Saturday, June 22, 2024

ಸತ್ಯ | ನ್ಯಾಯ |ಧರ್ಮ

ಅಮೀರ್‌ ಖಾನ್‌ ಪುತ್ರ ಜುನೈದ್‌ ಖಾನ್‌ ನಟನೆಯ ಚಿತ್ರ ʼಮಹಾರಾಜ್‌ʼ ಪ್ರದರ್ಶನಕ್ಕೆ ಕೋರ್ಟ್‌ ಅಸ್ತು

ಅಹ್ಮದಾಬಾದ್: ಆಮಿರ್‌ ಖಾನ್‌ ಪುತ್ರ ಜುನೈದ್ ಖಾನ್ ಅವರ ಚೊಚ್ಚಲ ಚಿತ್ರ ಮಹಾರಾಜ್‍ ಬಿಡುಗಡೆಗೆ ನೀಡಿದ್ದ ಮಧ್ಯಂತರ ತಡೆಯನ್ನು ಗುಜರಾತ್ ನ್ಯಾಯಾಲಯ ತೆರವುಗೊಳಿಸಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಸಂಗೀತಾ ಕೆ.ವಿಶೆನ್ ಅವರು ಆರಂಭದಲ್ಲಿ ಜೂನ್ 13ಕ್ಕೆ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿದ್ದರು. ಆದರೆ ಈ ಚಿತ್ರವನ್ನು ವೀಕ್ಷಿಸಿದ ಬಳಿಕ ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರ ಮಾಡಲು ಅನುಮತಿ ನೀಡಿದ್ದಾರೆ.

1862ರ ಮಹಾರಾಜ್ ಮಾನಹಾನಿ ಪ್ರಕರಣದ ಘಟನಾವಳಿಗಳನ್ನು ಆಧರಿಸಿದ ಈ ಚಿತ್ರ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜುನೈದ್ ಹಾಗೂ ಜೈದೀಪ್ ಅಹ್ಲಾವತ್, ಶೆರ್ವಾನಿ ವಾಘ್ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಮಹಾರಾಜ್ ಚಿತ್ರವು ಮಾನಹಾನಿ ಪ್ರಕರಣ ದಾಖಲಾಗಲು ಕಾರಣವಾದ ಅಂಶಗಳನ್ನು ಆಧರಿಸಿದ್ದು, ಪುಷ್ಟಿಮರ್ಗಿ ಸಮುದಾಯವನ್ನು ಅವಹೇಳನ ಮಾಡುವ ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಒಳಗೊಂಡಿಲ್ಲ ಎಂದು ನ್ಯಾಯಾಲಯ ನಿರ್ಣಯಕ್ಕೆ ಬಂದಿದೆ. ಈ ಚಿತ್ರಕ್ಕೆ ಕೇಂದ್ರೀಯ ಫಿಲ್ಮ್ ಸರ್ಟಿಫಿಕೇಟ್ ಬೋರ್ಡ್ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು