ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯರೂ ಸೇರಿ 13 ಮಂದಿ ಸಾವುಭಾವಪುಂಜ : ಮಾತೆಂಬುದು ಜ್ಯೋತಿರ್ಲಿಂಗತಿರುಪ್ಪರಂಕುಂದ್ರಂ ಬೆಟ್ಟದ ದೀಪ ವಿವಾದ: ಸುಪ್ರೀಂ ಕೋರ್ಟ್ ಆದೇಶ, ತಮಿಳುನಾಡು ಸರ್ಕಾರದ ವಿರೋಧ; ಧರ್ಮ ಮತ್ತು ಸಂವಿಧಾನದ ನಡುವೆ ಸಂಘರ್ಷರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ (AI) ತಂತ್ರಜ್ಞಾನದ ಬಲ – ಸಿಎಸ್ ಡಾ. ಶಾಲಿನಿ ರಜನೀಶ್ಜಿಲ್ಲಾಧಿಕಾರಿ ವಿರುದ್ಧದ ಆರೋಪ – ಪೊಲೀಸ್ ನೋಟಿಸ್‌ಗೆ ಡೋಂಟ್‌ ಕೇರ್ ಎಂದ ಕುಮಾರಸ್ವಾಮಿಬಾಂಗ್ಲಾದೇಶಕ್ಕೆ ಶೇಖ್ ಹಸೀನಾ: ಭಾರತದಿಂದ ವಾಪಸ್; ರಾಷ್ಟ್ರೀಯ ವಿಮಾನವೇ ಬೇಕೆಂಬ ಬೇಡಿಕೆ; ಬಂಧನಕ್ಕೆ ಸಿದ್ಧವಾಗಿರುವ ಸರ್ಕಾರ!ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್‌28 ಎಸೆತಗಳಲ್ಲಿ ಶತಕ, 15ನೇ ವಯಸ್ಸಿನಲ್ಲೇ ವಿಶ್ವದಾಖಲೆ: ವೈಭವ್ ಸೂರ್ಯವಂಶಿ ಎಂಬ ಕ್ರಿಕೆಟ್ ವಿಸ್ಮಯ!ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌ನ.26ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆ; ಮುಕ್ತ ವ್ಯಾಪಾರ ಒಪ್ಪಂದ ರದ್ದತಿಗೆ ಆಗ್ರಹಇಸ್ರೇಲ್ ದೇಶದಿಂದ ಶಸ್ತ್ರಾಸ್ತ್ರ ಖರೀದಿಗೆ ರಾಹುಲ್ ಗಾಂಧಿ ಬೆಂಬಲ: ಎಡಪಕ್ಷಗಳ ನಾಯಕರಿಂದ ಟೀಕೆಅಪ್ಪನನ್ನು ಕೊಲ್ಲಲೆಂದೇ ಸೆಕ್ಯುರಿಟಿ ತೆಗೆದುಹಾಕಲಾಗಿತ್ತು: ಅಂದಿನ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪಪಾಲಕ್ಕಾಡ್ ಶಾಲೆಯಲ್ಲಿ ಸಹಪಾಠಿಯಿಂದ ಗುಂಡಿನ ದಾಳಿ: 9ನೇ ತರಗತಿ ವಿದ್ಯಾರ್ಥಿಗೆ ಗಾಯ; ವಿದ್ಯಾರ್ಥಿ ವಶಕ್ಕೆಎರಡು ಮಕ್ಕಳಿರುವ ಹೆಂಗಸನ್ನು ಮದುವೆಯಾಗುವುದಾಗಿ ಹಟ ಹಿಡಿದ ಮಗನನ್ನು ಕೊಂದು ಮುಗಿಸಿದ ತಾಯಿಬೆಂಗಳೂರಿನ ಇತಿಹಾಸ, ಕಲೆ, ಸಾಹಿತ್ಯಕ್ಕೆ ಹೊಸ ವೇದಿಕೆ: ಡಿಸೆಂಬರ್ 4ರಿಂದ 10 ದಿನಗಳ ಬೆಂಗಳೂರು ಜಾತ್ರೆಕೆಪಿಎಸ್‌ಸಿ ನೇಮಕಾತಿ ಹಗರಣ: 384 ಕೆಎಎಸ್ ಅಧಿಕಾರಿಗಳ ಆಯ್ಕೆಯ ಮೇಲೂ ಅನುಮಾನದ ನೆರಳು; ತನಿಖೆಗೆ ಹೈಕೋರ್ಟ್ ಆದೇಶಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್ ಭರವಸೆಹಿಜಾಬ್ ನಿಯಮಕ್ಕೆ ಸೆಡ್ಡು ಹೊಡೆದ ಗಾಯಕಿಗೆ 74 ಚಡಿಯೇಟು; ಇರಾನ್‌ನಲ್ಲಿ ಕಠಿಣ ಶಿಕ್ಷೆಲಾಭ ಹೆಚ್ಚುತ್ತಿದೆ, ಉದ್ಯೋಗ ಮತ್ತು ವೇತನ ಏಕೆ ಹೆಚ್ಚುತ್ತಿಲ್ಲ? ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ ನೇರ ಪ್ರಶ್ನೆಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿ

ಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯರೂ ಸೇರಿ 13 ಮಂದಿ ಸಾವು

PPeepal Media Desk

Peepal Media Desk ವಿದೇಶ

• 1 ನಿಮಿಷದ ಓದು

ಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯರೂ ಸೇರಿ 13 ಮಂದಿ ಸಾವು

ಬಸ್‌ಗೆ ಟ್ರಕ್ ಡಿಕ್ಕಿ; 14 ಮಂದಿಗೆ ಗಾಯ, ಭಾರತೀಯರ ನೆರವಿಗೆ ರಾಯಭಾರ ಕಚೇರಿಯಿಂದ ಸಹಾಯವಾಣಿ ಬಿಡುಗಡೆ

ರಾಸ್ ಅಲ್ ಖೈಮಾ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಸ್ ಅಲ್ ಖೈಮಾದಲ್ಲಿ ಪ್ರಯಾಣಿಕರ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಭಾರತೀಯ ಪ್ರಜೆಗಳೂ ಸೇರಿರುವುದಾಗಿ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.

ಮಂಗಳವಾರ ಅಲ್ ವತನ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಯಾಂತ್ರಿಕ ದೋಷದಿಂದಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಪ್ರಯಾಣಿಕರನ್ನು ಹೊತ್ತ ಬಸ್ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅಪಘಾತದ ತೀವ್ರತೆಗೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಅಪಘಾತದ ಸಂದರ್ಭದಲ್ಲಿ ಬಸ್‌ನಲ್ಲಿ ಒಟ್ಟು 41 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯ ಆರಂಭದಲ್ಲಿ 11 ಮಂದಿ ಮೃತಪಟ್ಟಿರುವುದಾಗಿ ಯುಎಇ ಗೃಹ ಸಚಿವಾಲಯ ಮಾಹಿತಿ ನೀಡಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗಾಯಾಳುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಅಪಘಾತದಲ್ಲಿ ಮೃತಪಟ್ಟ ಭಾರತೀಯರ ಕುಟುಂಬಸ್ಥರನ್ನು ಸಂಪರ್ಕಿಸಿರುವ ಭಾರತೀಯ ರಾಯಭಾರ ಕಚೇರಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ನೆರವು ಒದಗಿಸುತ್ತಿದೆ. ಮೃತ ಭಾರತೀಯರ ನಿಖರ ಸಂಖ್ಯೆ ಹಾಗೂ ಗಾಯಗೊಂಡವರಲ್ಲಿ ಭಾರತೀಯರ ಸಂಖ್ಯೆ ಎಷ್ಟು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ಮತ್ತು ನೆರವು ನೀಡುವ ಉದ್ದೇಶದಿಂದ ರಾಯಭಾರ ಕಚೇರಿ 24 ಗಂಟೆಗಳ ಸಹಾಯವಾಣಿ ಆರಂಭಿಸಿದೆ.

ಸಹಾಯವಾಣಿ ಸಂಖ್ಯೆ: 800-46342

ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮೃತಪಟ್ಟವರ ರಾಷ್ಟ್ರೀಯತೆ ಹಾಗೂ ಗಾಯಾಳುಗಳ ಸಂಪೂರ್ಣ ವಿವರಗಳನ್ನು ಸ್ಥಳೀಯ ಅಧಿಕಾರಿಗಳು ಇನ್ನಷ್ಟೇ ಪ್ರಕಟಿಸಬೇಕಿದೆ.

ವಿಷಯಗಳು: #accident #uae
PPeepal Media Desk

Peepal Media Desk

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು