ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಆಶಾ ಕಾರ್ಯಕರ್ತೆಯರ ಹೋರಾಟದ ತೀವ್ರತೆ, ಮಾನವ ಸರಪಳಿ ನಿರ್ಮಿಸಿ – ಸರ್ಕಾರದ ವಿರುದ್ಧ ಕಿಡಿಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ಶಾಸನಗಳ ಅಧ್ಯಯನಕ್ಕೆ ಶ್ರೀನಿವಾಸ್ ವೈ.ಸಿ.ಗೆ ಪಿಎಚ್‌ಡಿ ಪದವಿಬೆಂಗಳೂರು ಜಾತ್ರೆಗೆ ಕ್ಷಣಗಣನೆ : ಇಡೀ ನಗರವೇ ಸಾಂಸ್ಕೃತಿಕ ಸಂಭ್ರಮವಾಗಲಿದೆ – ಕೃಷ್ಣ ಬೈರೇಗೌಡಕಾಡಾನೆಗಳ ಹಾವಳಿ ಮಡಿಗೆರೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ – ನಿಷೇಧಾಜ್ಞೆ ಜಾರಿಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ ಎಂಬ ಮಾತು ಕಾಂಗ್ರೆಸ್​​​​ಗೆ​​​​​​​​​ ದೊಡ್ಡ ಪೆಟ್ಟು – ರಾಜಣ್ಣಆರ್.ಡಿ. ವೀರಪ್ಪ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿ ಎಸ್.ಪಿ. ಕಚೇರಿ ಮುತ್ತಿಗೆ – ಜನಪರ ಸಂಘಟನೆಗಳ ಒಕ್ಕೂಟಪ್ರೇಮದ ಊರಲಿ: ಕನ್ನಡಿಗರು ಇನ್ನೂ ಧಾರಾವಾಹಿಗಳ ಪ್ರೇಕ್ಷಕರೇ? ಒಂದು ಸಿನಿಮಾ ಗೆದ್ದ ಕಥೆಯ ಹಿಂದಿರುವ ಅಸಲಿ ಕಾರಣಗಳೇನು?ಕರ್ನಾಟಕದಲ್ಲಿ 1,712 ಬಾಲ್ಯವಿವಾಹ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ: ಹೈಕೋರ್ಟ್ ನ್ಯಾಯಮೂರ್ತಿ ಕಳವಳಆರನೇ ದಿನವೂ ಮುಂದುವರಿದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ; 18 ತಿಂಗಳಾದರೂ ಈಡೇರದ ಸರ್ಕಾರದ ಭರವಸೆಮಣಿಪುರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 17 ಬಲಿ: 228 ಮಂದಿ ಆಸ್ಪತ್ರೆಗೆ ದಾಖಲು; 6 ಜನರ ಬಂಧನಹೈದರಾಬಾದ್‌ಗೆ ಉಗ್ರರ ದಾಳಿ ಬೆದರಿಕೆ: ನವೆಂಬರ್ 26ಕ್ಕೆ ಮುಂಬೈ ದಾಳಿ ಮಾದರಿಯ ಎಚ್ಚರಿಕೆ ಸಂದೇಶ!ಬಿಸ್ಲೆರಿ ಕುಡಿಯುವ ನೀರು ಅಸುರಕ್ಷಿತ: ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಎಫ್‌ಎಸ್‌ಎಸ್‌ಎಐಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರವರ್ತೂರು ಅಕ್ರಮ ವಲಸಿಗರ ವದಂತಿ: ವೈರಲ್ ವಿಡಿಯೋದಲ್ಲಿನ ಆರೋಪಗಳನ್ನು ತಳ್ಳಿಹಾಕಿದ ಪೊಲೀಸರುಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರಿ ಇಳಿಕೆ: ಕೆ.ಜಿಗೆ ₹20 ಕಡಿತ, ಗ್ರಾಹಕರಿಗೆ ತುಸು ನಿರಾಳ!ಚಿನ್ನದ ಬೆಲೆ ಇಳಿಕೆಗೆ ತಮ್ಮ ಮನವಿಯೇ ಕಾರಣ ಎಂದ ಪ್ರಧಾನಿ ಮೋದಿಗೆ ಜನಸಾಮಾನ್ಯರ ಕೆಲವು ಪ್ರಶ್ನೆಗಳುಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ನೀಡಬೇಕಿದ್ದ ಗೌರವ ವಂದನೆ ಓವೈಸಿಗೆ ಸಲ್ಲಿಕೆ; ಉತ್ತರ ಪ್ರದೇಶ ಪೊಲೀಸರಿಂದ ತನಿಖೆಗೆ ಆದೇಶಸರ್ಕಾರಕ್ಕೆ ಶಾಕ್: ಮೂವರು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಎಚ್ಚರಿಕೆ!ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನ

ಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗೋಧ್ರಾ ರೈಲು ದಹನ (Godhra Train Case) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬರ ಶಿಕ್ಷೆಯನ್ನು ಅನಾರೋಗ್ಯದ ಕಾರಣ ನೀಡಿ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಅಮಾನತುಗೊಳಿಸಿದೆ. ಅಪರಾಧಿ ಇರ್ಫಾನ್ ಸಿರಾಜ್ ಪಡಾ (Irfan)  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.

18 ವರ್ಷಗಳ ಜೈಲು ವಾಸ, ಗುಜರಾತ್ ಸರ್ಕಾರದ ನಿಲುವು
ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದ ಅವರ ಪರ ವಕೀಲರು, ಪಡಾ ಅವರು ಈಗಾಗಲೇ 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂದು ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ ಸರ್ಕಾರದ ಪರ ವಕೀಲರು ಈ ಅರ್ಜಿಗೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.

ಕೇವಲ ವೈದ್ಯಕೀಯ ಕಾರಣಕ್ಕೆ ಶಿಕ್ಷೆ ಅಮಾನತು
ಪ್ರಕರಣದ ಸದ್ಯದ ಸನ್ನಿವೇಶ ಮತ್ತು ವಾಸ್ತವಿಕ ಅಂಶಗಳನ್ನು ಗಮನಿಸಿ, ಅರ್ಜಿದಾರರಿಗೆ ಕೇವಲ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಮಾತ್ರ ಶಿಕ್ಷೆಯನ್ನು ಅಮಾನತುಗೊಳಿಸಲು ನಾವು ಒಲವು ತೋರಿದ್ದೇವೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಗೋಧ್ರಾ ಪ್ರಕರಣದ ಹಿನ್ನೆಲೆ – ನ್ಯಾಯಾಲಯದ ಹಾದಿ
2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಮಂದಿ ಸಾವನ್ನಪ್ಪಿದ್ದು, ಈ ದುರಂತದ ಬಳಿಕ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಮಾರ್ಚ್‌ನಲ್ಲಿ ಬಂಧಿತರಾಗಿದ್ದ ಇರ್ಫಾನ್ ಸಿರಾಜ್ ಪಡಾ ಅವರಿಗೆ ಹಾಗೂ ಇತರ ಹಲವರಿಗೆ 2011ರ ಮಾರ್ಚ್‌ನಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಬಳಿಕ ಈ ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಯನ್ನು 2017ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಇನ್ನೂ ಬಾಕಿ ಇರುವಂತೆಯೇ, ಅನಾರೋಗ್ಯದ ಆಧಾರದ ಮೇಲೆ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ನೀಡಿದೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು