ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಜಿಲ್ಲಾಧಿಕಾರಿ ವಿರುದ್ಧದ ಆರೋಪ – ಪೊಲೀಸ್ ನೋಟಿಸ್‌ಗೆ ಡೋಂಟ್‌ ಕೇರ್ ಎಂದ ಕುಮಾರಸ್ವಾಮಿಬಾಂಗ್ಲಾದೇಶಕ್ಕೆ ಶೇಖ್ ಹಸೀನಾ: ಭಾರತದಿಂದ ವಾಪಸ್; ರಾಷ್ಟ್ರೀಯ ವಿಮಾನವೇ ಬೇಕೆಂಬ ಬೇಡಿಕೆ; ಬಂಧನಕ್ಕೆ ಸಿದ್ಧವಾಗಿರುವ ಸರ್ಕಾರ!ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್‌28 ಎಸೆತಗಳಲ್ಲಿ ಶತಕ, 15ನೇ ವಯಸ್ಸಿನಲ್ಲೇ ವಿಶ್ವದಾಖಲೆ: ವೈಭವ್ ಸೂರ್ಯವಂಶಿ ಎಂಬ ಕ್ರಿಕೆಟ್ ವಿಸ್ಮಯ!ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌ನ.26ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆ; ಮುಕ್ತ ವ್ಯಾಪಾರ ಒಪ್ಪಂದ ರದ್ದತಿಗೆ ಆಗ್ರಹಇಸ್ರೇಲ್ ದೇಶದಿಂದ ಶಸ್ತ್ರಾಸ್ತ್ರ ಖರೀದಿಗೆ ರಾಹುಲ್ ಗಾಂಧಿ ಬೆಂಬಲ: ಎಡಪಕ್ಷಗಳ ನಾಯಕರಿಂದ ಟೀಕೆಅಪ್ಪನನ್ನು ಕೊಲ್ಲಲೆಂದೇ ಸೆಕ್ಯುರಿಟಿ ತೆಗೆದುಹಾಕಲಾಗಿತ್ತು: ಅಂದಿನ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪಪಾಲಕ್ಕಾಡ್ ಶಾಲೆಯಲ್ಲಿ ಸಹಪಾಠಿಯಿಂದ ಗುಂಡಿನ ದಾಳಿ: 9ನೇ ತರಗತಿ ವಿದ್ಯಾರ್ಥಿಗೆ ಗಾಯ; ವಿದ್ಯಾರ್ಥಿ ವಶಕ್ಕೆಎರಡು ಮಕ್ಕಳಿರುವ ಹೆಂಗಸನ್ನು ಮದುವೆಯಾಗುವುದಾಗಿ ಹಟ ಹಿಡಿದ ಮಗನನ್ನು ಕೊಂದು ಮುಗಿಸಿದ ತಾಯಿಬೆಂಗಳೂರಿನ ಇತಿಹಾಸ, ಕಲೆ, ಸಾಹಿತ್ಯಕ್ಕೆ ಹೊಸ ವೇದಿಕೆ: ಡಿಸೆಂಬರ್ 4ರಿಂದ 10 ದಿನಗಳ ಬೆಂಗಳೂರು ಜಾತ್ರೆಕೆಪಿಎಸ್‌ಸಿ ನೇಮಕಾತಿ ಹಗರಣ: 384 ಕೆಎಎಸ್ ಅಧಿಕಾರಿಗಳ ಆಯ್ಕೆಯ ಮೇಲೂ ಅನುಮಾನದ ನೆರಳು; ತನಿಖೆಗೆ ಹೈಕೋರ್ಟ್ ಆದೇಶಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್ ಭರವಸೆಹಿಜಾಬ್ ನಿಯಮಕ್ಕೆ ಸೆಡ್ಡು ಹೊಡೆದ ಗಾಯಕಿಗೆ 74 ಚಡಿಯೇಟು; ಇರಾನ್‌ನಲ್ಲಿ ಕಠಿಣ ಶಿಕ್ಷೆಲಾಭ ಹೆಚ್ಚುತ್ತಿದೆ, ಉದ್ಯೋಗ ಮತ್ತು ವೇತನ ಏಕೆ ಹೆಚ್ಚುತ್ತಿಲ್ಲ? ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ ನೇರ ಪ್ರಶ್ನೆಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿಯೆಮನ್‌ನಲ್ಲಿ ಸೌದಿ ಅರೇಬಿಯಾದ ವೈಮಾನಿಕ ದಾಳಿ: 25 ಮಂದಿ ಸಾವು ಅಥವಾ ನಾಪತ್ತೆ; ಆರು ಜನರಿಗೆ ಗಾಯಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ, ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?ಪುಣೆಯ ಟೆಕ್ಕಿಯಿಂದ ಲಿವ್‌-ಇನ್‌ ಸಂಗಾತಿಯ ಹತ್ಯೆ; ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಆರೋಪಿ, ಬೆಳಗ್ಗೆ ಪೊಲೀಸರಿಗೆ ಕರೆಆನೆಗಳನ್ನು ಸ್ಥಳಾಂತರಿಸುವುದರಿಂದ ಸಮಸ್ಯೆ ಬಗೆಹರಿಯದು; ಅವು ನಡೆದಾಡುವ ದಾರಿಗಳ ಒತ್ತುವರಿ ತೆರವುಗೊಳಿಸಿ: ರಮ್ಯಾ ದಿವ್ಯ ಸ್ಪಂದನ

ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌

ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ  ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ (Bengaluru) ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಆರು ದಿನಗಳಿಂದ ಆಶಾ ಕಾರ್ಯಕರ್ತೆಯರು (Asha Workers)  ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ಬೆಂಬಲ ಸೂಚಿಸಿದ್ದಾರೆ. ಪ್ರತಿ ತಿಂಗಳು 15 ಸಾವಿರ ರೂಪಾಯಿ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಆಶಾ ಕಾರ್ಯಕರ್ತೆಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಮೂಲಸೌಕರ್ಯ ಕೊರತೆ, ಸರ್ಕಾರದ ವಿರುದ್ಧ ಕಿಡಿ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಾಟಾಳ್ ನಾಗರಾಜ್, ಆರು ದಿನಗಳಿಂದ ಮಳೆ ಮತ್ತು ಗಾಳಿಯನ್ನು ಲೆಕ್ಕಿಸದೆ ಮಹಿಳೆಯರು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಜಪಾನ್ ಪ್ರವಾಸದಲ್ಲಿ ನಿರತರಾಗಿದ್ದರೆ, ಇತ್ತ ಸಚಿವರು ಬರಿ ಬುರುಡೆ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳೇ ಇಲ್ಲದೆ ಪ್ರತಿಭಟನೆ ನಡೆಯುತ್ತಿರುವುದನ್ನು ಖಂಡಿಸಿದ ಅವರು, ಇಲ್ಲಿನ ಪರಿಸ್ಥಿತಿ ನರಕಸದೃಶವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ನಾಳೆಯ ಗಡುವು, ಕರ್ನಾಟಕ ಬಂದ್ ಎಚ್ಚರಿಕೆ
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ನಾಳೆ ಸಂಜೆ ಒಳಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಸಮಗ್ರ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುವುದಾಗಿ ಮತ್ತು ಕರ್ನಾಟಕ ಬಂದ್‌ಗೆ ಕರೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ತೀವ್ರಗೊಂಡ ಆಶಾ ಕಾರ್ಯಕರ್ತೆಯರ ಹೋರಾಟ, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಕಿಡಿ

ಮಾಸಿಕ ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ನಗರದ ಫ್ರೀಡಂ (Bengaluru) ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು (Asha Workers) ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ (Protest) ಹಗಲು-ರಾತ್ರಿ ಪ್ರತಿಭಟನೆ ಸೋಮವಾರ ಏಳನೇ ದಿನವನ್ನು ತಲುಪಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಲಿಖಿತ ಆದೇಶವಿಲ್ಲದೆ ಹೋರಾಟ ಅಂತ್ಯವಿಲ್ಲವೆಂಬ ಪಟ್ಟು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖರು ಮಾತುಕತೆ ನಡೆಸಿ, ಬೇಡಿಕೆಗಳ ಪರಿಶೀಲನೆಗೆ ಸ್ವಲ್ಪ ಸಮಯ ನೀಡುವಂತೆ ಕೋರಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಬರೀ ಮಾತುಗಳು ಮತ್ತು ಮೌಖಿಕ ಭರವಸೆಗಳನ್ನು ನಂಬಲು ಸಿದ್ಧವಿಲ್ಲದ ಕಾರ್ಯಕರ್ತೆಯರು, ಸರ್ಕಾರದಿಂದ ಅಧಿಕೃತ ಲಿಖಿತ ಆದೇಶ ಹೊರಬೀಳುವವರೆಗೂ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

ನಿಗದಿತ ಮಾಸಿಕ ಗೌರವಧನವನ್ನು ₹15,000ಕ್ಕೆ ಏರಿಸಬೇಕು, ಜನವರಿ 2025ರಲ್ಲಿ ನೀಡಿದ್ದ ₹10,000 ಭರವಸೆಯನ್ನು ಜಾರಿಗೆ ತರಬೇಕು, ಕೇಂದ್ರದ ಬಾಕಿ ₹1,500 ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಹಾಗೂ ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಆಗ್ರಹವಾಗಿದೆ. ಇದರ ಜೊತೆಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ಮತ್ತು ನಿವೃತ್ತಿ ಸಂದರ್ಭದಲ್ಲಿ ₹5 ಲಕ್ಷದವರೆಗೆ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನೂ ಅವರು ಮುಂದಿಟ್ಟಿದ್ದಾರೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು