ಚೆನ್ನೈ: ಬಾಲಿವುಡ್ ನಟ ಪ್ರಭಾಸ್ ನಟನೆಯ ʼಆದಿಪುರುಷ್ʼ ಸಿನಿಮಾ ಟೀಸರ್‌ನಿಂದ ಸುದ್ದಿಯಾಗಿದ್ದು, ಚಿತ್ರದಲ್ಲಿ ರಾಮಾಯಣದ ಪಾತ್ರಗಳಿಗೆ ಅವಮಾನ ಮಾಡಿರುವ ಆರೋಪದ ಅಡಿ ನ್ಯಾಯಾಲಯವು ಅಕ್ಟೋಬರ್ 27ರಂದು ವಿಚಾರಣೆ ನಡೆಸುವುದಾಗಿ ಆದೇಶ ನೀಡಿದೆ.
ಬಾಲಿವುಡ್ ನಟ ಪ್ರಭಾಸ್ ನಟನೆಯ ʼಆದಿಪುರುಷ್ʼ ಸಿನಿಮಾ ಟೀಸರ್ ಅಕ್ಟೋಬರ್ 2 ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಚಿತ್ರವು ʼರಾಮಾಯಣʼ ಆಧಾರಿತವಾಗಿ ಚಿತ್ರೀಕರಣಗೊಂಡಿದ್ದರಿಂದ ಸಿನಿಮಾತಂಡದವರು ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುವ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಟೀಸರ್ ಬಿಡುಗಡೆಯಾದ ನಂತರ ನಾನಾ ಕಾರಣಗಳಿಂದ ಆದಿಪುರುಷ್ ಸುದ್ದಿಯಾಗುತ್ತಿದೆ. ಟೀಸರ್ ನೋಡಿದ ಅಭಿಮಾನಿಗಳು ಬೇಸರವಾಗಿದ್ದಾರೆ. ಚಿತ್ರದಲ್ಲಿ ಬಳಕೆಯಾಗಿರುವ ಗ್ರಾಫಿಕ್ಸ್, ಪಾತ್ರಗಳ ಆಯ್ಕೆ , ಪಾತ್ರಗಳ ಬೆಳವಣಿಗೆ ಸರಿಯಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದಲ್ಲದೇ ಸಿನಿಮಾ ಬಿಡುಗಡೆ ಬಗ್ಗೆ ಅತೀ ನಿರೀಕ್ಷೆಯಿದ್ದ ಚಿತ್ರತಂಡಕ್ಕೆ ಕಾನೂನಿನ ಸಂಕಷ್ಟವೂ ಎದುರಾಗಿದೆ.
ರಾಮಾಯಣ ಆಧಾರಿತ ʼಆದಿಪುರುಷ್ʼ ಚಿತ್ರದಲ್ಲಿ ರಾಮ, ಸೀತೆ , ಆಂಜನೇಯ , ರಾವಣ ಸೇರಿದಂತೆ ಕೆಲವು ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬ ಆರೋಪಕ್ಕೆ ಚಿತ್ರತಂಡ ಸಿಲುಕಿದೆ. ಧಾರ್ಮಿಕ ಸಂಕೇತವಾಗಿರುವ ಚಿತ್ರಗಳನ್ನು ಜನರ ಮುಂದೆ ಪ್ರದರ್ಶಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಇದೀಗ ಆದಿಪುರುಷ್ ಚಿತ್ರಕ್ಕೆ ಅದೇ ಕಾರಣದಿಂದ ಸಂಕಷ್ಟ ಎದುರಾಗಿದೆ. ಈ ಆರೋಪವು ಕೇವಲ ಆರೋಪವಾಗಿರದೆ ಈ ವಿರುದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ , ಆಂಜನೇಯ ಸೇರಿದಂತೆ ಕೆಲ ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲದ ಕಾರಣ ರಾಮಾಯಣದ ಆ ಪಾತ್ರಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟ ಪ್ರಭಾಸ್, ಸೈಫ್ ಅಲಿಖಾನ್ ಹಾಗೂ ನಿರ್ದೇಶಕ ಓಂ ರಾವತ್ ಸೇರಿದಂತೆ ತಂಡದ ಐದು ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಪಾತ್ರಗಳನ್ನು ಈ ರೀತಿ ಬಿಂಬಿಸಲು ಕಾರಣವೇನು ಎಂದು ನ್ಯಾಯಾಲಯದ ಮುಂದೆ ಹೇಳಿ ಎಲ್ಲವನ್ನೂ ಸ್ಪಷ್ಟನೇ ಮಾಡಿಕೊಂಡೇ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಅಕ್ಟೋಬರ್ 27ರಂದು ವಿಚಾರಣೆ ನಡೆಸುವುದಾಗಿ ದಿನಾಂಕ ಮಾಡಿದೆ.
ಇದನ್ನೂ ನೋಡಿ : ತಂತಿ ಮೇಲಣ ಹೆಜ್ಜೆ