ಅಸ್ಸಾಂ ಮೂಲದ ವ್ಯಕ್ತಿ ನಾಪತ್ತ
ತುಂಬು ಗರ್ಭಿಣಿಯ ಆಕ್ರಂದನ
ಸಂಬಂಧಿಕರಿಂದ ಹುಡುಕಾಟ
ಅರೇಹಳ್ಳಿ : ಪಟ್ಟಣದ ಇಂದಿರಾನಗರದಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಿದ್ದು ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯೋರ್ವ ಕಳೆದ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದು! ಇದೀಗ ಸಂಬಂಧಿಕರು ಹುಡುಕಾಟ ನಡೆಸುತ್ತಾ, ಹೇಗಾದರೂ ಮಾಡಿ ಹುಡುಕಿಕೊಡಿ ಎಂದು ತಮ್ಮ ಅಳಲನ್ನು ಮಾಧ್ಯಮದ ಮೂಲಕ ತೋಡಿಕೊಂಡಿದ್ದಾರೆ.
ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣಕ್ಕೆ ಕೆಲ ವರ್ಷಗಳ ಹಿಂದೆ ವಲಸೆ ಬಂದ ಅಸ್ಸಾಂ ಮೂಲದ ಸುಮಾರು 19 ವರ್ಷದ ರಫೀಕ್ ಉಲ್ ಇಸ್ಲಾಂ ಎಂಬುವವರು ಸೋಮವಾರದಂದು ತನ್ನ ಸ್ನೇಹಿತನೊಂದಿಗೆ ಮನೆಯಿಂದ ತಿರುಗಾಡಲು ತೆರಳಿದ್ದು ಕತ್ತಲಾದರೂ ವಾಪಸ್ಸು ಮನೆಗೆ ಬಾರದ್ದನ್ನು ಕಂಡು ಭಯಭೀತ ರಾದ ಮನೆಯವರು ದಿಕ್ಕು ತೋಚದೆ ರಾತ್ರಿಯಲ್ಲಿ ಬರಬಹುದು ಎನ್ನುತ್ತಾ ಕಾದು ಕುಳಿತಿದ್ದ ಸನ್ನಿವೇಶ ತಡವಾಗಿ ಬೆಳಕಿಗೆ ಬಂದಿದೆ.
ದಿನ ನಿತ್ಯ ತನ್ನ ಕೆಲಸ ಮುಗಿಸಿ ಸಂಜೆಯಾಗುತ್ತಿದ್ದಂತೆ ಮನೆಗೆ ವಾಪಸ್ಸು ಬರುತ್ತಿದ್ದ ಅವನು ಯಾರೊಂದಿಗೆ ಹೆಚ್ಚಾಗಿ ಸೇರುತ್ತಿರಲಿಲ್ಲ! ಆದರೆ ಸೋಮವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಮಧ್ಯಾನ ಸುಮಾರು ಎರಡು ಗಂಟೆಗೆ ಸ್ನೇಹಿತನೊಂದಿಗೆ ತಿರುಗಾಡಲು ತೆರಳಿದ್ದಾನೆ! ಆದರೆ ಮೂರ್ನಾಲ್ಕು ದಿನಗಳು ಕಳೆದರೂ ಸುಳಿವು ಸಿಕ್ಕಿಲ್ಲ, ಅವನಲ್ಲಿದ್ದ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ, ಅವನ ಮನೆಯಲ್ಲಿ ತುಂಬು ಗರ್ಭಿಣಿ ಪತಿಯ ದಾರಿ ಕಾಯುತ್ತಾ ಕಣ್ಣೀರಿಡುತ್ತಿದ್ದಾಳೆ, ಅಲ್ಲದೆ ಅವನ ಮನೆಯಲ್ಲಿ ಎಲ್ಲರೂ ಭಯಭೀತರಾಗಿದ್ದಾರೆ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು? ಯಾರಿಗಾದರೂ ಅವರ ಬಗ್ಗೆ ಸುಳಿವು ಸಿಕ್ಕರೆ ದಯವಿಟ್ಟು ಮಾಹಿತಿ ನೀಡಿ ಎಂದು ಸಂಬಂಧಿಕರು ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.