Home ಬ್ರೇಕಿಂಗ್ ಸುದ್ದಿ ಸರ್ಜರಿ ಇಲ್ಲದೇ ನಟ ದರ್ಶನ್ ಆಸ್ಪತ್ರೆಯಿಂದ ಬಿಡುಗಡೆ

ಸರ್ಜರಿ ಇಲ್ಲದೇ ನಟ ದರ್ಶನ್ ಆಸ್ಪತ್ರೆಯಿಂದ ಬಿಡುಗಡೆ

0

ಕಳೆದ ಒಂದುವರೆ ತಿಂಗಳಿನಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಗ್ಗೆ ಈಗ ಮತ್ತೊಮ್ಮೆ ದರ್ಶನ್ ವಿಚಾರವಾಗಿ ಚರ್ಚೆ ಮುನ್ನೆಲೆಗೆ ಬಂದಿದೆ.

ಯಾವಾಗ ಬೇಕಾದರೂ ಸರ್ಜರಿ ಮಾಡಿಸಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಂದು ಮನೆಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ವೈದ್ಯರ ಸಲಹೆ ಮೇರೆಗೆ ದರ್ಶನ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಧ್ಯಂತರ ಜಾಮಿನು ಪಡೆದುಕೊಂಡು ನಟ ದರ್ಶನ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ಫಿಜಿಯೋಥೆರಫಿ ಮಾಡಿಸಿ ಬೇಲ್ ಸಿಗುತ್ತಿದ್ದಂತೆ ಇದೀಗ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

You cannot copy content of this page

Exit mobile version