ಹೊಸದೆಹಲಿ: ವಿವಿಧ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿದ್ದ ಅದಾನಿ ಗ್ರೂಪ್‌ಗೆ ಸೇರಿದ ಸುಮಾರು 31 ಕೋಟಿ ಹಣವನ್ನು ಸ್ವಿಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನು ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಬಹಿರಂಗಪಡಿಸಿದೆ. ಆದರೆ ಅದಾನಿ ಸಮೂಹ ಈ ಸುದ್ದಿಯನ್ನು ನಿರಾಕರಿಸಿದೆ. ಹಿಂಡೆನ್‌ಬರ್ಗ್ ಕಂಪನಿ ತನ್ನ X ಖಾತೆಯಲ್ಲಿ ಈ ವಿಷಯವನ್ನು ಟ್ವೀಟ್ ಮಾಡಿದೆ.
ಅದಾನಿ ಸಮೂಹವು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದು, ಅದರ ವಿದೇಶಿ ಹೂಡಿಕೆಗೆ ಸೇರಿದ ಸುಮಾರು 310 ಮಿಲಿಯನ್ ಡಾಲರ್ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿಂಡೆನ್‌ಬರ್ಗ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಅದಾನಿ ಸ್ಟಾಕುಗಳಿಗೆ ಸೇರಿದ ಹಣವನ್ನು ಬಿವಿಐ, ಮಾರಿಷಸ್ ಮತ್ತು ಬರ್ಮುಡಾದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅದಾನಿ ಗ್ರೂಪ್ ಹಿಂಡೆನ್‌ಬರ್ಗ್‌ನ ಆರೋಪಗಳನ್ನು ನಿರಾಕರಿಸಿದೆ. ಅದಾನಿ ಗ್ರೂಪ್ ಸ್ವಿಸ್ ನ್ಯಾಯಾಲಯದ ವಿಚಾರಣೆಯೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಕಂಪನಿಯು ಆರೋಪಗಳು ಆಧಾರರಹಿತವಾಗಿದ್ದು, ಅದನ್ನು ತಾನು ಸ್ಪಷ್ಟವಾಗಿ ನಿರಾಕರಿಸುವುದಾಗಿ ಹೇಳಿದೆ, ಅದಾನಿ ಸಮೂಹಕ್ಕೂ ಸ್ವಿಸ್ ನ್ಯಾಯಾಲಯದ ಪ್ರಕ್ರಿಯೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಸ್ವಿಸ್ ಕೋರ್ಟ್ ತನ್ನ ತೀರ್ಪಿನಲ್ಲಿ ತನ್ನ ಗುಂಪುಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅದಾನಿ ಗ್ರೂಪ್ ಹೇಳಿದೆ.