Home Uncategorized ಇಂಡಿಯಾ ಮೈತ್ರಿಕೂಟಕ್ಕೆ ಎಎಪಿ ವಿದಾಯ: ಪಕ್ಷದ ನಾಯಕ ಸಂಜಯ್ ಸಿಂಗ್ ಘೋಷಣೆ

ಇಂಡಿಯಾ ಮೈತ್ರಿಕೂಟಕ್ಕೆ ಎಎಪಿ ವಿದಾಯ: ಪಕ್ಷದ ನಾಯಕ ಸಂಜಯ್ ಸಿಂಗ್ ಘೋಷಣೆ

0

ದೆಹಲಿ: ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟಕ್ಕೆ ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ವಿದಾಯ ಹೇಳಿದೆ. ಇನ್ನು ಮುಂದೆ ತಾನು ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಅದು ಘೋಷಿಸಿದೆ.

ಮೈತ್ರಿಕೂಟವನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಅದು ಪ್ರಶ್ನಿಸಿದೆ. ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಶನಿವಾರ ಸಂಜೆ ಇಂಡಿಯಾ ಮೈತ್ರಿಕೂಟದ ಪಕ್ಷಗಳೊಂದಿಗೆ ಆನ್‌ಲೈನ್ ಸಭೆ ನಡೆಯಲಿದ್ದು, ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

‘ಇಂಡಿಯಾ ಮೈತ್ರಿಕೂಟ ಮೈತ್ರಿಕೂಟದ ರಚನೆ ಲೋಕಸಭಾ ಚುನಾವಣೆ ಸಲುವಾಗಿಗೆ ಮಾತ್ರ. ದೆಹಲಿ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಿದ್ದೇವೆ. ಬಿಹಾರ ಚುನಾವಣೆಯಲ್ಲಿಯೂ ನಾವು ಅದೇ ರೀತಿಯಲ್ಲಿ ಸ್ಪರ್ಧಿಸುತ್ತೇವೆ.

ಇಂದಿನಿಂದ, ಎಎಪಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವುದಿಲ್ಲ. ನಮ್ಮ ಪಕ್ಷವು ಲೋಕಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಬಲವಾಗಿ ಪ್ರಶ್ನಿಸುತ್ತದೆ’ ಎಂದು ಸಂಜಯ್ ಸಿಂಗ್ ಸ್ಪಷ್ಟಪಡಿಸಿದರು.

‘ಇಂಡಿಯಾ ಮೈತ್ರಿಕೂಟದ ನಾಯಕತ್ವವು ಮಕ್ಕಳಾಟವಲ್ಲ. ಚುನಾವಣೆಯ ನಂತರ ಮೈತ್ರಿಕೂಟವನ್ನು ವಿಸ್ತರಿಸಲು ನೀವು ಏನಾದರೂ ಪ್ರಯತ್ನಗಳನ್ನು ಮಾಡಿದ್ದೀರಾ?’ ಎಂದು ಅವರು ಕಾಂಗ್ರೆಸ್‌ ಪಕ್ಷವನ್ನು ಪ್ರಶ್ನಿಸಿದರು.

You cannot copy content of this page

Exit mobile version