ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಆಸ್ತಿಗಾಗಿ ಅಕ್ಕನನ್ನೇ ಕೊಂದ ವಕೀಲ; ಬೆಂಗಳೂರಿನಲ್ಲಿ ಮಕ್ಕಳ ಎದುರೇ ಮಹಿಳೆಯ ಹತ್ಯೆ, ಆರೋಪಿ ಪರಾರಿನಂದಿನಿ ಮೊಸರಿನ ಬೆಲೆ ಕೆ.ಜಿಗೆ ₹2 ಇಳಿಕೆ; ನವೆಂಬರ್ 29ರಿಂದ ಹೊಸ ದರ ಜಾರಿಬಸವ ಸಂಸ್ಕೃತಿಯ ಮೇಲಿನ ದಾಳಿಗೆ ಖಂಡನೆ; ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ನೀಡಿದ ಮಠಾಧಿಪತಿಗಳುಸಾಕಾಣಿಕೆ ದರ ಕೆ.ಜಿಗೆ ₹20ಕ್ಕೆ ಹೆಚ್ಚಿಸಿ; ಕಂಪನಿಗಳ ಶೋಷಣೆ ತಡೆಯಿರಿ: ಕೋಳಿ ಸಾಕಾಣಿಕೆದಾರರಿಂದ ಮುಖ್ಯಮಂತ್ರಿಗೆ ಮನವಿಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಆರಂಭ: 1,000ಕ್ಕೂ ಹೆಚ್ಚು ಉದ್ಯೋಗಿಗಳ ನೇಮಕಕ್ಕೆ ಯೋಜನೆ; ‘ಬಿಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಬಲಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ವ್ಯಕ್ತಿ: ಒಂದು ತಿಂಗಳ ಬಳಿಕ ಸ್ವಗ್ರಾಮಕ್ಕೆ ಮೃತದೇಹ ರವಾನೆ2016ರ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆಎಸ್‌ಐಆರ್‌ ವಿವಾದ: ತಂದೆಯ ಹೆಸರು ಮತದಾರರ ಪಟ್ಟಿಯಿಂದ ತೆಗೆದಿದ್ದಕ್ಕೆ ಎರಡೂವರೆ ತಿಂಗಳ ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತಕ್ಕೆ ಶೇ.17ರಷ್ಟು ಸುಂಕ! ಒಪ್ಪಂದ ವಿಫಲವಾದರೆ ಶೇ.25ಕ್ಕೆ ಏರಿಕೆ: ಅಮೆರಿಕದ ಪ್ರಸ್ತಾವನೆಜಾರ್ಖಂಡ್‌ | ಎಸ್‌ಐಆರ್‌ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಲು ವಿಧಾನಸಭೆ ನಿರ್ಣಯವಾಲ್ಮೀಕಿ ನಿಗಮ ಪ್ರಕರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್; ಆರೋಪಿಗಳ ಪಟ್ಟಿಯಿಂದ ಹೆಸರು ಕೈಬಿಟ್ಟು ಸಾಕ್ಷಿಯಾಗಿ ಸೇರ್ಪಡೆ!ರಾಹುಲ್ ಗಾಂಧಿ ವಿರುದ್ಧದ ತನಿಖೆ ಆದೇಶಕ್ಕೆ ಸುಪ್ರೀಂಕೋರ್ಟ್ ಬ್ರೇಕ್; ಮರು ವಿಚಾರಣೆಗೆ ಹೈಕೋರ್ಟ್‌ಗೆ ಸೂಚನೆಪುಣೆ ನ್ಯಾಯಾಲಯದ ಹೊರಗೆ ಕೊಲೆ ಆರೋಪಿ ಮೇಲೆ ದಾಳಿ: ಕುಡುಗೋಲುಗಳಿಂದ ಹಲ್ಲೆ, ಗುಂಡಿನ ದಾಳಿಬೆಂಗಳೂರು: ₹5.72 ಕೋಟಿ ಮೌಲ್ಯದ 5.72 ಕೆ.ಜಿ. ಎಂಡಿಎಂಎ ವಶ; ಅಂತಾರಾಜ್ಯ ಮಾದಕವಸ್ತು ಜಾಲ ಭೇದಿಸಿದ ಪೊಲೀಸರುನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಪರದಾಟ: ನಮ್ಮ ಕ್ಲಿನಿಕ್ ವೈದ್ಯರು, ಸಿಬ್ಬಂದಿಯ ಗೋಳು ಕೇಳುವವರ್ಯಾರು?ಕೇರಳ ಮತ್ತು ಮಲಯಾಳಿಗಳ ವಿರುದ್ಧ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ: ಕೊಡಗಿನಲ್ಲಿ ಪ್ರತಿಭಟನೆಯ ಎಚ್ಚರಿಕೆಅಕ್ಕಾ ಕೇಳವ್ವ: ಶರಣೆ ಲಿಂಗಮ್ಮನ ಸಂಸಾರವನರಿವ ಬೋಧೆಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್; ಜಾಮೀನು ರದ್ದು, ಎರಡು ವಾರಗಳಲ್ಲಿ ಶರಣಾಗತಿಗೆ ಸೂಚನೆಒಂದೇ ದಿನದಲ್ಲಿ 4.16 ಲಕ್ಷ ಮತದಾರರ ಅರ್ಜಿ; ಒಂದೇ ವಿಳಾಸದಿಂದ 44 ಅರ್ಜಿಗಳು: ಉತ್ತರ ಪ್ರದೇಶದಲ್ಲಿ ಮತದಾರರ ನೋಂದಣಿಯಲ್ಲಿ ಅಸಾಮಾನ್ಯ ಏರಿಕೆ ಪತ್ತೆಸ್ವತಂತ್ರ ಭಾರದ್ವಾಜ್ ವಿರುದ್ಧ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ ಹಾಕಿದ ಆರೋಪ: ದೆಹಲಿ ಪೊಲೀಸರಿಂದ ವರದಿ ಕೇಳಿದ ನ್ಯಾಯಾಲಯ

ಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ವ್ಯಕ್ತಿ: ಒಂದು ತಿಂಗಳ ಬಳಿಕ ಸ್ವಗ್ರಾಮಕ್ಕೆ ಮೃತದೇಹ ರವಾನೆ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ವ್ಯಕ್ತಿ: ಒಂದು ತಿಂಗಳ ಬಳಿಕ ಸ್ವಗ್ರಾಮಕ್ಕೆ ಮೃತದೇಹ ರವಾನೆ

ಮಂಗಳೂರು: ಉದ್ಯೋಗ ನಿಮಿತ್ತ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ 41 ವರ್ಷದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ಒಂದು ತಿಂಗಳ ಹಿಂದೆ ಕುಟುಂಬದ ಸಂಪರ್ಕದಿಂದ ದೂರವಾಗಿದ್ದ ಅವರ ಮೃತದೇಹ ಇದೀಗ ತಾಯ್ನಾಡಿಗೆ ತಲುಪಿದ್ದು, ಸಾವಿನ ನಿಖರ ಕಾರಣ ತಿಳಿಯದಿರುವುದು ಕುಟುಂಬಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಂಗಳೂರಿನ ಶಕ್ತಿನಗರ ನಿವಾಸಿ ಶದ್ರಾಕ್ ಎಮ್ಯಾನುಯೆಲ್ (41) ಮೃತಪಟ್ಟವರು. ಇಸ್ರೇಲ್‌ನ ನೊಫ್ ಹಗಲಿಲ್ ಪ್ರದೇಶದಲ್ಲಿರುವ UCT Liquid Solutions ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು ಅಕ್ಟೋಬರ್ 16ರಂದು ಕೊನೆಯ ಬಾರಿ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದರು. ಅಂದು ರಾತ್ರಿ 8.49ಕ್ಕೆ ಪತ್ನಿ ಡೈಸಿ ಎಮ್ಯಾನುಯೆಲ್ ಅವರಿಗೆ ಸಂದೇಶ ಕಳುಹಿಸಿದ್ದ ಅವರು, ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಪತಿಯ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಪತ್ನಿ ಹಾಗೂ ಕುಟುಂಬಸ್ಥರು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ನೆರವು ಕೋರಿದ್ದರು. ಅಕ್ಟೋಬರ್ 21ರಂದು ಅಧಿಕೃತವಾಗಿ ಇಮೇಲ್ ಮೂಲಕ ದೂರು ಸಲ್ಲಿಸಲಾಗಿತ್ತು. ಅಲ್ಲದೆ, ಮಂಗಳೂರು ಪೊಲೀಸ್ ಆಯುಕ್ತರು, ಸಂಸದ ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿ ಶದ್ರಾಕ್ ಅವರನ್ನು ಪತ್ತೆಹಚ್ಚುವಂತೆ ಒತ್ತಾಯಿಸಿದ್ದರು.

ಈ ನಡುವೆ ನವೆಂಬರ್ 4ರಂದು ಇಸ್ರೇಲ್‌ನ ಬೀರ್‌ಶೆಬಾದಲ್ಲಿ ಅವರ ಮೃತದೇಹ ಪತ್ತೆಯಾಗಿರುವ ಮಾಹಿತಿ ಕುಟುಂಬಕ್ಕೆ ಲಭಿಸಿತ್ತು. ಅಗತ್ಯ ಕಾನೂನು ಪ್ರಕ್ರಿಯೆಗಳ ಬಳಿಕ ನವೆಂಬರ್ 24ರ ರಾತ್ರಿ ಮೃತದೇಹ ಮಂಗಳೂರಿಗೆ ತರಲಾಗಿದೆ.

ಮೃತದೇಹವನ್ನು ನವೆಂಬರ್ 25ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಗೋರಿಗುಡ್ಡದ ಸಿಎಸ್‌ಐ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಆದರೆ, ಶದ್ರಾಕ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ರೇಲ್ ಪೊಲೀಸರು ಸಾವಿನ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ. ಸಾವಿನ ಕಾರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಛಾಯಾಚಿತ್ರಗಳನ್ನು ಒದಗಿಸಿಲ್ಲ ಎಂದು ಪತ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಭಾರತೀಯರೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಪ್ರಕರಣದಲ್ಲಿ ಸಾವಿನ ನೈಜ ಕಾರಣ ಬಹಿರಂಗವಾಗಬೇಕಿದೆ. ಇಸ್ರೇಲ್‌ನ ತನಿಖಾ ಸಂಸ್ಥೆಗಳು ಹಾಗೂ ಭಾರತೀಯ ರಾಯಭಾರ ಕಚೇರಿ ಈ ವಿಚಾರದಲ್ಲಿ ಅಗತ್ಯ ಮಾಹಿತಿ ಒದಗಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು