ಜನರು ಘಿಬ್ಲಿ ಟ್ರೆಂಡಿಗೆ ಬಿದ್ದು ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸಿದ್ಧ ಆನಿಮೇಟರ್ ಹಯಾವೊ ಮಿಯಾಜಾಕಿಯವರ ಸೃಜನಶೀಲ ಚಿತ್ರಗಳನ್ನು AI ಮೂಲಕ ಪರಿವರ್ತಿಸಲಾಗುತ್ತಿದೆ. ತಮ್ಮ ಕೌಶಲ್ಯವನ್ನು ಈ ರೀತಿ ತಾಂತ್ರಿಕವಾಗಿ AI ಅತಿಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಹಯಾವೊ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೂ, ಜನರು ತಮ್ಮ ಘಿಬ್ಲಿ -ಫೈಡ್ ಫೋಟೋಗಳನ್ನು ಹಂಚಿಕೊಂಡು ಆನಂದಿಸುತ್ತಿದ್ದಾರೆ.
ಇದರ ಹಿಂದಿನ ಕರಾಳತೆಯನ್ನು ಡಿಜಿಟಲ್ ಗೌಪ್ಯತಾ ತಜ್ಞರು ಬಿಚ್ಚಿಡುತ್ತಿದ್ದು, ಓಪನ್ ಎಐ ನಮ್ಮ ಅರಿವಿಗೆ ಬಾರದಂತೆ ಬೃಹತ್ ಪ್ರಮಾಣದ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ. ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಬಗೆಗಿನ ಮಾಹಿತಿಯನ್ನು ತಾವಾಗಿಯೇ ಕೊಡುತ್ತಿದ್ದಾರೆ.
OpenAI ತನ್ನ AI ಗೆ ತರಬೇತಿ ನೀಡಲು ನಿಮ್ಮನ್ನು ಬಳಸಿಕೊಳ್ಳುತ್ತಿದೆ!
ಇಡೀ ಸಮಸ್ಯೆಯ ಹಿಂದೆ ಒಂದು ದೊಡ್ಡ ಪ್ರಶ್ನೆಯಿದೆ: ಓಪನ್‌ಎಐ ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಉಚಿತ, ಉತ್ತಮ-ಗುಣಮಟ್ಟದ ದೃಶ್ಯ ಡೇಟಾವನ್ನು ಸಂಗ್ರಹಿಸಲು ಈ ವೈರಲ್ ತಂತ್ರವನ್ನು ಬಳಸುತ್ತಿದೆಯೇ?
ಘಿಬ್ಲಿಯ ಬಗೆಗಿನ ತಕರಾರು ಕೇವಲ ಹಯಾವೊ ಮಿಯಾಜಾಕಿಯವರ ಕಲೆಯ ಹಕ್ಕುಸ್ವಾಮ್ಯದ ಬಗ್ಗೆ ಮಾತ್ರವಲ್ಲ. ಅದಕ್ಕಿಂತಲೂ ದೊಡ್ಡ ಸಮಸ್ಯೆಯನ್ನು ಘಿಬ್ಲಿ ತಂದಿಟ್ಟಿದೆ. ಅದು ಭಯಾನಕ ʼಡೇಟಾ ಸಂಗ್ರಹಣೆ.ʼ
ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ (GDPR) ಅಡಿಯಲ್ಲಿ, OpenAI ಸಾಮಾನ್ಯವಾಗಿ ‘ಕಾನೂನುಬದ್ಧ ಹಿತಾಸಕ್ತಿ” ಅಡಿಯಲ್ಲಿ ಇಂಟರ್ನೆಟ್‌ನಿಂದ ಫೋಟೋಗಳನ್ನು ಸ್ಕ್ಯಾಪ್ ಮಾಡುವುದನ್ನು ಸಮರ್ಥಿಸಬೇಕಾಗುತ್ತದೆ, ದತ್ತಾಂಶ ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲು ಸಂರಕ್ಷಣಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ ಎಂದು ಖಚಿತಪಡಿಸುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಫೋಟೋಗಳನ್ನು ತಾವೇ ಮುಕ್ತವಾಗಿ ಅಪ್ ಲೋಡ್ ಮಾಡಿದಾಗ, ಅವರು ಸ್ಪಷ್ಟ ಒಪ್ಪಿಗೆಯನ್ನು ನೀಡುತ್ತಿದ್ದಾರೆ, ಈ ನಿರ್ಬಂಧಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುತ್ತಿದ್ದಾರೆ.
“ಜನರು ಈ ಚಿತ್ರಗಳನ್ನು ಸ್ವಯಂಪ್ರೇರಣೆಯಿಂದ ಅಪ್‌ಲೋಡ್ ಮಾಡಿದಾಗ, ಅವುಗಳನ್ನು ಪ್ರಕ್ರಿಯೆಗೊಳಿಸಲು ಅವರು ಓಪನ್‌ಐಗೆ ತಮ್ಮ ಒಪ್ಪಿಗೆಯನ್ನು ನೀಡುತ್ತಾರೆ. ಇದು ಓಪನ್‌ಐಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ವಿಭಿನ್ನ ಕಾನೂನು ಆಧಾರವಾಗಿದೆ,” ಎಂದು ಎಐ, ಟೆಕ್ ಮತ್ತು ಗೌಪ್ಯತೆ ಅಕಾಡೆಮಿಯ ಗೌಪ್ಯತೆ ತಜ್ಞ ಲೂಯಿಜಾ ಜರೋವಿ ಎಚ್ಚರಿಸಿದ್ದಾರೆ.
ಸರಳವಾಗಿ ಹೇಳುವುದಾದರೆ, AI ತರಬೇತಿಗಾಗಿ OpenAI ಉಚಿತ, ಹೆಚ್ಚಿನ ರೆಸಲ್ಯೂಶನ್ ಇರುವ ಫೋಟೋಗಳನ್ನು ಪಡೆದುಕೊಳ್ಳುತ್ತಿದೆ, ಈ ಮೂಲ ಫೋಟೋವನ್ನು ತನ್ನಲ್ಲೇ ಇರಿಸಿಕೊಳ್ಳುತ್ತದೆ. ಫೇಸ್ಬುಕ್, ವಾಟ್ಸಾಪ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಬಳಕೆದಾರರು ಅಪ್‌ಲೋಡ್ ಮಾಡುವ “ಘಿಬ್ಲಿ-ಶೈಲಿಯ” ಫೋಟೋ ಮಾತ್ರ ಸಿಗುತ್ತದೆ. OpenAI ತಾನು ಸಂಗ್ರಹಿಸಿರುವ ಕಚ್ಚಾ ಡೇಟಾವನ್ನು ಬಳಸಿಕೊಂಡು ಭವಿಷ್ಯದಲ್ಲಿ ಬರುವ AI ಮಾದರಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.
ನಿಮ್ಮ ಮುಖವನ್ನು ಬಳಸಿಕೊಂಡು ಮುಂದಿನ AIಗೆ ತರಬೇತಿ ನೀಡಲಾಗುತ್ತದೆಯೇ?
ಘಿಬ್ಲಿಯ ಭಯಾನಕತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಿಮಾಚಲ ಸೈಬರ್ ವಾರಿಯರ್ಸ್‌ನಂತಹ ಸೈಬರ್ ಸೆಕ್ಯುರಿಟಿ ಗುಂಪುಗಳು, ಬಳಕೆದಾರರು ತಮ್ಮ ಮುಖಗಳನ್ನು AI ಪ್ಲಾಟ್‌ಫಾರ್ಮ್‌ಗಳಿಗೆ ಅಪ್ ಲೋಡ್ ಮಾಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ. X ನಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಹೀಗಿದೆ: “ನೀವು #Ghibli ಮಾಡುವ ಮೊದಲು ಒಮ್ಮೆ ಯೋಚಿಸಿ . ಆ ಮುದ್ದಾದ Ghibli-ಶೈಲಿಯ ಸೆಲ್ಫಿ? ನೀವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿ. ನಿಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಬಹುದು ಅಥವಾ ಕುಶಲತೆಯಿಂದ ಬಳಸಬಹುದಾಗಿದೆ. ನಿಮ್ಮ ಒಪ್ಪಿಗೆಯಿಲ್ಲದೆ AI ಗೆ ತರಬೇತಿ ನೀಡಲು ಬಳಸಬಹುದು. ಡೇಟಾ ಬೋಕರ್‌ಗಳು ಅದನ್ನು ಉದ್ದೇಶಿತ ಜಾಹೀರಾತುಗಳಿಗಾಗಿ ಮಾರಾಟ ಮಾಡಬಹುದು. ಸೈಬರ್ ಸ್ಮಾರ್ಟ್ ಆಗಿರಿ. ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ.”
ಹೆಚ್ಚುತ್ತಿರುವ ಆತಂಕ ಕೇವಲ ಭ್ರಮೆಯಲ್ಲ. ಓಪನ್‌ಎಐನ ಸ್ವಂತ ಗೌಪ್ಯತಾ ನೀತಿಯು ಕಂಪನಿಯು ತನ್ನ AI ಮಾದರಿಗಳಿಗೆ ತರಬೇತಿ ನೀಡಲು ಬಳಕೆದಾರರಿಂದ, ಆಯ್ಕೆಯಿಂದ ಹೊರಗುಳಿಯದ ಹೊರತು ವೈಯಕ್ತಿಕ ಡೇಟಾ ಇನ್‌ಪುಟ್ ಅನ್ನು ಸಂಗ್ರಹಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೂ, ಘಿಬ್ಲಿ-ಫಿಕೇಶನ್‌ನಂತಹ ಪ್ರವೃತ್ತಿಗಳಲ್ಲಿ ಉತ್ಸಾಹದಿಂದ ಭಾಗವಹಿಸುವಾಗ ಇದನ್ನು ಅರ್ಥ ಮಾಡಿಕೊಳ್ಳಬೇಕು.
AI ಗೆ ನಿಮ್ಮ ಫೋಟೋ ಏಕೆ ಬೇಕು?
ಇದು ಕೇವಲ ವ್ಯಾನಿಟಿ ಫಿಲ್ಟರ್‌ಗಳ ಬಗ್ಗೆ ಅಲ್ಲ. ಮೆಟಾದ ಮುಖ್ಯ AI ವಿಜ್ಞಾನಿ ಯಾನ್ ಲೆಕುನ್, ಮಾನವ ಮಟ್ಟದ ಬುದ್ಧಿಮತ್ತೆಯನ್ನು ತಲುಪಲು AI ಮಾದರಿಗಳಿಗೆ ಫೋಟೋ ರೀತಿಯ ದೃಶ್ಯ ಇನ್ ಪುಟ್ ಅಗತ್ಯವಿದೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ಕೇವಲ ಟೆಕ್ಸ್ಟ್ ಸಾಕಾಗುವುದಿಲ್ಲ ಎಂದು ಅವರು ಹೇಳುತ್ತಾರೆ.
- ಇಂದಿನ ಅತಿದೊಡ್ಡ AI ಮಾದರಿಗಳು 20 ಟ್ರಿಲಿಯನ್ ಪದಗಳ ಮೇಲೆ ತರಬೇತಿ ಪಡೆದಿವೆ – ಇದು ಅಂತರ್ಜಾಲದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಎಲ್ಲಾ ಪಠ್ಯಗಳಿಗೆ ಸಮಾನವಾಗಿದೆ.
- ಆದರೆ ಒಂದು ಮಗು ಕೇವಲ ನಾಲ್ಕು ವರ್ಷಗಳಲ್ಲಿ ಅದೇ ಪ್ರಮಾಣದ ದೃಶ್ಯ ದತ್ತಾಂಶವನ್ನು ಪ್ರಕ್ರಿಯೆಗೊಳಿಸುತ್ತದೆ.
- AI ಮಾನವ ಬುದ್ಧಿಮತ್ತೆಯನ್ನು ತಲುಪಲು ಬಯಸಿದರೆ, ಅದು ಅಪಾರ ಪ್ರಮಾಣದ ದೃಶ್ಯ ಇನ್‌ಪುಟ್ ಅನ್ನು ಪ್ರಕ್ರಿಯೆಗೊಳಿಸಬೇಕು ಮತ್ತು ಅದನ್ನು ಪಡೆಯಲು ಸುಲಭವಾದ ಮಾರ್ಗ ಯಾವುದು? ನೇರವಾಗಿ ಬಳಕೆದಾರರಿಂದ ಪಡೆಯುವುದು.
“ಕೇವಲ ಪಠ್ಯ (ಟೆಕ್ಸ್ಟ್) ತರಬೇತಿಯಿಂದ ನಾವು ಎಂದಿಗೂ ಮಾನವ ಮಟ್ಟದ AI ಅನ್ನು ತಲುಪಲು ಸಾಧ್ಯವಿಲ್ಲ. ನೈಜ ಜಗತ್ತನ್ನು ಅರ್ಥಮಾಡಿಕೊಳ್ಳಲು ನಾವು ವ್ಯವಸ್ಥೆಗಳನ್ನು ಪಡೆಯಬೇಕಾಗಿದೆ ಮತ್ತು ನೈಜ ಜಗತ್ತನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಕಷ್ಟ ಎಂದು LeCun ವಿವರಿಸುತ್ತದೆ.
ಘಿಬ್ಲಿ ಜನರೇಟರ್‌ನಂತಹ ವೈರಲ್ ದೃಶ್ಯ ಪ್ರವೃತ್ತಿಗಳ ಹಿಂದಿನ ಓಪನ್-ಎಐ ಪ್ರೇರಣೆಯನ್ನು ಇದು ವಿವರಿಸಬಹುದು. ದುಬಾರಿ ಇಮೇಜ್ ಡೇಟಾಸೆಟ್‌ಗಳನ್ನು ಖರೀದಿಸುವ ಬದಲು, ಓಪನ್-ಎಐ ಲಕ್ಷಾಂತರ ಚಿತ್ರಗಳನ್ನು ಉಚಿತವಾಗಿ ಪಡೆಯುವ ಮಾರ್ಗವನ್ನು ಕಂಡುಕೊಂಡಿರಬಹುದು.
ಭ್ರಮೆಯಲ್ಲಿ ಮೋಜು!: ಮುಖವಾಡ ಹಾಕಿ ನಿಮ್ಮ ಡೇಟಾದ ದರೋಡೆ!
ಘಿಬ್ಲಿ ಶೈಲಿಯ AI ಭಾವಚಿತ್ರಗಳು ಕ್ಯೂಟ್ ಅನ್ನಿಸಿದರೂ, ಅದರ ಮೂಲ ವಾಸ್ತವವು ಹೆಚ್ಚು ಸಂಕೀರ್ಣವಾಗಿದೆ. ಇಂಟರ್ನೆಟ್‌ನಲ್ಲಿ ಇದೇ ರೀತಿಯ ವೈರಲ್ AI ಪ್ರವೃತ್ತಿಗಳು ಮೊದಲೂ ಇದ್ದವು – ಲೆನ್ನಾ AI ನ ಮ್ಯಾಜಿಕ್ ಅವತಾರಗಳು ಅಥವಾ ಫೇಸ್‌ಆಪ್‌ನಲ್ಲಿದ್ದ ಮುದುಕರಾದಾಗ ಹೇಗೆ ಕಾಣುತ್ತೇವೆ ಎಂಬ ಫಿಲ್ಮರ್ ನೆನಪಿದೆಯೇ? ಪ್ರತಿ ಬಾರಿಯೂ ಗೌಪ್ಯತೆ ಕಾಳಜಿಗಳು ಅನುಸರಿಸುತ್ತಿದ್ದವು. ಆದರೆ ಆ ಹೊತ್ತಿಗಾಗಲೇ ತಮಗೆ ಬೇಕಾದ ಡೇಟಾವನ್ನು ಸಂಗ್ರಹಿಸಲಾಗಿತ್ತು.
ನಾವು ಮತ್ತೆ ಅದೇ ಪ್ಲೇಬುಕ್ ಅನ್ನು ನೋಡುತ್ತಿದ್ದೇವೆಯೇ? ಹಾಗಿದ್ದಲ್ಲಿ, ಇದಕ್ಕೆ ನಾವು ತೆರುವ ಬೆಲೆ ಅಪಾಯಕಾರಿಯಾಗಿರುತ್ತದೆ. ಬಳಕೆದಾರರು ತಿಳಿಯದೆಯೇ ಓಪನ್‌ಐಗೆ ಅತ್ಯಂತ ಅಗತ್ಯವಿರುವ ಮಾಹಿತಿಯನ್ನು ನೀಡುತ್ತಿದ್ದಾರೆ.
ಇನ್ನೊಮ್ಮೆ ನಿಮ್ಮ ಕ್ಯೂಟ್ ಕ್ಯೂಟ್ ಘಿಬ್ಲಿ ಇಮೇಜನ್ನು ಅಪ್‌ಲೋಡ್ ಮಾಡುವ ಮೊದಲು ಯೋಚಿಸಿ.