Home ಬ್ರೇಕಿಂಗ್ ಸುದ್ದಿ ಮರು ಮೌಲ್ಯಮಾಪನದಲ್ಲಿ ಅಚೀವರ್ಸ್ ಪಿ ಯು ಕಾಲೇಜಿನ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

ಮರು ಮೌಲ್ಯಮಾಪನದಲ್ಲಿ ಅಚೀವರ್ಸ್ ಪಿ ಯು ಕಾಲೇಜಿನ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

ಹಾಸನ :ನಗರದ ಅಜೀವರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಒಟ್ಟು 600 ಕ್ಕೆ 595 ಅಂಕಗಳೊಂದಿಗೆ ಶೇ.99.1% ದೊಂದಿಗೆ, ಜಿಲ್ಲೆಗೆ ಮೊದಲನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆಯನ್ನು ತಂದಿದ್ದಾಳೆ, ಕಳೆದ ಪರೀಕ್ಷೆಯ ಫಲಿತಾಂಶದಲ್ಲಿ ಸಬಾ ಕೌನೇನ್ ಎಂಬ ಬಾಲಕಿ ಇಂಗ್ಲೀಷ್ 95 ಅಕೌಂಟೆನ್ಸಿ 100 ಕಂಪ್ಯೂಟರ್ ಸೈನ್ಸ್ 100 ಬಿಸಿನೆಸ್ ಸ್ಟಡೀಸ್ 98 ಎಕನಾಮಿಕ್ಸ್ 96 ಉರ್ದು 96 ಅಂಕ ಪಡೆದಿದ್ದು, ಫಲಿತಾಂಶದಲ್ಲಿ ಏರುಪೇರು ಕಂಡ ಕಾಲೇಜು ಆಡಳಿತ ಮಂಡಳಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.ಇದೀಗ ಮರು ಮೌಲ್ಯಮಾಪನದ ಫಲಿತಾಂಶದಲ್ಲಿ ಇಂಗ್ಲೀಷ್ 95 ಹೊರತುಪಡಿಸಿ ಇನ್ನೆಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿ ವಾಣಿಜ್ಯ ವಿಭಾಗದ ಇ ಬಿ ಎ ಸಿ ಎಸ್ ಸಂಯೋಜನೆಯಲ್ಲಿ ಜಿಲ್ಲೆಗೆ ಮೊದಲನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾಳೆ.

ನಗರದಲ್ಲಿ ಬಾಳೆ ಹಣ್ಣು ವ್ಯಾಪಾರ ಮಾಡುವ ಸೈಯದ್ ರಫೀಕ್ ಹಾಗೂ ರೋಷ್ನಿ ನಿಗಾರ್ ರವರ ಸುಪುತ್ರಿಯಾಗಿರುವ ಸಬಾ ಕೌನೇನ್ ಳ ಸಾಧನೆ, ಕಾಲೇಜಿಗೆ ಮತ್ತು ಆಡಳಿತ ಮಂಡಳಿಗೆ ಸಂತೋಷದ ವಿಷಯವಾಗಿದೆ.ಈ ಸಾಧನೆಗೆ,ಕಾಲೇಜು ಆಡಳಿತ ಮಂಡಳಿ ಪೋಷಕರು ಮತ್ತು ಶಿಕ್ಷಣ ಅಭಿಮಾನಿಗಳು ಸಬಾ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

You cannot copy content of this page

Exit mobile version