Home ರಾಜ್ಯ ಉಡುಪಿ ಪ್ರಾಣಿ ಮಾನವ ಸಂಘರ್ಷ ತಡೆಗೆ ಬ್ಯಾರಿಕೇಡ್ ಯೋಜನೆ – ಸಿಎಂ ಸಿದ್ದರಾಮಯ್ಯ

ಪ್ರಾಣಿ ಮಾನವ ಸಂಘರ್ಷ ತಡೆಗೆ ಬ್ಯಾರಿಕೇಡ್ ಯೋಜನೆ – ಸಿಎಂ ಸಿದ್ದರಾಮಯ್ಯ

0

ಉಡುಪಿ: ಕಾಡು ಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ತಡೆಗೆ ಬ್ಯಾರಿಕೇಡ್ ಅಳವಡಿಸುವ ಯೋಜನೆ ಜಾರಿಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹುಲಿ, ಚಿರತೆ, ಆನೆಗಳ ಸಂಖ್ಯೆ ಜಾಸ್ತಿಯಾಗಿದೆ ಕಾಡು ಪ್ರಾಣಿಗಳು ಕೂಡ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಹಾಗಾಗಿ ಕಾಡು ಪ್ರಾಣಿಗಳು ಮಾನವ ಸಂಘರ್ಷ ಆಗುತ್ತಿದೆ ಎಂದಿದ್ದಾರೆ. ಈ ಬಾರಿ ಬ್ಯಾರಿಕೇಡ್ ಹಾಕುವ ಯೋಜನೆ ಜಾರಿಗೊಳಿಸುತ್ತೇವೆ.  ದೊಡ್ಡಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕುತ್ತೇವೆ.  ಅರಣ್ಯದ ಅಂಚಿನಲ್ಲಿ ಬ್ಯಾರಿಕೇಡ್ ಗಳ ಆಳವಡಿಸಲಾಗುತ್ತದೆ ಬ್ಯಾರಿಕೇಡ್ ಅಳವಡಿಸುವುದು ಮಾತ್ರ ಇದಕ್ಕೆ ಪರಿಹಾರ. ಟಾಸ್ಕ್ ಪೋಸ್ಕ್ ಸಹ ರಚಿಸುತ್ತೇವೆ ಎಂದು ಹೇಳಿದ್ದಾರೆ.

ಅಜೀಂ ಪ್ರೇಮ್ ಜೀ ವಿವಿ ಮೇಲೆ  ಎಬಿವಿಪಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಕಾನೂನು ಕೈಗೆತ್ತಿಕೊಂಡರೆ ಬಿಡಲ್ಲ ಎಬಿವಿಪಿ ಅಥವಾ ಬೇರೆ ಯಾವುದೇ ಸಂಘಟನೆ ಆಗಿರಬಹುದು ಕಾನೂನು ಗೆತ್ತಿಕೊಂಡ ಸಂಘಟನೆ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ವಿನಾಕಾರಣ ಕಾನೂನು ಕೈಗೆತ್ತಿಕೊಳ್ಳುವವರನ್ನ ಸುಮ್ಮನೆ ಬಿಡಲ್ಲ ಎಂದು ತಿಳಿಸಿದ್ದಾರೆ.

You cannot copy content of this page

Exit mobile version