Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಆಫ್ರಿಕನ್‌ ಹಂದಿ ಜ್ವರ: ಹೊಸ ಮಾರ್ಗಸೂಚಿ ಪ್ರಕಟಿಸಿದ ಜಿಲ್ಲಾಡಳಿತ

ಆಫ್ರಿಕನ್‌ ಹಂದಿ ಜ್ವರ: ಹೊಸ ಮಾರ್ಗಸೂಚಿ ಪ್ರಕಟಿಸಿದ ಜಿಲ್ಲಾಡಳಿತ

0

ಮಂಗಳೂರಿನ ನೀರುಮಾರ್ಗ ಪ್ರದೇಶದಲ್ಲಿ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿರುವುದರಿಂದಾಗಿ, ಸಾರ್ವಜನಿಕ ಹಿತಾಸಕ್ತಿಗಾಗಿ ಸ್ಥಳೀಯ ಜಿಲ್ಲಾಡಳಿತವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್, ʼಈಕುರಿತು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿ ಅನುಸಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಹೊರಡಿಸಿರುವ ಹೊಸ ಮಾರ್ಗಸೂಚಿಯನ್ವಯ, ʼಈ ಹಂದಿ ಸಾಕಣಿಕೆ ಕೇಂದ್ರದಿಂದ 1 ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ಕಾಯಿಲೆಗೆ ಈಡಾದ ಹಂದಿಗಳನ್ನು ಕೊಂದು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಮತ್ತು ಆ ಸ್ಥಳವನ್ನು ಅಗತ್ಯ ಕ್ರಿಮಿನಾಶಕ ಬಳಸಬೇಕುʼ ಎಂದು ಹೇಳಲಾಗಿದೆ.

ಇದಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಅಪರಿಚಿತರಿಂದ ಹಂದಿ ಮಾಂಸವನ್ನು ಖರೀದಿಸದಿರುವುದು, ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದನ್ನು ಪಾಲಿಸಬೇಕಂದು ತಿಳಿಸಲಾಗಿದೆ. ಹಂದಿ ಜ್ವರವು ಮನುಷ್ಯರಿಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲವಾದರೂ, ಕಾಯಿಲೆ ಪೀಡಿತವಾಗಿರುವ ಹಂದಿ ಪಾಲನೆ ಕೇಂದ್ರಗಳಿಂದ ದೂರವುಳಿಯಬೇಕೆಂದು ಜನರಿಗೆ ಮತ್ತು ಹಂದಿ ಸಾಕಣೆದಾರರಿಗೆ ಸೂಚನೆ ನೀಡಲಾಗಿದೆ. ಹಾಗೂ ಕಾಯಿಲೆ ಪೀಡಿತ ಹಂದಿಗಳಿರುವ ಪಾಲನೆ ಕೇಂದ್ರಗಳಲ್ಲಿ ಎಚ್ಚರಿಕೆ ಬೋರ್ಡ್‌ ಹಾಕುವಂತೆ ಸೂಚಿಸಲಾಗಿದೆ.

ಏನಿದು ಆಫ್ರಿಕನ್ ಹಂದಿ ಜ್ವರ (ASF)?

ಆಫ್ರಿಕನ್ ಹಂದಿ ಜ್ವರ (ASF) ಸ್ಥಳೀಯ ಮತ್ತು ಕಾಡು ಹಂದಿಗಳಿಗೆ ಬರುವ ಅತ್ಯಂತ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಮರಣ ಪ್ರಮಾಣವು 100 ಶೇಖಡಾದವರೆಗೆ ತಲುಪಬಹುದು.

ಇದು ಮಾನವನ ಆರೋಗ್ಯಕ್ಕೆ ಅಪಾಯವಲ್ಲ, ಆದರೆ ಇದು ಹಂದಿ ಜನಸಂಖ್ಯೆ ಮತ್ತು ಕೃಷಿ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಹೊಂದಿದೆ. ಎಎಸ್ಎಫ್ ವಿರುದ್ಧ ಸದ್ಯಕ್ಕೆ ಯಾವುದೇ ಪರಿಣಾಮಕಾರಿ ಲಸಿಕೆ ಲ‍್ಯವಿಲ್ಲ.

ವೈರಸ್ ಪರಿಸರದಲ್ಲಿ ಹೆಚ್ಚು ಶಕ್ತಿಶಾಲಿಯಾಗಿದ್ದು, ಅದು ಬಟ್ಟೆ, ಬೂಟುಗಳು, ಚಕ್ರಗಳು ಮತ್ತು ಇತರ ವಸ್ತುಗಳ ಮೇಲೆ ಬದುಕಬಲ್ಲದು. ಇದು ಹ್ಯಾಮ್, ಸಾಸೇಜ್‌ಗಳು ಅಥವಾ ಬೇಕನ್‌ನಂತಹ ವಿವಿಧ ಹಂದಿಮಾಂಸ ಉತ್ಪನ್ನಗಳಲ್ಲಿ ಸಹ ಬದುಕಬಲ್ಲದು. ಆದ್ದರಿಂದ, ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಈ ಹಂದಿ ರೋಗವನ್ನು ಗಡಿಗಳಾಚೆಯೂ ಹರಡುವಲ್ಲಿ ಮಾನವ ನಡವಳಿಕೆಗಳು ಪ್ರಮುಖ ಪಾತ್ರವಹಿಸುತ್ತವೆ.

ಹಂದಿಗಳು ಅನೇಕ ದೇಶಗಳಲ್ಲಿ ಜನರ ಆದಾಯದ ಪ್ರಾಥಮಿಕ ಮೂಲವಾಗಿವೆ. ಪ್ರಪಂಚದಾದ್ಯಂತ ASF ಹರಡುವಿಕೆಯು ಕುಟುಂಬ-ಚಾಲಿತ ಹಂದಿ ಸಾಕಣೆ ಕೇಂದ್ರಗಳನ್ನು ಧ್ವಂಸಗೊಳಿಸಿದೆ, ಸಾಮಾನ್ಯವಾಗಿ ಹಂದಿ ಸಾಕಣೆಯು ಜನರ ಜೀವನೋಪಾಯದ ಮುಖ್ಯ ಆಧಾರವಾಗಿದೆ ಮತ್ತು ಅವರ ಆರ್ಥಿಕ ಬದುಕಿನ ಮೇಲ್ಮುಖ ಚಲನಶೀಲತೆಯ ಚಾಲಕವಾಗಿದೆ. ಈ ಕಾಯಿಲೆ ಹರಡುವಿಕೆಯಿಂದ ಉಂಟಾಗುವ ನಷ್ಟದಿಂದ ಈ ವಲಯದ ಜನರಿಗೆ ವಿದ್ಯೆ ಮತ್ತು ಆರೋಗ್ಯ ಸವಲತ್ತುಗಳನ್ನು ಪಡೆಯಲು ಕಷ್ಟವಾಗುತ್ತದೆ.

ಇದಲ್ಲದೆ, ಹಂದಿ ಮಾಂಸವು ಪ್ರಾಣಿ ಪ್ರೋಟೀನ್‌ಗಳ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದೆ, ಜಾಗತಿಕ ಮಾಂಸ ಸೇವಿಸುವ 35%ಕ್ಕಿಂತ ಹೆಚ್ಚು ಜನರು ಈ ಮಾಂಸವನ್ನು ಸೇವಿಸುತ್ತಾರೆ. ಈ ಕಾರಣದಿಂದಾಗಿ, ಈ ರೋಗವು ವಿಶ್ವಾದ್ಯಂತ ಆಹಾರ ಭದ್ರತೆಗೆ ಗಂಭೀರ ಸವಾಲಾಗಿದೆ.

ಈ ರೋಗವು ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳ ಸಮತೋಲನದ ವಿಷಯದಲ್ಲಿಯೂ ಚಿಂತೆ ಮೂಡಿಸುವ ಸಂಗತಿಯಾಗಿದೆ, ಏಕೆಂದರೆ ಈ ಕಾಯಿಲೆಯು ಸ್ಥಳೀಯ ಸಾಕಣೆ ಹಂದಿಗಳಿಗೆ ಮಾತ್ರವಲ್ಲದೆ ಸ್ಥಳೀಯ ತಳಿಗಳು ಸೇರಿದಂತೆ ಕಾಡು ಹಂದಿಗಳ ಮೇಲೂ ಪರಿಣಾಮ ಬೀರುತ್ತದೆ. (ಮಾಹಿತಿ ಆಧಾರ: The World Organisation for Animal Health)

You cannot copy content of this page

Exit mobile version