ಮಂಗಳೂರಿನ ಹೋಂಸ್ಟೇ ದಾಳಿ ಪ್ರಕರಣದ ಎಲ್ಲಾ 39 ಆರೋಪಿಗಳು ಖುಲಾಸೆ

ಮಂಗಳೂರು: 2012ರಲ್ಲಿ ಪಡೀಲ್‌ನ ಹೋಂಸ್ಟೇಯಲ್ಲಿ ಐವರು ವಿದ್ಯಾರ್ಥಿನಿಯರು ಸೇರಿದಂತೆ 14 ಯುವಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎಲ್ಲ 39 ಮಂದಿಯನ್ನು ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.

ಜುಲೈ 28, 2012ರಂದು, ಪಡೀಲ್‌ನ ಹೋಮ್‌ಸ್ಟೇ ‘ಮಾರ್ನಿಂಗ್ ಮಿಸ್ಟ್’ನಲ್ಲಿ ನಡೆದ ಪಾರ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಗೆ ಸಂಬಂಧ ಹೊಂದಿದ್ದ ಯುವಕರ ಗುಂಪು 14 ಜನರ ಮೇಲೆ ಹಲ್ಲೆ ನಡೆಸಿತ್ತು. ಪ್ರಕರಣದಲ್ಲಿ ಒಟ್ಟು 47 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.

ವಕೀಲರಾದ ಪ್ರಸಾದ್ ಪಾಲನ್ ಮತ್ತು ಕಿಶೋರ್ ಕುಮಾರ್ ಅವರು ಆರೋಪಿಗಳ ಗುರುತಿನ ಪರೇಡ್ ನಡೆಸದಿರುವುದು ತನಿಖೆಯಲ್ಲಿನ ದೊಡ್ಡ ನ್ಯೂನತೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, 13 ಪ್ರಮುಖ ಸಾಕ್ಷಿಗಳಲ್ಲಿ 11 ಜನರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು