ಎರಡು ಗಂಟೆ 45 ನಿಮಿಷ ತಡವಾಗಿ ಆರಂಭವಾಗಿ 29 ಓವರ್‌ಗಳಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮತ್ತು ಸೌಥ್ ಆಫ್ರಿಕಾ ನಡುವಿನ ಎರಡನೇ ಅಕದಿನ ಪಂದ್ಯದಲ್ಲಿ, ಬೌಲರ್‌ಗಳು, ಅದರಲ್ಲೂ ಸ್ಪಿನ್ನರ್‌ಗಳು ಮಿಂಚಿದರು. ಆದಿಲ್ ರಶೀದ್ ಮತ್ತು ಮೊಯಿನ್ ಅಲಿ, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಇಂಗ್ಲೆಂಡ್‌ನ ಎಡಗೈ ವೇಗದ ದಾಳಿಯಿಂದ ದಕ್ಷಿಣ ಆಫ್ರಿಕಾ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ. ಗೆಲ್ಲಲು ಬೇಕಿದ್ದ 202 ರನ್ ಗಳ ಗುರಿ ಮುಟ್ಟಲು ಸಾಧ್ಯವಾಗದೆ ಕೇವಲ 83 ರನ್ ಗಳಿಗೆ ಆಲ್ ಔಟ್ ಆಗಬೇಕಾಯಿತು. ಈ ಮೂಲಕ ಇಂಗ್ಲೆಂಡ್ ಗೆ 118 ರನ್ ಗಳ ಗೆಲುವು ಸಾಧ್ಯವಾಯಿತು.
ಶುಕ್ರವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಎರಡನೇ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾವನ್ನು 118 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು. ಇದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ವೇಗದ ಬೋಲರ್ ರೀಸ್ ಟೋಪ್ಲೆ ಎಂದರೆ ತಪ್ಪಲ್ಲ. ದಕ್ಷಿಣ ಆಫ್ರಿಕಾದ ನಾಟಕೀಯ ಕುಸಿತಕ್ಕೆ ಟೋಪ್ಲೆ ಕಾರಣರಾದರು. ಮಳೆಯಿಂದ 29 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಗೆಲುವಿಗಾಗಿ 202 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 83 ರನ್‌ಗಳಿಗೆ ಆಲೌಟ್ ಆಯಿತು, ನಾಲ್ಕು ಓವರ್‌ಗಳಲ್ಲಿ 17 ರನ್ ಗಳಿಗೆ ಎರಡು ವಿಕೆಟ್ ತೆಗೆದ ಟೋಪ್ಲೆ, 27 ಕ್ಕೆ 5 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಕುಸಿತಕ್ಕೆ ಕಾರಣವಾದರು.
ಇಂಗ್ಲೆಂಡ್ ತಂಡ ಕೂಡ ಬ್ಯಾಟಿಂಗ್ ನಲ್ಲಿ ಅಷ್ಟೇನೂ ಮಿಂಚಲಿಲ್ಲ. ಕೇವಲ ಆಲ್‌ರೌಂಡರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್ (38) ಮತ್ತು ಸ್ಯಾಮ್ ಕರ್ರಾನ್ (35) ಇಂಗ್ಲೆಂಡ್ ಪರ 30 ಕ್ಕೂ ಹೆಚ್ಚು ರನ್ ಗಳಿಸಿದರು. ಆದರೆ ಕೊನೆಯ ಹಂತದ ರನ್ ಹರಿವಿನಿಂದಾಗಿ ತಂಡದ ಒಟ್ಟಾರೆ ರನ್ ಗಳಿಕೆ 201 ರನ್ ತಲುಪಿತು.
ಆದರೆ ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಯಾವ ಹಂತದಲ್ಲೂ ಗೆಲ್ಲುವ ಲಕ್ಷಣ ತೋರಿಸಲಿಲ್ಲ. ಮಲನ್, ಮಾರ್ಕ್ರಮ್ ಸೇರಿದಂತೆ, ತಂಡದ ಪ್ರಮುಖ ಮೂವರು ಆಟಗಾರರು ಶೂನ್ಯ ಸಂಪಾದನೆ ಮಾಡುವುದರ ಜೊತೆಗೆ ಡಿಕಾಕ್ ಕೂಡ ಬೇಗನೆ ನಿರ್ಗಮಿಸಿದರು. ಹಾಗಾಗಿ 27 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಆಫ್ರಿಕಾಕ್ಕೆ ಆಗಲೇ ಸೋಲಿನ ವಾಸನೆ ಬಡಿದಿತ್ತು. ಕ್ಲಾಸೆನ್ ಕೊಂಚ ಪ್ರತಿರೋಧ ತೋರಿದರೂ ಗೆಲುವಿಗೆ ಬೇಕಾದಂಥ ಪ್ರದರ್ಶ ಯಾರಿಂದಲೂ ಬರಲಿಲ್ಲ. ಹಾಗಾಗಿ, ಅಂತಿಮವಾಗಿ 83 ನ್ ಗಳಿಗೆ ದಕ್ಷಿಣ ಆಫ್ರಿಕಾ ತಂಡ ಆಲ್ ಔಟ್ ಆಗಿ ನಿರಾಸೆ ಅನುಭವಿಸಿತು. 18 ಎಸೆತಗಳಲ್ಲಿ 35 ರನ್ ಗಳಿಸಿ , ಬೋಲಿಂಗ್ ನಲ್ಲಿ 1 ವಿಕೆಟ್ ಕಬಳಿಸಿದ ಸ್ಯಾಮ್ ಕುರ್ರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.