ಕೇರಳದ ಜನರು, ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ದೂರು
ಲಿಂಕ್ ನಕಲಿಸಲಾಗಿದೆ ✓
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೇರಳದ ಜನರು ಹಾಗೂ ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಹಿಂದೂ ಮಲಯಾಳಿ ಸಮಾಜ ದೂರು ಸಲ್ಲಿಸಿದೆ.
ಪ್ರತಾಪ್ ಸಿಂಹ ಅವರ ಹೇಳಿಕೆಗಳು ಮಲಯಾಳಿ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ಸಮಾಜದ ಪದಾಧಿಕಾರಿಗಳು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ದ್ವೇಷದ ಭಾವನೆ ಮೂಡಿಸುವುದರ ಜೊತೆಗೆ ಕೋಮು ಸೌಹಾರ್ದಕ್ಕೂ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕುಮಾರ್, ಸಂಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್ ಕಾಂತ್, ಹಿರಿಯ ಉಪಾಧ್ಯಕ್ಷ ವೇಣುಕಣ್ಣನ್, ಕಾನೂನು ಸಲಹೆಗಾರ ಕೆ.ಬಿ. ಸಂಜೀವ್, ಮಾಜಿ ಗೌರವಾಧ್ಯಕ್ಷ ಪಿ. ಭಾಸ್ಕರ್ ಸೇರಿದಂತೆ ಸಮಾಜದ ಸದಸ್ಯರು ಭಾಗವಹಿಸಿದ್ದರು.
ಸದಸ್ಯರಾದ ವಿ.ಆರ್. ಸುಧೀರ್, ಸಪ್ತೇಶ್, ರಾಮಕೃಷ್ಣನ್, ಮಣಿಕಂಠ ಕೆ. ಮತ್ತು ರಾಘವನ್ ಎ.ಎ. ಅವರು ಕೂಡ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಕೊಡಗು ಹಿಂದೂ ಮಲಯಾಳಿ ಸಮಾಜದ ಪರವಾಗಿ ಪದಾಧಿಕಾರಿಗಳು ದೂರು ಸಲ್ಲಿಸಿದ್ದು, ಪ್ರತಾಪ್ ಸಿಂಹ ಅವರ ಹೇಳಿಕೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Peepal Media
Peepal Media · ರಾಜ್ಯ ವಿಭಾಗ