲ್ಲಿಸಬೇಡಿ ಮತ್ತು ಸಂಗೀತದ ಶಬ್ದ ಕಡಿಮೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದ್ದರೂ ಅದನ್ನು ನಿರ್ಲಕ್ಷಿಸಲಾಯಿತು ಎಂದು ಕುಟುಂಬ ಆರೋಪಿಸಿದೆ.

“ಇಲ್ಲಿ ವಾಹನ ನಿಲ್ಲಿಸಿ ಇಷ್ಟು ಜೋರಾಗಿ ಸಂಗೀತ ಹಾಕಬೇಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ನಮ್ಮ ಮಾತಿಗೆ ಅವರು ಕಿವಿಗೊಡಲಿಲ್ಲ,” ಎಂದು ಮಗುವಿನ ಚಿಕ್ಕಮ್ಮ ತಿಳಿಸಿದ್ದಾರೆ.

ಡಿಜೆ ಉಪಕರಣ ವಶಕ್ಕೆ ಪಡೆದ ಪೊಲೀಸರು

ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಡಿಜೆ ಉಪಕರಣಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಜೈ ಶಂಕರ್ ಮಿಶ್ರಾ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು