ಹಾಸನದ ಮೊಸಳೆಹೊಸಳ್ಳಿ ಗಣೇಶ ವಿಸರ್ಜನೆ ದುರಂತ ಇನ್ನೂ ಕಣ್ಣಮುಂದೆ ಇರುವಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಲ್ಲೂ ಇದೇ ಮಾದರಿಯ ಘೋರ ಅನಾಹುತವೊಂದು ಸಂಭವಿಸಿದೆ. ಗಣೇಶ ವಿಸರ್ಜನೆ ನೋಡಲು ತೆರಳುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಸನದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರತ್ತ ನುಗ್ಗಿದ್ದ ಟ್ರಕ್ ದುರಂತದಲ್ಲಿ 10 ಯುವಕರು ಸಾವನ್ನಪ್ಪಿದ್ದರು. ಇದೇ ರೀತಿಯಲ್ಲಿ ಈಗ ಗೌರಿಬಿದನೂರಿನ ವಡ್ಡರ ಬಂಡೆ ಕ್ರಾಸ್ ಬಳಿ ಗಣೇಶ ವಿಸರ್ಜನೆಗೆ ತೆರಳುತ್ತಿರುವಾಗಲೇ ಘೋರ ಅಪಘಾತ ಸಂಭವಿಸಿದೆ.
ಮಂಚೇನಹಳ್ಳಿಯಿಂದ ಬೈಪಾಸ್ ಗಣೇಶ ಮೆರವಣಿಗೆ ವೀಕ್ಷಣೆಗೆ ಕಾರಲ್ಲಿ ತೆರಳುತ್ತಿದ್ದಾಗ, ವಡ್ಡರ ಬಂಡೆ ಬಳಿ ನಿಯಂತ್ರಣ ಕಳೆದುಕೊಂಡು ಕಾರು ಮರಕ್ಕೆ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಡ್ಡರ ಬಂಡೆ ಕ್ರಾಸ್ ಬಳಿ ಅಪಘಾತವಾಗಿದ್ದು, ಕಾರಿನಲ್ಲಿದ್ದ ಮುನಿರಾಜು (28), ಶಶಿ (42) ಅಸುನೀಗಿದರೆ, ರಮೇಶ್ ಗೆ (40) ಗಂಭೀರಗಾಯವಾಗಿದೆ. ಗಾಯಾಳುವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.