Home ರಾಜ್ಯ ಉಡುಪಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಈ ಪುಟ್ಟ ಕಂದನಿಗೆ ನೆರವಾಗುವಿರಾ?

ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಈ ಪುಟ್ಟ ಕಂದನಿಗೆ ನೆರವಾಗುವಿರಾ?

0

ಕುಂದಾಪುರ: ಗೋಳಿಹೊಳೆ ಗ್ರಾಮದ ಕೊಡಿಯಾಲ್ ಕೇರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಪೂಜಾರಿ; ನಿನ್ನೆ ಪ್ರತಿಭಾ ಕಾರಂಜಿ ಮುಗಿಸಿ ಹಿಂದಿರುಗುವಾಗ ವಾಹನ ಅಪಘಾತದಿಂದ ತೀವ್ರತರವಾದ ಗಾಯಕ್ಕೊಳಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾನೆ.

ಆಟೋರಿಕ್ಷಾದಲ್ಲಿ ಶಿಕ್ಷಕರು ಜಾಗರೂಕತೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೂ ಸಹ ಇಂತಹದ್ದೊಂದು ಅವಘಡ ಸಂಭವಿಸಿದೆ. ಪ್ರಸ್ತುತ ಬಾಲಕನ ಮೆದುಳಿನ ಚಿಕಿತ್ಸೆ ಹಾಗೂ ಹೊಟ್ಟೆಯ ಶಸ್ತ್ರಚಿಕಿತ್ಸೆ ಬಾಕಿ ಇದ್ದು ವೈದ್ಯರು ಒಟ್ಟು 8ರಿಂದ10 ಲಕ್ಷ ವೆಚ್ಚವಾಗಬಹುದು ಎಂದು ಸೂಚಿಸಿರುತ್ತಾರೆ.

ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬಾಲಕನಿಗೆ ಯಾವುದೇ ಸರ್ಕಾರಿ ಆರೋಗ್ಯ ಯೋಜನೆಗಳ ಲಾಭವೂ ದೊರೆಯುತ್ತಿಲ್ಲ. ಕಡು ಬಡವರಾದ ಅಭಿಷೇಕನ ತಂದೆ ಸೈಕಲ್‌ ರಿಪೇರಿ ಮಾಡುವ ಉದ್ಯೋಗ ಮಾಡಿಕೊಂಡಿದ್ದಾರೆ. ಅವರೀಗ ತನ್ನ ಮಗನನ್ನು ಉಳಿಸಕೊಳ್ಳುವ ಮುಂದಿನ ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದಾರೆ.

ಅಭಿಷೇಕ್

ಅಭಿಷೇಕ್‌ ಓದುತ್ತಿರುವ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ತಮ್ಮ ವಿದ್ಯಾರ್ಥಿಯನ್ನು ಉಳಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತಿದ್ದಾರೆ. ಜೊತೆಗೆ ದೊಡ್ಡ ಮೊತ್ತವಾಗಿರುವುದರಿಂದ ಸಾರ್ವಜನಿಕರಿಂದಲೂ ಸಹಾಯ ಬಯಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಮಾಡಿಕೊಂಡಿರುವ ಮನವಿ ಹೀಗಿದೆ: “ಆತ್ಮೀಯರೆ, ನಮ ಮಗುವೊಂದು ಆಸ್ಪತ್ರೆಯಲ್ಲಿ ಮಲಗಿದೆ.. ಇಲ್ಲಿ ಒಂದು ಔದಾರ್ಯ ಮೆರೆದು ಪ್ರತಿಯೊಬ್ಬರು ಕೂಡ ಒ೦ದು ಚಿಕ್ಕಧನಸಹಾಯ ಮಾಡೋಣ, ಮಗುವಿನ ಚಿಕಿತ್ಸೆಗೆ ಸಹಕರಿಸುವ ಒಳ್ಳೆಯ ಕೆಲಸದಲ್ಲಿ ಧನ್ಯತೆಯನ್ನು ಕಾಣೋಣ. ಕಳಗೆ ನೀಡಿರುವ ಸ್ಕ್ಯಾನ್ ಕೋಡ್ ನ ಮೂಲಕ ಮಾಧವ ಅವರ ಖಾತೆಗೆ ಕನಿಷ್ಠ ರೂ 500 ಧನಸಹಾಯ ಕಳಿಸೋಣ, ಆ ಮಗುವಿನ ಚಿಕಿತ್ಸೆಯ ಜೊತೆ ನಿ೦ತಿರುವ ನಮ್ಮ ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲೋಣ ಎ೦ದು ಕೈಮುಗಿದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ . ಓದಿ ಸುಮ್ಮನೆ ಬಿಡಬೇಡಿ ನೀವು ಸಹಾಯ ಕಳುಹಿಸಿ ಹಾಗೂ ಓದದೆ ಇರುವ ನಿಮ್ಮ ಸ್ನೇಹಿತರಿಗೆ ಕೂಡ ತಿಳಿಸಿ ಅವರು ಸಹಕರಿಸುವಂತೆ ಪ್ರೇರೇಪಿಸಿ”.‌

ಸಹಾಯ ಮಾಡಲು ಈ QR ಕೋಡ್‌ ಸ್ಕ್ಯಾನ್‌ ಮಾಡಿ

ಪೀಪಲ್‌ ಮೀಡಿಯಾದ ದಯಾಪರ ಓದುಗರು ಅಭಿಷೇಕ್‌ ಪೂಜಾರಿಯೊಂದಿಗೆ ನಿಲ್ಲುತ್ತಾರೆನ್ನುವ ನಂಬಿಕೆಯೊಂದಿಗೆ ಈ ಸುದ್ದಿಯನ್ನು (ಮನವಿಯನ್ನು) ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಸಂಪರ್ಕಕ್ಕೆ ಹಾಗೂ UPI ಪೇಮೆಂಟ್‌ ಮಾಡಲು: 9901636654

Update:
ಕೊಡಿಯಾಲ್ಕೆರೆ ಶಾಲೆಯ ವಿದ್ಯಾರ್ಥಿ ಅಭಿಷೇಕ್ ಪೂಜಾರಿ ಅವರ ಚಿಕಿತ್ಸೆ ನಿರೀಕ್ಷೆಗೂ ಮೀರಿ ಸಹಕಾರ ನೀಡಿದ ಎಲ್ಲ ಸಹೃದಯಿ ಬಂಧುಗಳಿಗೆ
ತಂದೆ ಮಾಧವ ಪೂಜಾರಿ ಸಲ್ಲಿಸುವ ಧನ್ಯವಾದಗಳು🙏
ಮೊದಲಿಗೆ ಶಿಕ್ಷಕರಿಂದ ಪ್ರಾರಂಭವಾದ ಧನಸಂಗ್ರಹದ ಕಾರ್ಯ ಊರವರು ಹಾಗೂ ಸಮಾಜದ ಎಲ್ಲ ವ್ಯಕ್ತಿಗಳ ಸಹಕಾರದಿಂದ ಚಿಕಿತ್ಸೆ ಅಗತ್ಯ ಸಂಗ್ರಹವಾಗಿದೆ 🙏
ಮಗುವಿಗೆ ನಾಳೆ ಪ್ರಜ್ಞೆ ಬರಬಹುದು ಎಂದು ವೈದ್ಯರು ಹೇಳಿದ್ದು ಅದರ ನಿರೀಕ್ಷೆಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ..
ಸಾಕ್ಷಾತ್ ಭಗವಂತನ ಸ್ವರೂಪವಾಗಿ ಶಸ್ತ್ರಚಿಕಿತ್ಸೆಗೆ ಬೇಕಾದ ಹಣಕಾಸಿನ ಸಮಸ್ಯೆಯನ್ನು ಸಂಪೂರ್ಣ ನಿವಾರಿಸಿದ ಎಲ್ಲರಿಗೂ ನನ್ನ ನಮಸ್ಕಾರಗಳು 🙏
ಚಿಕಿತ್ಸೆಗೆ ಓಡಾಡಿದ ಊರಿನ ಮುಖ್ಯಸ್ಥರಿಗೆ ಶಿಕ್ಷಕ ವೃಂದಕ್ಕೆ
ಸಹಕರಿಸಿದ ಎಲ್ಲರಿಗೂ ನಾನು ಇಲ್ಲಿಂದಲೇ ಕೈ ಮುಗಿಯುತ್ತಿದ್ದೇನೆ .
ಇಂತಹ ಸಹಕಾರ ಈ ಪರಿಸ್ಥಿತಿಯಲ್ಲಿರುವ ಉಳಿದ ಮಕ್ಕಳಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ 🙏

ಇಂತಿ ನಿಮ್ಮ
ಮಾಧವ ಪೂಜಾರಿ ಗೋಳಿಹೊಳೆ ಮಗುವಿನ ತಂದೆ

You cannot copy content of this page

Exit mobile version