Home Uncategorized ತರಗತಿ 1 ರಿಂದ 12 ನೇವರೆಗಿನ ಮಕ್ಕಳಿಗೆ ಜೀವ ಮತ್ತು ಅಪಘಾತ ವಿಮೆ – ಕೇರಳ...

ತರಗತಿ 1 ರಿಂದ 12 ನೇವರೆಗಿನ ಮಕ್ಕಳಿಗೆ ಜೀವ ಮತ್ತು ಅಪಘಾತ ವಿಮೆ – ಕೇರಳ ಸರ್ಕಾರ

ಕೇರಳ : ಇತ್ತೀಚಿನ ಕೇರಳ ಸರ್ಕಾರದ (Kerala govt) 2026-27 ಆದಾಯ-ಖರ್ಚು ಬಜೆಟ್ (budget) ನಲ್ಲಿ ಒಂದು ಪ್ರಮುಖ ಸುಧಾರಣೆ ಶಾಲಾ ಮಕ್ಕಳಿಗೆ ಸಂಬಂಧಪಟ್ಟಂತೆ (Good news) ಪ್ರಕಟಗೊಂಡಿದೆ. ತರಗತಿ 1 ರಿಂದ 12 ನೇವರೆಗಿನ ಮಕ್ಕಳಿಗೆ ಜೀವ ಮತ್ತು ಅಪಘಾತ ವಿಮೆ (life & accident insurance) ಯೋಜನೆಯನ್ನು ಬಜೆಟ್ ನಲ್ಲಿ ಪ್ರಸ್ತಾವಿಸಲಾಗಿದೆ.

ಕೇರಳ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಅವರು ಬಜೆಟ್ ವೇಳೆ ತಿಳಿಸಿದಂತೆ, ತರಗತಿ 1 ರಿಂದ 12 ನವರೆಗಿನ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಜೀವನ ಮತ್ತು ಅಪಘಾತ ವಿಮೆ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ.  ಇದರ ಜೊತೆಗೆ ತ್ಯಾಜ್ಯ ವಿಲೇವಾರಿ ಸಿಬ್ಬಂದಿ, ಆಟೋ ರಿಕ್ಷಾ ಚಾಲಕ, ಟಿಕ್ಸಿ ಚಾಲಕರು, ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಸಹ ಹೊಸ ಅಪಘಾತ ವಿಮಾ ಯೋಜನೆ ಜಾರಿಗೆ ಬರಕಿದೆ. ಇನ್ನು ರಾಜ್ಯ ವಿಮಾ ಇಲಾಖೆ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ಈ ವಿಮಾ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಯೋಜನೆಗೆ ಅಂದಾಜು 15 ಕೋಟಿ  ಖರ್ಚು ಮಾಡಲಾಗಿದೆ, ಅಲ್ಲದೆ ಬಜೆಟ್ ನಲ್ಲಿ ಇದಕ್ಕಾಗಿಯೇ ಮೊತ್ತ ಮೀಸಲಿಡಲಾಗಿದೆ.

ಈ ಯೋಜನೆ ರಾಜ್ಯ ಸ್ಟೇಟ್ ಇನ್ಷೂರೆನ್ಸ್ ಡಿಪಾರ್ಟ್ಮೆಂಟ್ ಜೊತೆಗೆ ನಿಮ್ಮಿಗೆ ಸಹಕಾರದೊಂದಿಗೆ ಜಾರಿ ಮಾಡಲಾಗುತ್ತದೆ. ಸರ್ಕಾರಿ, ಸಹಕಾರಿ ಹಾಗೂ ಖಾಸಗಿ (state syllabus) ಶಾಲೆಗಳಲ್ಲಿರುವ ಎಲ್ಲಾ ಮಕ್ಕಳಿಗೆ ಈ ವಿಮೆ ಕವರ್ ಲಭ್ಯವಾಗಲಿದೆ.

ಈ ಕ್ರಮದ ಉದ್ದೇಶ – ಮಕ್ಕಳಿಗಾಗಿ ಆರ್ಥಿಕ ಸುರಕ್ಷತೆ ಹೆಚ್ಚಿಸುವುದು ಮತ್ತು ಅಪಘಾತದ ವೇಳೆ ಪೋಷಕರಿಗೆ ಭಾರ ಕಡಿಮೆ ಮಾಡುವುದು. ಇದೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಾಮಾಜಿಕ ಸುರಕ್ಷತಾ ಯೋಜನೆಗಳಲ್ಲಿ ಹೊಸ ಕ್ರಮವಾಗಿ ಇದನ್ನು ಪರಿಗಣಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಶಾಲಾ ಮಕ್ಕಳೊಂದಿಗೆ ಸಂಭವಿಸಿದ ಆಕಸ್ಮಿಕ ಘಟನೆಗಳು ಅಗತ್ಯತೆಯನ್ನು ಹೆಚ್ಚಿಸಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರ ವಿಮೆಯು ಮಕ್ಕಳಿಗೆ ಮೆಡಿಕಲ್ ಹಾಗೂ ಪೋಷಕರಿಗೆ ಆರ್ಥಿಕ ಭದ್ರತೆ ನೀಡಲು ಸಹಕಾರಿ ಆಗಲಿದೆ.

You cannot copy content of this page

Exit mobile version