Home ಬ್ರೇಕಿಂಗ್ ಸುದ್ದಿ ಸ್ಥಳೀಯರನ್ನ ಕಡೆಗಣಿಸಿರುವವರ ವಿರುದ್ಧ ಹಾಸನಾಂಬೆ ಎದುರು ಎಎಪಿ ಪ್ರತಿಭಟನೆ

ಸ್ಥಳೀಯರನ್ನ ಕಡೆಗಣಿಸಿರುವವರ ವಿರುದ್ಧ ಹಾಸನಾಂಬೆ ಎದುರು ಎಎಪಿ ಪ್ರತಿಭಟನೆ

ಹಾಸನ : ಹಾಸನಾಂಬ ದೇವಿ ದರ್ಶನ ಮಾಡಲು ಸ್ಥಳಿಯವರಿಗೆ ದರ್ಶನ ಮಾಡಲು ಅವಕಾಶ ಕೊಡುತ್ತಿಲ್ಲ, ಸ್ಥಳೀಯ ನಿವಾಸಿಗಳನ್ನು ಕಡೆಗಣಿಸಿದ್ದು, ಅವರಿಗೆ ತೊಂದರೆ ಕೊಡುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಸ್ಪಿ, ಡಿಸಿ ಎದುರೇ ಆಕ್ರೋಶವ್ಯಕ್ತಪಡಿಸಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.

  ಹಾಸನಾಂಬೆ ದೇವಾಲಯದ ಬ್ಯಾರಿಕೇಡ್ ಮುಂದೆ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ನೂರಾರು ಜನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.

  ಇದೆ ವೇಳೆ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬ ಉತ್ಸವ ಇದು ಹಾಸನದ ಜನರ ಹಬ್ಬ, ಜನರ ಸಂಭ್ರಮ. ಆದರೆ ಅಧಿಕಾರಿಗಳು ಇದನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಉತ್ಸವದ ಹೆಸರಿನಲ್ಲಿ ಸ್ಥಳೀಯರನ್ನು ಕಿರುಕುಳ ನೀಡಲಾಗುತ್ತಿದೆ. ದೇವಾಲಯದ ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮನೆಯಿಂದ ಹೊರಬರಲು ಸಹ ಸಾಧ್ಯವಾಗದ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ. ಎಲ್ಲೆಡೆ ಬ್ಯಾರಿಕೇಡ್ ಹಾಕಿ ಅವರನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದೆ ಎಂದು ದೂರಿದರು. ಇಲ್ಲಿನ ಜನರಿಗೆ ಕುಡಿಯುವ ನೀರು, ಶೌಚಾಲಯ, ಸಂಚಾರ ಸೌಲಭ್ಯಗಳ ತೀವ್ರ ಕೊರತೆ ಇದೆ. ಉತ್ಸವಕ್ಕೂ ಮುನ್ನ ಸ್ಥಳೀಯರನ್ನು ಸಭೆಗೆ ಆಹ್ವಾನಿಸಿ ಅವರ ಸಮಸ್ಯೆಗಳನ್ನು ಆಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ದೇವಿಯ ಉತ್ಸವವನ್ನು ಸಾರ್ವಜನಿಕ ಹಬ್ಬವೆಂದು ಪರಿಗಣಿಸದೆ, ಸರ್ಕಾರದ ಮೆಚ್ಚುಗೆ ಮತ್ತು ಆದಾಯದ ದೃಷ್ಟಿಯಿಂದ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಎದುರೇ ಹೋದರೂ ಏನು ಎಂದು ಕೇಳದೇ ಆಗೆ ಹೊರಟು ಹೋಗಿದ್ದಾರೆ. ನಮ್ಮನ್ನು ಒಳಗೆ ಬಿಡದಿದ್ದರೇ ಎಲ್ಲಾರು ಒಳ ನುಗ್ಗುತ್ತೇವೆ ಆಗ ಏನು ಮಾಡುತ್ತಾರೆ ಮಾಡಲಿ ಎಂದು ಸಿಡಿಮಿಡಿಗೊಂಡರು.

You cannot copy content of this page

Exit mobile version