ಹೊಸದಿಲ್ಲಿ : ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಹಿರಿಯ ನಾಯಕ ಅವರು ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಅಧಿಕಾರ ಅಕ್ಟೋಬರ್ 26ರಂದು ಸ್ವೀಕರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಸಂಸದರಾದ ಡಿ.ಕೆ. ಸುರೇಶ್ ಹೊಸದಿಲ್ಲಿಗೆ ತೆರಳಿದ್ದು, ಖರ್ಗೆಯವರ ನಿವಾಸಕ್ಕೆ ಭೇಡಿ ನೀಡಿದ್ದಾರೆ. ಎಐಸಿಸಿ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ನೋಡಿ : ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು? ಹೆಡ್ ಬುಷ್ ವಿವಾದಕ್ಕೆ ನಿರ್ದೇಶಕರ ಆಕ್ರೋಶ