Home ರಾಜ್ಯ ತುಮಕೂರು ವಿವಿಧ ದೇವಸ್ಥಾನಗಳಿಗೆ ಕೋಳಿ ಮೊಟ್ಟೆ ಎಸೆಯುತ್ತಿದ್ದ ಕಿಡಿಗೇಡಿ ಪೊಲೀಸರ ಬಲೆಗೆ

ವಿವಿಧ ದೇವಸ್ಥಾನಗಳಿಗೆ ಕೋಳಿ ಮೊಟ್ಟೆ ಎಸೆಯುತ್ತಿದ್ದ ಕಿಡಿಗೇಡಿ ಪೊಲೀಸರ ಬಲೆಗೆ

0

ತುಮಕೂರು(ಅ.26):  ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ (29) ಬಂಧಿತ ಆರೋಪಿ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಆರೋಪಿ ಮಂಜುನಾಥ್‌ನನ್ನ ಬಂಧಿಸಿದ್ದಾರೆ.  ಬಂಧಿತ ವ್ಯಕ್ತಿ ದೇವಸ್ಥಾನಗಳಿಗೆ ಮೊಟ್ಟೆ ಎಸೆದು ಅಪವಿತ್ರಗೊಳಿಸುತ್ತಿದ್ದ ಎನ್ನಲಾಗಿದೆ.

ಬಂಧಿತ ಆರೋಪಿ ಮಂಜುನಾಥ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ತಾಲೂಕಿನ ಕುರುಬರಹಳ್ಳಿ ಕಾಡೇನಹಳ್ಳಿಯ ನಿವಾಸಿ. ಇವನು ತಾಲೂಕಿನ ಗೋಡೇಕೆರೆ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಗರ್ಭಗುಡಿಯ ಪಕ್ಕದ ಬಲಭಾಗದ ವೀರಭದ್ರೇಶ್ವರ ವಿಗ್ರಹ, ಮತ್ತು ಎಡಭಾಗದ ಗದ್ದುಗೆಯ ಲಿಂಗಕ್ಕೆ ಮೊಟ್ಟೆ ಹೊಡೆದಿದ್ದ ಆರೋಪಿ ಹಾಗೂ ಭಾವನಹಳ್ಳಿ ಶ್ರೀ ನಿರ್ವಾಣಸ್ವಾಮಿ ದೇವಸ್ಥಾನ, ದಬ್ಬೇಘಟ್ಟ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿದ್ದ.

ಈ ಬಗ್ಗೆ ದೇವಸ್ಥಾನದ ಭಕ್ತರು ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ದೂರು ದಾಖಲಾಗಿತ್ತು. ಅ.21ರಂದು ಆರೋಪಿ ಮಂಜುನಾಥನನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿದ್ದರು.  

ವಿಚಾರಣೆ ವೇಳೆ 3 ದೇವಾಲಯಗಳಲ್ಲಿ ಕೋಳಿ ಮೊಟ್ಟೆ ಹೊಡೆದಿದ್ದು ದೇವಾಲಯ ಅಪವಿತ್ರಗೊಳಿಸಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

You cannot copy content of this page

Exit mobile version