Home ಆಟೋಟ ಮಳೆಯಿಂದ ಮೊಟಕಾದ ಇಂಗ್ಲೆಂಡ್, ಆಫ್ರಿಕಾ ಪಂದ್ಯ, ಶತಕವಂಚಿತ ಡಿಕಾಕ್

ಮಳೆಯಿಂದ ಮೊಟಕಾದ ಇಂಗ್ಲೆಂಡ್, ಆಫ್ರಿಕಾ ಪಂದ್ಯ, ಶತಕವಂಚಿತ ಡಿಕಾಕ್

0

ಭಾರೀ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಸರಣಿ ನೀರಸ ಅಂತ್ಯ ಕಂಡಿದೆ. ಇದಕ್ಕೆ ಕಾರಣ ಪಂದ್ಯದ ವೇಳೆ ಸುರಿದ ಮಳೆ ನೀರು.

ಹೌದು, ಇಂಗ್ಲೆಂಡ್ ಆಫ್ರಿಕಾ ನಡುವಿನ ಮೂರನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಸರಣಿಯಲ್ಲಿ ಎರಡೂ ತಂಡಗಳೂ ತಲಾ ಒಂದೊಂದು ಪಂದ್ಯ ಗೆದ್ದಿದ್ದು. 1-1 ರ ಸಮಬಲದೊಂದಿಗೆ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ತಂಡಗಳಿಗೆ ಆರಂಭದಲ್ಲೇ ವಿಘ್ನ ಎದುರಯಿತು.

ಮಳೆಯ ಅಡಚಣೆಯಿಂದಾಗಿ, ಪಂದ್ಯವನ್ನು 45 ಓವರ್ ಗಳಿಗೆ ಇಳಿಸಲಾಯ್ತು. ಆದರೆ ನಂತರವೂ ಮಳೆ ಕಾಟ ಮುಂದುವರಿದಿದ್ದರಿಂದ ಪಂದ್ಯ ನೀರಸ ಅಂತ್ಯ ಕಂಡಿತು. ಆದರೆ ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಜಾನೆಮನ್ ಮಲಾನ್ ಅವರ ವೈಫಲ್ಯದ ಹೊರತಾಗಿಯೂ ಉತ್ತಮ ಆರಂಭ ಕಂಡುಕೊಂಡಿತ್ತು.

27.4 ಓವರ್ ಗಳಲ್ಲಿ 159 ರನ್ ಕಲೆ ಹಾಕಿದ ತಂಡಕ್ಕೆ ಆಸರೆ ಆಗಿದ್ದು ತಂಡದ ಆರಂಭಿಕ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್. ಕೇವಲ 76 ಬಾಲ್ ಗಳಲ್ಲಿ 92 ರನ್ ಗಳಿಸಿದ ಡಿಕಾಕ್ ಶತಕದ ಹಾದಿಯಲ್ಲಿದ್ದರು. ಆದರೆ ದುರದೃಷ್ಠವಶಾತ್ ಮಳೆರಾಯ ಅದಕ್ಕೆ ಅವಕಾಶ ಕೊಡಲಿಲ್ಲ. ಡಿಕಾಕ್ ಅವರ ಜೊತೆ 24 ರನ್ ಗಳಿಸಿದ ಮಾರ್ಕ್ ರಮ್ ಆಡುತ್ತಿದ್ದಾಗ ಮಳೆಯ ಕಾರಣಕ್ಕೇ ಪಂದ್ಯ ರದ್ದಾಯಿತು. ದಕ್ಷಿಣ ಆಫ್ರಿಕಾದ ವ್ಯಾಂಡರ್ ಡ್ಯೂಸೆನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

You cannot copy content of this page

Exit mobile version