Home ಆಟೋಟ ಅಕ್ಷರಶಃ ಮಿಂಚಿದ ಅಕ್ಷರ್ ಪಟೇಲ್ ಭಾರತಕ್ಕೆ ಸರಣಿ ಜಯ

ಅಕ್ಷರಶಃ ಮಿಂಚಿದ ಅಕ್ಷರ್ ಪಟೇಲ್ ಭಾರತಕ್ಕೆ ಸರಣಿ ಜಯ

0

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಸರ್ ಪಟೇಲ್ ಅವರ 35 ಎಸೆತಗಳಲ್ಲಿ ಔಟಾಗದೆ 64 ರನ್‌ಗಳ ನೆರವಿನಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 312 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಅಂತರದ ಗೆಲುವು ಸಾಧಿಸಿತು. ಇದಕ್ಕೂ ಮೊದಲು ಶಾಯ್ ಹೋಪ್ ಅವರ ಶತಕದ (135 ಎಸೆತಗಳಲ್ಲಿ 115 ರನ್) ನೆರವಿನಿಂದ ವೆಸ್ಟ್ ಇಂಡೀಸ್ ಭಾರತಕ್ಕೆ 312 ರನ್ ಗುರಿ ನೀಡಿತ್ತು. ಆತಿಥೇಯ ನಾಯಕ ಟಾಸ್ ಗೆದ್ದು ಭಾರತ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ನಿಕೋಲಸ್ ಪೂರನ್ ಅವರು ಗಳಿಸಿದ 77 ಬಾಲ್ ಗಳ 74 ರನ್ ಆಟ, ವಿಂಡೀಸ್ ಅನ್ನು 300 ಕ್ಕೂ ಹೆಚ್ಚು ಮೊತ್ತಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಶಾರ್ದೂಲ್ ಠಾಕೂರ್ 54 ರನ್‌ಗಳಿಗೆ 3 ವಿಕೆಟ್‌ಗಳೊಂದಿಗೆ ಬೌಲಿಂಗ್ ನಲ್ಲಿ ಮಿಂ ಚಿದರು. ಶುಕ್ರವಾರ ಇದೇ ಸ್ಥಳದಲ್ಲಿ ನಡೆದ ಮೊದಲ ODI ನಲ್ಲಿ ಭಾರತವು ವೆಸ್ಟ್ ಇಂಡೀಸ್ ಅನ್ನು ಮೂರು ರನ್‌ಗಳಿಂದ ಸೋಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ಗೆ ಶೈನ್ ಹೋಪ್ ಆಸರೆಯಾದರು. ತಮ್ಮ 100 ನೇ ಪಂದ್ಯ ಆಡಿದ ಅವರು ಶತಕ ಬಾರಿಸುವ ಮೂಲಕ ಈ ಪಂದ್ಯವನ್ನು ತಮ್ಮ ಪಾಲಿಗೆ ಸ್ಮರಣಾರ್ಥವಾಗಿಸಿಕೊಂಡರು. 100 ನೇ ಪಂದ್ಯದಲ್ಲಿ ಶತಕ ಬಾರಿಸಿದ ವೆಸ್ಟ್ ಇಂಡೀಸ್ ನ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು. ಇವರ ಜೊತೆ ಮೇಯರ್ಸ್ ಬ್ರೂಕ್ಸ್ ಅವರ ಜೊತೆಯಾಟ ಮತ್ತು ನಾಯಕ ನಿಕೋಲಸ್ ಪೂರನ್ ಅವರ ಭರ್ಜರಿ 74ರನ್ ಗಳ ಕೊಡುಗೆ ವಿಂಡೀಸ್ಗೆ 311 ರನ್ ಗಳ ನೀಡಲು ಸಹಾಯ ಮಾಡಿತು. 312 ರನ್ ಗಳನ್ನು ಬೆನ್ನಟ್ಟಿದ ಭಾರತಕ್ಕೆ ನಿಧಾನ ಗತಿಯ ಆರಂಭ ಸಿಕ್ಕಿತು. ಮೊದಲ 10 ಓವರ್ ಗಳಲ್ಲಿ ಕೇವಲ 42 ರನ್ ಗಳಿಸಿದ್ದ ಭಾರತ ಧವನ್ ಅವರನ್ನು ಕಳೆದುಕೊಂಡಿತು. ನಂತರ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಭಾರತ ಚೇತರಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ಸುಲಭಕ್ಕೆ ಔಟ್ ಆದರೂ, ಸಂಜು ಸ್ಯಾಮ್ಸನ್ ತಂಡಕ್ಕೆ ಆಸರೆ ಆದರು. ಆದರೆ ಇವರ ನಿರ್ಗಮನದ ನಂತರ ಭಾರತದ ಸೋಲುವುದು ಬಹುತೇಕ ಖಚಿತವಾಗಿತ್ತು. ಆದರೆ ಈ ಹಂತದಲ್ಲಿ ಅನಿರೀಕ್ಷಿತ ಎಂಬಂತೆ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ವಿಂಡೀಸ್ ಬೋಲಿಂಗ್ ಅನ್ನು ಧೂಳಿಪಟ ಮಾಡಿದರು. ಕೇವಲ 35 ಬಾಲ್ ಗಳಲ್ಲಿ 5 ಸಿಕ್ಸ್, 3 ಬೌಂಡರಿ ಸಮೇತ 64 ರನ್ ಗಳಿಸಿ ತಮ್ಮ ಮೊದಲ ಏಕದಿನ ಅರ್ಧಶತಕ ಗಳಿಸಿದ ಅವರು ಅಂತಿಮ ಓವರ್ ನ ನಾಲ್ಕನೇ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಭಾರತಕ್ಕೆ ಜನಯ ತಂದಿತ್ತು ಪಂದ್ಯಶ್ರೇಷ್ಠ ಎನಿಸಿಕೊಂಡರು.  

You cannot copy content of this page

Exit mobile version