ಕಾಡಾನೆಯೊಂದು ರಾಗಿ ಹೊಲದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ
ನಡೆಸಿ ತೀವ್ರ ಪ್ರಮಾಣದ ಗಾಯಗೊಳಿಸಿದ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೋಗಿಲೆ ಮನೆ ಗ್ರಾಮದಲ್ಲಿ ನಡೆದಿದೆ.
ಬೇಲೂರು : ಕಾಡಾನೆ ದಾಳಿಯಿಂದ ಹಸು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಅದೇ ಹೊಲದಲ್ಲಿ ರಾಗಿ ಕಟಾವು ಮಾಡುತ್ತಿದ್ದ ರೈತ ಶಿವೇಗೌಡನ ಮೇಲೆ ದಾಳಿಗೆ ಮುಂದಾದಾಗ ಕೂದಲೆಳೆ ಅಂಚಿನಿಂದ ರೈತ ಶಿವೇಗೌಡ ಪಾರಾಗಿ ದ್ದಾರೆ ಹೊಲದಲ್ಲಿದ್ದ ಹಸಿವಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಹಸುವಿನ ಹೊಟ್ಟೆ ಭಾಗಕ್ಕೆ ಆನೆಯ ಕೋರೆ ಇಂದ ತಿವಿದು ಬಾರಿ ಪ್ರಮಾಣದ ರಕ್ತಸ್ರಾವ ದಿಂದ ಗಾಯಗೊಂಡಿದೆ ತಕ್ಷಣದಲ್ಲಿಯೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕಾಡಾನೆ ದಾಳಿಗೆ ತುತ್ತಾದ ಹಸುವನ್ನು ಪಶು ಆಸ್ಪತ್ರೆಗೆ ಸಾಗಿಸಲು ಪಶು ಆಸ್ಪತ್ರೆ ದೂರವಾಣಿ ಮತ್ತು ಪಶು ಆಂಬುಲೆನ್ಸ್ ದೂರವಾಣಿ ಕರೆ ಮಾಡಿದಾಗ ಎರಡು ನಂಬರ್ ಗಳು ಸ್ವಿಚ್ ಆಫ್ ಆದಕಾರಣ ಹಸುವನ್ನು ಆಸ್ಪತ್ರೆಗೆ ತರಲು ಹರಸಾಹಸ ಪಡಬೇಕಾಯಿತು, ಇನ್ನಾದರೂ ಸಂಭಂಧ ಪಟ್ಟವರು ಕಾಡಾನೆ ದಾಳಿಗೆ ತುತ್ತಾಗುತ್ತಿರುವ ರೈತರ ಹಸುಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ರೈತ ಶಿವೇಗೌಡ ಮನವಿ ಮಾಡಿದರು.