ಹಾಸನ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಫುಡ್ ಡೆಲಿವರಿ ಬಾಯ್ ಒಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ನಗರ ಹೊರ ವಲಯದ ಬೂವನಹಳ್ಳಿ ಕೂಡು ಬಳಿಯ ರಾ.ಹೆ.75ರ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.ನಗರದ ಎಸ್.ಬಿ.ಎಂ. ಲೇಔಟ್ ನ ಶರಾವತಿ ಬಡಾವಣೆ ನಿವಾಸಿ ಸತೀಶ್ (40 ವರ್ಷ) ಮೃತ ವ್ಯಕ್ತಿ. ಅವರು ನೆನ್ನೆ ರಾತ್ರಿ 11ಗಂಟೆ ಸುಮಾರಿನಲ್ಲಿ ಫುಡ್ ಡೆಲಿವರಿ ಮಾಡಲು ನಗರದ ಕಡೆಯಿಂದ ಬಂದು ಗೆಂಡೆಗಟ್ಟೆಗೆ ಹೋಗುವ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಿರುವು ತೆಗೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ.ಇದರಿಂದ ಕೆಳಗೆ ಬಿದ್ದ ಶರತ್ ತಲೆಗೆ ತೀವ್ರ ಪೆಟ್ಟಾಗಿದೆ ಹೆಲ್ಮೆಟ್ ಧರಿಸದ ಕಾರಣ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೃತರಾದರು. ಮತ್ತೊಂದು ಬೈಕ್ ನ ಸವಾರ ಗಾಯಗೊಂಡಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೂಲತಃ ಮುತ್ತತ್ತಿ ಗ್ರಾಮದ ಶರತ್ ಪೂರ್ಣಾವಧಿ ಫುಡ್ ಡೆಲಿವರ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುತ್ರ ಇದ್ದಾರೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ