Home ದೇಶ ʼಒಂದು ರಾಷ್ಟ್ರ ಒಂದು ಚುನಾವಣೆʼ ಜಾರಿಯಾದರೆ ಪ್ರಜಾಪ್ರಭುತ್ವ ನಾಶ: ಸ್ಟಾಲಿನ್‌

ʼಒಂದು ರಾಷ್ಟ್ರ ಒಂದು ಚುನಾವಣೆʼ ಜಾರಿಯಾದರೆ ಪ್ರಜಾಪ್ರಭುತ್ವ ನಾಶ: ಸ್ಟಾಲಿನ್‌

0

ಚನೈ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ʼಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿಯು ಈ ದೇಶದ ಪ್ರಜಾಪ್ರಭತ್ವ ವ್ಯವಸ್ಥೆಗೆ ಮಾರಕ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಇದು ಈ ದೇಶದ ಒಕ್ಕೂಟ ವಿರೋಧಿ ಹಾಗೂ ಅಪ್ರಾಯೋಗಿಕ ನೀತಿಯಾಗಿದೆ. ಏಕೆಂದರೆ, ಅದು ದೇಶವನ್ನು ಏಕೀಕೃತ ಆಡಳಿತದ ಅಪಾಯಗಳಿಗೆ ತಳ್ಳುತ್ತದೆ. ದೇಶದ ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ” ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಸ್ತಾವನೆಯು ಅಂಗೀಕಾರವಾದರೆ, ರಾಜ್ಯ ಚುನಾವಣೆಗಳ ವ್ಯವಸ್ಥೆಯನ್ನು ಕೇಂದ್ರ ತೆಗೆದುಹಾಕುತ್ತದೆ. ಇದರಿಂದಾಗಿ ಪ್ರಾದೇಶಿಕ ಭಾವನೆಗಳನ್ನು ದುರ್ಬಲಗೊಳಿಸಿದಂತೆ ಮತ್ತು ಭಾರತದ ವೈವಿಧ್ಯತೆಯನ್ನು ನಾಶಪಡಿಸಿದಂತಾಗುತ್ತದೆ. ಇಂತಹ ನಿರ್ಣಾಯಕ ಕಾನೂನನ್ನು ಅಂಗೀಕರಿಸಲು ಅಗತ್ಯವಾದ ಸಂಸದೀಯ ಬಹುಮತದ ಕೊರತೆಯ ಹೊರತಾಗಿಯೂ ಬಿಜೆಪಿಯು ಈ ಪ್ರಸ್ತಾಪವನ್ನು ಮುಂದುವರೆಸಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ರಾಜಕೀರತದ ಪ್ರಗತಿಗೆ ಅಡ್ಡಿಯಾಗುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿದೆ ಎಂದಿರುವ ಅವರು, ಈ ನೀತಿ ಜಾರಿಯನ್ನು ಐಕ್ಯರಂಗ ತೀವ್ರವಾಗಿ ವಿರೋದಿಸಬೇಕು. ಭಾರತದ ಸಂವಿಧಾನವನ್ನು ರಕ್ಷಿಸಲು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು. ಚುನಾವಣಾ ಸುಧಾರಣೆಯ ನೆಪದಲ್ಲಿ ಹೇರಲಾದ ಈ ಅಸಹ್ಯಕರ ನೀತಿ ವಿರುದ್ಧ ಹಲ್ಲು ಮತ್ತು ಉಗುರುಗಳೊಂದಿಗೆ ಹೋರಾಡಬೇಕು” ಎಂದು ಅವರು ಕರೆ ನೀಡಿದ್ದಾರೆ.

You cannot copy content of this page

Exit mobile version