2022ನೇ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿಯ ಹಂತದಲ್ಲಿದ್ದ ಶಿವಾನಂದ ಫ್ಲೈ ಓವರ್ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ಆಗಿದೆ ಎಂದು ಆರೋಪಿಸಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕರುಗಳಿಗೆ ಇಂದು ನ್ಯಾಯಾಲಯದಿಂದ ಬಿಡುಗಡೆ ಭಾಗ್ಯ ದೊರಕಿದೆ.
ಬೆಂಗಳೂರು ನಗರ ಒಂದನೇ ಎ ಸಿ ಎಂ ಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಗಳ ಪರ ವಾದವನ್ನು ಮಂಡಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದ ಇನ್ನಿತರ 17 ಆರೋಪಿಗಳಿಗೆ ಪ್ರಕರಣದಿಂದ ಪ್ರಕರಣದಿಂದ ಮುಕ್ತಿ ನೀಡಿದರು. ಆರೋಪಿಗಳ ಪರ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಹಾಗೂ ಖ್ಯಾತ ವಕೀಲ ದಿವಾಕರ್ ರವರ ವಾದವನ್ನು ಮಂಡಿಸಿದರು.
ಮಾನ್ಯ ನ್ಯಾಯಾಧೀಶರು ಎಲ್ಲಾ 17 ಜನ ಆರೋಪಿಗಳಿಗೆ ಬಿಡುಗಡೆ ಭಾಗ್ಯ ನೀಡಿದರು. ರಾಜ್ಯದಲ್ಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆಮ್ ಆದ್ಮಿ ಪಕ್ಷವು ಸತತ ಹೋರಾಟವನ್ನು ಇದೇ ರೀತಿ ಮುಂದುವರಿಸಲಿದೆ ಹಾಗೂ ಪೊಲೀಸರ ಸುಳ್ಳು ಮಕದ್ದಮೆಗಳಿಗೆ ಹೆದರುವುದಿಲ್ಲ ಎಂದು ಮೋಹನ್ ದಾಸರಿ ತಿಳಿಸಿದ್ದಾರೆ.