ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಕ್ಕಾ ಕೇಳವ್ವ: ಶರಣೆ ಲಿಂಗಮ್ಮನ ಸಂಸಾರವನರಿವ ಬೋಧೆಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್; ಜಾಮೀನು ರದ್ದು, ಎರಡು ವಾರಗಳಲ್ಲಿ ಶರಣಾಗತಿಗೆ ಸೂಚನೆಒಂದೇ ದಿನದಲ್ಲಿ 4.16 ಲಕ್ಷ ಮತದಾರರ ಅರ್ಜಿ; ಒಂದೇ ವಿಳಾಸದಿಂದ 44 ಅರ್ಜಿಗಳು: ಉತ್ತರ ಪ್ರದೇಶದಲ್ಲಿ ಮತದಾರರ ನೋಂದಣಿಯಲ್ಲಿ ಅಸಾಮಾನ್ಯ ಏರಿಕೆ ಪತ್ತೆಸ್ವತಂತ್ರ ಭಾರದ್ವಾಜ್ ವಿರುದ್ಧ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ ಹಾಕಿದ ಆರೋಪ: ದೆಹಲಿ ಪೊಲೀಸರಿಂದ ವರದಿ ಕೇಳಿದ ನ್ಯಾಯಾಲಯ‘‌ಕೃಷ್ಣನ ಕುರಿತ ಹೇಳಿಕೆಯಿಂದ ನನಗೆ ಬಹಳ ನೋವಾಗಿತ್ತು…’: ಧೀರೇಂದ್ರ ಶಾಸ್ತ್ರಿ ನನ್ನ ತಮ್ಮನಿದ್ದಂತೆ – ಬಾಬಾ ರಾಮದೇವ್ಕಬ್ಬನ್ ಪಾರ್ಕ್‌ನಲ್ಲಿ ಇಂದಿನಿಂದ 13 ದಿನಗಳ ಪುಷ್ಪ ಪ್ರದರ್ಶನ; 15 ಲಕ್ಷಕ್ಕೂ ಅಧಿಕ ಹೂವುಗಳ ಆಕರ್ಷಣೆಮೋದಿ ಸರ್ಕಾರ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡಿದೆ: ಹ್ಯೂಮನ್ ರೈಟ್ಸ್ ವಾಚ್ ವರದಿಸಾಮಾಜಿಕ ಜಾಲತಾಣಗಳ ರೀಲ್ಸ್‌, ಕಿರು ವಿಡಿಯೊಗಳಿಗೆ ದಿನಾಂಕ ಮತ್ತು ಎಐ ಲೇಬಲ್ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಉದ್ಯಮಿಗಳ ಸಂಘದಿಂದ ಒತ್ತಾಯಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ರಮ್ಯಾ ಸಾಥ್; ಸರ್ಕಾರದ ಭರವಸೆ ನೆನಪಿಸಿದ ಮಾಜಿ ಸಂಸದೆಒಂದು ಬ್ಯಾಚ್‌ನ ನೀರಿನ ಮಾದರಿಯನ್ನಷ್ಟೇ ಪರೀಕ್ಷೆ ಮಾಡಿದ್ದು: ಬಿಸ್ಲೇರಿ ನೀರು ಸುರಕ್ಷಿತವೆಂದು ಸ್ಪಷ್ಟಪಡಿಸಿದ ಎಫ್‌ಎಸ್‌ಎಸ್‌ಎಐ₹3.5 ಕೋಟಿ ಲಂಚಕ್ಕೆ ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಮೊಬೈಲ್‌ ವಶಕ್ಕೆ ಪಡೆದ ಇಡಿಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಭದ್ರತೆ ಹೆಚ್ಚಳಗುರುನಾನಕ್ ಜಯಂತಿ: ಪಾಕಿಸ್ತಾನದ ನಂಕಾನಾ ಸಾಹಿಬ್‌ನಲ್ಲಿ ಸಾವಿರಾರು ಭಾರತೀಯ ಸಿಖ್ ಭಕ್ತರ ಸಂಗಮಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯರೂ ಸೇರಿ 13 ಮಂದಿ ಸಾವುಭಾವಪುಂಜ : ಮಾತೆಂಬುದು ಜ್ಯೋತಿರ್ಲಿಂಗತಿರುಪ್ಪರಂಕುಂದ್ರಂ ಬೆಟ್ಟದ ದೀಪ ವಿವಾದ: ಸುಪ್ರೀಂ ಕೋರ್ಟ್ ಆದೇಶ, ತಮಿಳುನಾಡು ಸರ್ಕಾರದ ವಿರೋಧ; ಧರ್ಮ ಮತ್ತು ಸಂವಿಧಾನದ ನಡುವೆ ಸಂಘರ್ಷರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ (AI) ತಂತ್ರಜ್ಞಾನದ ಬಲ – ಸಿಎಸ್ ಡಾ. ಶಾಲಿನಿ ರಜನೀಶ್ಜಿಲ್ಲಾಧಿಕಾರಿ ವಿರುದ್ಧದ ಆರೋಪ – ಪೊಲೀಸ್ ನೋಟಿಸ್‌ಗೆ ಡೋಂಟ್‌ ಕೇರ್ ಎಂದ ಕುಮಾರಸ್ವಾಮಿಬಾಂಗ್ಲಾದೇಶಕ್ಕೆ ಶೇಖ್ ಹಸೀನಾ: ಭಾರತದಿಂದ ವಾಪಸ್; ರಾಷ್ಟ್ರೀಯ ವಿಮಾನವೇ ಬೇಕೆಂಬ ಬೇಡಿಕೆ; ಬಂಧನಕ್ಕೆ ಸಿದ್ಧವಾಗಿರುವ ಸರ್ಕಾರ!ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್‌

ಅಕ್ಕಾ ಕೇಳವ್ವ: ಶರಣೆ ಲಿಂಗಮ್ಮನ ಸಂಸಾರವನರಿವ ಬೋಧೆ

PPeepal Media Desk

Peepal Media Desk ಅಂಕಣ

• 4 ನಿಮಿಷದ ಓದು

ಅಕ್ಕಾ ಕೇಳವ್ವ: ಶರಣೆ ಲಿಂಗಮ್ಮನ ಸಂಸಾರವನರಿವ ಬೋಧೆ

“..12 ನೇ ಶತಮಾನದ ಶಿವಶರಣೆಯರ ಸಾಧನೆ ಎಂದರೆ ಅದು ಅನುಭಾವದಲ್ಲಿಯೇ ಮಹಾ ಬೆಳಗನು ಕಂಡಂತಹ ಭಕ್ತಿಯ ಅನುಭೂತಿ, ಇಂತ ಭಕ್ತಿಯಿಂದಲೇ “ಶರಣ ಸತಿ ಲಿಂಗ ಪತಿ” ಎಂಬ ಅಧ್ಯಾತ್ಮದ ಸೂತ್ರದಲ್ಲಿ ಸಾಧನೆಯ ಸಾರವನ್ನು ತಿಳಿಸಿದ ಶಿವಶರಣೆ ಲಿಂಗಮ್ಮ..” ಲೇಖಕಿ ಲಲಿತಾ ಹೊಸಪ್ಯಾಟಿ ಅವರ ಬರಹದಲ್ಲಿ

ಲಿಂಗಮ್ಮ ತಾಯಿಯ ಅನುಭಾವದ ಮಾತುಗಳೆಂದರೆ ವಚನಗಳೆಂದರೆ ಅವು ಜ್ಞಾನವನ್ನು ಅಭಿವ್ಯಕ್ತಿಗೊಳಿಸಿದ ಚೆನ್ನುಡಿಗಳು. ಹೀಗಾಗಿಯೇ ಅರುಹನ್ನು ಕಂಡವರಿಗೆ ಗುರುವಿನ ಹಂಗಿಲ್ಲವೆಂದು ಅರಿವೇ ಗುರುವಾಗುವ ಪರಿ ತಿಳಿಸಿದ್ದಾಳೆ. ಲಿಂಗಮ್ಮ ಭವವನ್ನು ಮೀರಿ ಬಯಲಿಗೆ ಬಯಲಾದ ಅನುಭಾವಿಗೆ ಯಾವ ಲೋಕದ ಹಂಗು ಬೇಕಿಲ್ಲವೆಂದು ಬಿತ್ತರಿಸಿದ ಶಿವಶರಣೆ, ಭಾವವನ್ನು ಭಾಷೆಯಲ್ಲಿ ಹಿಡಿದಿಟ್ಟ ಪರಿಯೇ ಅಪೂರ್ವ ಬೋಧೆಯದ್ದು.

ಹಡಪದ ಅಪ್ಪಣ್ಣನೇ ಎನ್ನ ಕರಸ್ಥಲಕ್ಕೆ ಬಂದು ಲಿಂಗವಾಗಿ ನೆಲೆಗೊಂಡರು ಎಂದು ತನ್ನ ವಚನದಲ್ಲಿ ತಿಳಿಸಿದ ಲಿಂಗಮ್ಮನ ಆಧ್ಯಾತ್ಮಿಕ ಭಾವವೇ ತನ್ನ ಪತಿಯನ್ನು ಭಕ್ತಿಯಿಂದ ಕಂಡುದು. ಸಂಸಾರದ ಸಾರವನ್ನು ಸ್ವಾರ್ಥ

ಸ್ವಂತಿಕೆಗಳಾಚೆ ಕಂಡುದುದು. ಲಿಂಗ ರೂಪವಾಗಿ ತನ್ನ ಅರಿವಿಗೂ ಅವನೇ ಗುರುವಾಗಿ ಕುರುಹಾಗಿ ಕಂಡ ಪರಿಯೇ ಸಾದೃಶ್ಯವಾದದ್ದು. ಪತಿಯಲ್ಲಿ ಕಂಡ ಜ್ಞಾನದ ಅಗಾಧತೆ, ಅವಳು ಪತಿಯ ಮೇಲಿಟ್ಟಿರುವ ನಂಬಿಕೆಯನ್ನು ಸ್ಪಷ್ಟಪಡಿಸುತ್ತದೆ. ಹಡಪದ ಅಪ್ಪಣ್ಣನವರ ಪತ್ನಿಯಾಗಿ ಅವಳದೊಂದು ವಚನ –

ಮುಳುಗಿ ಹೋದವಳ ತೆಗೆದುಕೊಂಡು ನಿಮ್ಮ ತೊತ್ತಿನ ಪಡಿದೊತ್ತಿನ ಮಗಳೆಂದು ರಕ್ಷಣೆಯ ಮಾಡಿದ ಶಿಶುವಾದ ಕಾರಣ ಹಡಪದ ಅಪ್ಪಣೆನೇ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡರು

ಶರಣೆ ಲಿಂಗಮ್ಮನು ತನ್ನ ಅರಿವೇ ಆದ ಬೋಧೆಯಲ್ಲಿ ಪತಿ ತನ್ನ ಕರಸ್ಥಳಕ್ಕೆ ಬಂದು ಲಿಂಗವಾಗಿ ನಿಂದುದನ್ನು ಅರಹುತ್ತಾಳೆ. ಸ್ತ್ರೀಯರಿಗೆ ಯಾವುದೇ ಹಕ್ಕಿಲ್ಲ. ಎನ್ನುತ್ತಲೇ ಕೌಟುಂಬಿಕ, ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳಿಂದ ದೂರವಿಟ್ಟು ಅವಳನ್ನು ದಾಸ್ಯತ್ವಕೆ ದೂಡಿ ಸಮಾನತೆಯಿಂದ ದೂರವಿರಿಸಿದ ಸಂದರ್ಭದಲ್ಲಿ ಹೆಣ್ಣು ಗಂಡು ಸಮಾನರೆಂದು ಸ್ತ್ರೀ ಸಮಾನತೆಯನ್ನು ಕಲ್ಪಿಸಿಕೊಟ್ಟ ಅಣ್ಣ ಬಸವಣ್ಣನವರಂತೆ, ತನ್ನನ್ನು ತನ್ನ ನಿಲುವನ್ನು ಎತ್ತರಕ್ಕೆ ಏರಿಸಿದವರು ತನ್ನ ಪತಿ ಎಂದು ಹೇಳಿದ ಲಿಂಗಮ್ಮನ ಸಿದ್ಧಾಂತವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದಾಗ, ಇಬ್ಬರಲ್ಲಿಯ ಸರ್ವಾರ್ಪಣೆಯ ಭಾವ ಎದ್ದು ಕಾಣುತ್ತದೆ. ಬೆಡಗಿನ ವಚನಗಳಂತೂ ಕನ್ನಡ ಸಾಹಿತ್ಯಕ್ಕೂ, ಮಹಿಳೆಯರ ಆತ್ಮನ್ನೋತಿಗೂ ಜೀವನವನ್ನು ಎದುರಿಸಿ ಮುನ್ನಡೆಯುವ ಸಿದ್ಧಾಂತಕ್ಕೂ, ಪ್ರತಿ ಹಂತದಲ್ಲೂ, ದಾರಿದೀಪವಾಗಿವೆ. ಅವಳ ಬೋಧೆ ಮನಮನೆಯನ್ನು ಬೆಳಗುವಂತದ್ದು. ಮಹಿಳೆಯರಲ್ಲಿ ಎದ್ದು ನಿಲ್ಲುವ ಧೈರ್ಯವನ್ನು ಜ್ಞಾನವನ್ನು ನೀಡುತ್ತದೆ ಅಷ್ಟೇ ಅಲ್ಲ ಒಳಹೊರಗಿನ ಶುದ್ಧತೆಯನ್ನು ಅರಿಷಡ್ವರ್ಗ ದಾಟಿ ನಿರಾಳವಾಗುವನ್ನು ಮನಗಣಿಸುತ್ತದೆ.

ಶರಣೆ ಲಿಂಗಮ್ಮ ರಚಿಸಿದ ವಚನಗಳನ್ನು ಬೋಧೆಗಳೆಂದೇ ಕರೆಯುತ್ತೇವೆ. ನಡೆನುಡಿ ಒಂದಾಗಿಸಿಕೊಳ್ಳಲು ಲಿಂಗಮ್ಮನ ವಚನಗಳ ಬೋಧೆ ಅರಿತರೆ ಅಂತರಂಗ, ಬಹಿರಂಗವು ಶುದ್ಧವಾಗಿರುತ್ತದೆ. ಯಾವಾಗ ಒಳಗಣ ಹೊರಗಣ ಶುದ್ಧವಾಗುವುದೋ ಆಗ ನಾವು ನಂಬಿದ ಲಿಂಗವನ್ನು ಕಾಣಲು, ಅನುಸಂಧಾನವಾಗಲು ಸಾಧ್ಯ ಎನ್ನುವ ಲಿಂಗಮ್ಮನ ಬೋಧೆ ಕಾಲಕಾಲಕ್ಕೂ ವೇದ್ಯ.

ಲಿಂಗಮ್ಮನ ಬೋಧೆ ಎಂದರೆ- ಕಿಡಿ ಕಿಡಿ ಎಂದು ಕೆಂಡದಂತೆ ಕುಣಿಸುವ ಸ್ಟೇಚ್ಛೆಯ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ದೀಪ್ತಿಯಾಗಿದೆ. ಇಂದ್ರಿಯಗಳ ಪ್ರಚೋದನೆಗಳನ್ನು ಹತ್ತಿಕ್ಕಿಕೊಳ್ಳುವ ಶಕ್ತಿಯಾಗಿದೆ. ಕಾಮ,ಕ್ರೋಧ ಲೋಭ, ಮೋಹ ಮದ ಮತ್ಸರಗಳನ್ನು ನಿಯಂತ್ರಿಸುವುದೇ ಆಗಿದೆ. ಒಳಗೆ ತುಂಬಿಕೊಂಡ ಅರಿಷಡ್ವರ್ಗಗಳನ್ನು ಹೊರಹಾಕದ ಹೊರತು ಒಳಗೊಂದು ಬೆಳಕು ಕಾಣದು ಎನ್ನುತ್ತಾಳೆ ಲಿಂಗಮ್ಮ

ಗಂಡ ಹೆಂಡತಿ ಇಬ್ಬರದು ಏಕ ವೃತ, ಏಕ ಭಾಷೆ, ಏಕ ಗುಣವಾದಾಗಲೆ ಅದು ದಾಂಪತ್ಯಯೋಗವೆನಿಸುತ್ತದೆ ಎಂಬ ಬೋಧೆ ದಾಂಪತ್ಯ ಜೀವನ ಸ್ವರೂಪಕ್ಕೆ,

ಅದೊಂದು ಯೋಗ ಸಂಧಾನ. ಅಲ್ಲಿ ಪರಸ್ಪರ ಪತಿಗೆ ಸತಿ: ಸತಿಗೆ ಪತಿ ನಿಷ್ಠೆಯಲ್ಲಿ ನೆಲಗೊಂಡ ಬದುಕು ಕಟ್ಟಿಕೊಳ್ಳಬೇಕು. ಈರ್ವರಲ್ಲೂ ಪರಸ್ಪರ ಸ್ನೇಹ ಹೊಂಗಿರಣದ ಸೂತ್ರದಂತೆ ಇಹಪರ ಎರಡರಲ್ಲೂ ಸಮರಸ ರೂಪದಲ್ಲಿರಬೇಕು. ಬದುಕಿನ ಜಂಜಡದಲ್ಲಿ ಸಾಂಸಾರಿಕ ತಾಪತ್ರಯದಲ್ಲಿ ಕಷ್ಟಗಳು ಬಂದಾಗ ನೋವುಗಳು ಎದುರಾದಾಗ, ಸಣ್ಣ ಹುಲ್ಲುಕಡ್ಡಿಯೂ ಹಾವಾಗಿ ಹರಿದಾಡಿದಂತೆ ಭಾಸವಾಗುತ್ತದೆ. ಎದುರಿಗಿನ ಒಂದು ಸಣ್ಣ ರವದಿಯು ಬೆಟ್ಟವಾಗಿ ಅಡ್ಡಗಟ್ಟಿದಂತೆ ಅನಿಸುತ್ತದೆ. ७ ಸಂದರ್ಭದಲ್ಲಿ ಇಬ್ಬರು ಪರಸ್ಪರ ಕಾರ್ಯಕಾರಣಗಳನ್ನೇ ಮುಂದಿಟ್ಟುಕೊಂಡು ದೋಷಾರೋಪಣೆ ಮಾಡದೆ, ನಿಜವನ್ನು ಅರಿತು, ಅರಿವಿನಲ್ಲಿ ಬೆರೆತು, ಸಮುಚ್ಚಯದಲ್ಲಿ ಪ್ರಿಯರಾಗಿ ಬದುಕುವ ರೀತಿಯನ್ನು ತಿಳಿಸುತ್ತಾಳೆ.

ಇನ್ನೂ ನೀರಾಲಂಭಿಯಾಗಿ ಬದುಕುವ ಪರಿಗೆ ಈ ವಚನವೇ ಸಾಕ್ಷ ನೀಡುತ್ತದೆ.

ಮರವನ್ನು ಏರಿದೆ ಬೇರ ಸವರಿದೆ ಕೊನೆಯ ತರಿದೆ ಬುಡವ ಕೆಡವಿದೆ ನೀರಾಲಂಬಿಯಾಗಿ ನಿಮ್ಮ ಬೆಳಗನೇ ನೋಡಿ ಸುಖಿಯಾದೆನಯ್ಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಎನ್ನುತ್ತಾ..

ಸಂಸಾರ ಎಂಬುದೊಂದು ಲೌಕಿಕದ ಮರ. ಈ ಮರವನ್ನು ಸಂಸಾರದ ಮೋಹದಿಂದ ಅಜ್ಞಾನದಲ್ಲಿ ಏರಿದೆ. ಆಗ ಮರದ ಬೇರು ಕತ್ತರಿಸಿತು. ಮರ ಬುಡಮೇಲಾಗಿ ಬೀಳುತ್ತದೆ. ಮರದ ಬುಡವೇ ಕತ್ತರಿಸಿ ಬಿದ್ದಾಗ ಆಶ್ರಯವಿಲ್ಲ ದಂತಾಗುತ್ತದೆ. ಆಗ ಯಾವುದರ ಅವಲಂಬನೆ ಬೇಕಿಲ್ಲ. ಇಂತಹ ನೀರಾವಲಂಬಿ ಬದುಕಿನಿಂದ ಬೆಳಕನ್ನು ಕಾಣಲು ಸಾಧ್ಯ. ಯಾವುದೇ ಹಂಗು ಇಲ್ಲದ ಜೀವನ ತನ್ನಷ್ಟಕ್ಕೆ ತಾನೇ ಸುಖವಾಗಿರುತ್ತದೆ ಎಂಬ ಬೋಧೆ ಅವಳದು. ಈ ಸಂಸಾರದ ಬಂಧನಗಳು, ಶೃಂಖಲೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಲೌಕಿಕದ ಮಾಯ ಮೋಹಗಳು ಬೇರೂರಿ ಬಿಟ್ಟಿರುತ್ತವೆ. ಇಂತಹ ಮೋಹದಿಂದ ಹೊರ ಬರಬೇಕಾದರೆ ಜ್ಞಾನ ನೀಡುವ, ಅರಿವು ನೀಡುವ, ಮನಸ್ಸಿನ ಚಂಚಲತೆಯನ್ನು ಕಳೆಯುವ, ಆಸೆಗಳೆಂಬ ಟೊಂಗೆಗಳನ್ನು ಸವರುವ ಶರಣಾನುಭಾವಿಗಳ ಅನುಭಾವವೇ ಬೆಳಕನ್ನು ನೀಡುವ ದಿವ್ಯಜ್ಞಾನಿಯು ತನಗೆ ದೊರೆತನೆಂದು ಅನುಭಾವವನ್ನು ಲಿಂಗಮ್ಮ ವಚನದಲ್ಲಿ ನಿವೇದಿಸುತ್ತಾಳೆ.

ನಮ್ಮಲ್ಲಿರುವ ಅಹಂಕಾರ, ಮತ್ಸರ, ಮದ, ಅಹಂ, ದುರ್ವಿಚಾರ, ದುರ್ನೀತಿಗಳನ್ನು ಬೇರು ಸಹಿತ ಕಿತ್ತೊಗೆದು ಬಾಳಬೇಕೆಂದರೆ, ಮೊದಲು ತನ್ನ ಅರಿವನ್ನು ತಾನು ಪಡೆಯಬೇಕೆಂದರೆ, ಅಂಗದ ಮೋಹವನ್ನು ತೊರೆಯಬೇಕು. ಆಸೆಗಳ ರೋಷವನ್ನು ಸುಡಬೇಕು. ಕಾಮದ ಕಳವಳವನ್ನು ತ್ಯಜಿಸಬೇಕು. ದುರ್ನಡತೆಯ ಕೆಟ್ಟತನವನ್ನು ಇನ್ನಿಲ್ಲವಾಗಿಸಬೇಕು. ಭವದ ಹಂಗನ್ನು ಕಳೆದುಕೊಂಡಾಗ ಮಾತ್ರ ಗುರುವನು ಅರಿವನ್ನು ಬೆಳಕನ್ನು ಕಾಣಲು ಸಾಧ್ಯವೆಂದು ಬೋಧಿಸುತ್ತಾಳೆ.

ಕಾಮವಿಲ್ಲ. ಕ್ರೋಧವಿಲ್ಲ ಲೋಭವಿಲ್ಲ, ಮೋಹವಿಲ್ಲ ಮದವಿಲ್ಲ ಮತ್ಸರವಿಲ್ಲ ಎಂಬ ಅಣ್ಣಗಳಿರಾ, ನೀವು ಕೇಳಿರೋ ಹೇಳಿಹೆನು, ಕಾಮವಿಲ್ಲದವಂಗೆ ಕಳವಳ ಉಂಟೆ?
ಕ್ರೋಧವಿಲ್ಲದವಂಗೆ ರೋಷವುಂಟೆ? ಲೋಭವ ಇಲ್ಲದವಂಗೆ ಆಸೆ ಉಂಟೆ?
ಮೋಹವಿಲ್ಲದವಂಗೆ ಪಾಶವುಂಟೆ ?
ಮದವಿಲ್ಲದವಂಗೆ ತಾಪಸ ಉಂಟೆ ?
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದು ನೆನೆವನೆ

ಎನ್ನುವ ಲಿಂಗಮ್ಮ ಅದಕ್ಕೆ ಕಾಮ ಕ್ರೋಧ ಮೋಹ ಮತ್ಸರ ಇದ್ದಲ್ಲಿ ಮನದ ಕಲ್ಮಶತೆ ಎಂದಿಗೂ ದೂರಾಗುವುದಿಲ್ಲ ಒಡಲಾಸೆ ಉಲ್ಬಣಿಸುತ್ತಲೇ ಇರುತ್ತದೆ.

ಗಂಡ ಹೆಂಡತಿಯರು ಲಿಂಗಾಂಗ ಸಾಮರಸ್ಯವೇ ದಾಂಪತ್ಯ ಯೋಗ ಎಂಬುದನ್ನು ಮನಗಾಣಿಸಿದ ಲಿಂಗಮ್ಮ ಜೀವಾತ್ಮ ಎಂದರೆ ಜೀವವನ್ನು ಹೊತ್ತಿರುವ ಅಂಗ, ಪರಮಾತ್ಮ ಎಂದರೇನು ದೇಹವವನ್ನು ಮೀರಿ ಬೆಳಗುವ ಶಿವಸ್ವರೂಪ. ಈ ಎರಡರ ಒಂದಾಗುವಿಕೆಯ ಇಬ್ಬರಲ್ಲೂ ಅನುಬಂಧವಾಗಬೇಕು ಎನ್ನುತ್ತಾಳೆ.

ಸಂಸಾರದೊಳಗಿರ್ದು ಸತಿಪತಿಗಳ ಸಾಧನೆ ಎಂದರೆ ಅದು ಶಿವಯೋಗದ ಸಾಧನದವು ಹೌದು. ಲೌಕಿಕದಲ್ಲಿ ಮಾನವ ಜನ್ಮದ, ಸಂಸಾರ ಸಂಸ್ಕಾರವೆಂದರೆ ನಿರ್ಮಲ ಚಿತ್ತದಿಂದಿರುವುದು, ಸಂಸಾರದಲ್ಲಿ ಇದ್ದು ಇಂದ್ರಿಯ ನಿಗ್ರಹ ಮಾಡಿಕೊಳ್ಳದಿದ್ದರೆ, ದಾಂಪತ್ಯಯೋಗ ಎನಿಸದು. ಈ ಅರಿಷಡ್ವರ್ಗ ಗೆಲ್ಲಬೇಕೆಂದರೆ, ದಾಂಪತ್ಯದಲ್ಲಿ ಯೋಗಸಿದ್ದಿ ಬೇಕು. ಎಂದು ತಿಳಿಸುತ್ತಾಳೆ. ಸಂಸಾರ ಬಂಧದಲ್ಲಿದ್ದು ಇಲ್ಲದಂತೆ, ಸಂಸಾರಬಂಧ ಮುಕ್ತವಾಗಿ ಜಾಗೃತಾವಸ್ಥೆಯನ್ನು ಹೊಂದುವಂತೆ ದಾಂಪತ್ಯ ಯೋಗದ ಕುರಿತಾದ ಬೋಧೆ.ಸತಿ ಪತಿಗಳ ಒಂದಾದ ಭಕ್ತಿ ಎಂದರೆ, ಅನುಭಾವದ ಭಕ್ತಿ ಎಂಬುದನ್ನು ಮನಗಾಣಿಸುತ್ತಾಳೆ. ಮುಕ್ತಿಗೆ ಸಂಸಾರ ಅಡ್ಡಿಯಾಗಬಾರದು, ಅಥವಾ ಒಬ್ಬರಿಗೊಬ್ಬರು, ಸಾಧನೆ ಮಾಡಲು, ಅಡಚಣೆಯನ್ನು ಒಡ್ಡಬಾರದು, ಹೆಂಡತಿ ಮಾಡುವ ಕಾರ್ಯದಲ್ಲಿ ಗಂಡನಿಗೂ, ಗಂಡ ಮಾಡುವ ಕ್ರಿಯೆಯಲ್ಲಿ ಹೆಂಡತಿಗೂ ನಂಬಿಕೆ ಇರಬೇಕು, ತಾನು ನಂಬಿದವರು ಅಜ್ಞಾನದ ಹಾದಿಯನ್ನು ತುಳಿಯಲಾರರೆಂಬ ಬಲವಾದ ವಿಶ್ವಾಸ ಜೀವನ ಸಾಮರಸಕ್ಕೆ ಅಣಿ ಮಾಡುತ್ತದೆ. ಪರಸ್ಪರರು ಪರಿವರ್ತಿಸಿಕೊಂಡು ಜೀವನದ ನಿಜ ದರ್ಶನ ಪಡೆಯಲು ಸಾಧ್ಯವಾಗುತ್ತದೆ.

ಸಂಸಾರದ ಮೋಹ ಹೆಚ್ಚಾದಾಗ ಆಸೆಯ ಮೋಹ ಹಂಬಲಿಸುತ್ತದೆ. ಆಸೆ ಹಂಬಲ ತೀವ್ರವಾದಾಗ ಭಾವದ ಆಮಿಷ ಅರಿವನ್ನು ಮರೆಸುತ್ತದೆ. ಅರಿವನ್ನು ಮರೆತರೆ ತನುವಿನ ಬಯಕೆಯೇ ಮುಖ್ಯವಾಗುತ್ತದೆ. ಆಗ ಒಳಗಣ ಜ್ಞಾನ ವಿವೇಕ, ನಾಶವಾಗುತ್ತದೆ. ಅದಕ್ಕೆ ತನು ಕರಗಲೇಬೇಕು. ಮನ ಶುದ್ಧವಾಗಬೇಕು ಎಂದಾಗ ಈ ಸಂಸಾರವೆಂಬ ಕಿಚ್ಚಿನಲ್ಲಿ ಬೇಯದೆ ಸಂಸಾರವನ್ನು ಗೆದ್ದು, ಬೆಳಗನ್ನು ಕಾಣುತ್ತೇವೆ ಎನ್ನುವ ಶರಣೆ ಲಿಂಗಮ್ಮನ ಬೋಧೆ ನಮ್ಮ ಬದುಕಿನ ಆಚಾರ ವಿಚಾರಕ್ಕೆ ನಿತ್ಯ ಬೆಳಕಾಗಿದೆ.

ವಿಷಯಗಳು: #article #peepalmedia
PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು