Home ರಾಜ್ಯ ಹಾಸನ ಎಲ್ಲಾ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ: ಬಿ.ಪಿ. ಕೃಷ್ಣೇಗೌಡ ಮನವಿ

ಎಲ್ಲಾ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ: ಬಿ.ಪಿ. ಕೃಷ್ಣೇಗೌಡ ಮನವಿ

ಹಾಸನ: ಜಿಲ್ಲಾ ಸರಕಾರಿ ನೌಕರರ ಅಧ್ಯಕ್ಷರ ಚುನಾವಣೆಗೆ ಕೆಲ ದಿವಸ ಇರುವಂತೆ ನಿರ್ದೇಶಕರ ಮನೆಗಳಿಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮಾಡಿದ ಪರಿಣಾಮ ನಮ್ಮ ತಂಡವು ಗೆಲುವು ಸಾಧಿಸಿದೆ ಎಂದು ಸಂಘದ ನೂತನ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಚುನಾವಣೆ ಮುಗಿದ ಬಳಿಕ ಯಾರನ್ನು ಯಾರೂ ದೂಷಿಸುವುದು ಬೇಡ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊಂಡು ಹೋಗೋಣ ಎಂದು ಮನವಿ ಮಾಡಿದರು. ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಕೆಲವರು ಪರೋಕ್ಷವಾಗಿ ಸಹಕಾರ ನೀಡಿದರು. ಅವರಿಗೂ ಬೆಂಬಲ ನೀಡಿದರು. ರಾಜಕೀಯ ಧ್ರುವೀಕರಣ ಆದಾಗ ಅವರ ಬೆಂಬಲಿಗರು ಬರುವುದು ಸಹಜ. ನಮ್ಮ ತಂಡದ ಸದಸ್ಯರು ಯಾವುದೇ ಮತದಾರರಿಗೆ ಆಮಿಷವನ್ನು ಒಡ್ಡಲಿಲ್ಲ. ಬದಲಿಗೆ ನಿರ್ದೇಶಕರ ಮನೆಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮತ್ತು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗೆಲುವು ನಮ್ಮದಾಯಿತು ಎಂದರು. ಮುಂದಿನ ದಿನಗಳಲ್ಲಿ

ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಲ್ಲಾ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು. ಸರ್ಕಾರಿ ನೌಕರರ ಚುನಾವಣೆ ಪೂರ್ವ ಎಲ್ಲಾ ರಾಜಕೀಯ ನಾಯಕರನ್ನು ಭೇಟಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಲು ಕೋರಲಾಗಿದೆ. ಆದರೆ ಚುನಾವಣೆಯಲ್ಲಿ ಸೋತವರು ರಾಜಕೀಯ ಮೇಲಾಟದ ಕಾರಣ ನಮಗೆ ಸೋಲುಂಟಾಯಿತು ಎಂದು ಆರೋಪ ಮಾಡುವುದು ಸರಿಯಲ್ಲ ಎಂದರು. ಮುಂದಿನ ದಿನಗಳಲ್ಲಿ ನಾವು ಸಂಘದ ಕೆಲಸ ಮಾಡಬೇಕು ಎಂದು ಎಲ್ಲ ಪಕ್ಷಗಳ ರಾಜಕಾರಣಿಗಳ ಸಹಕಾರ ಬೇಕು. ಅವರು ಅನುದಾನ ನೀಡಿದರೆ ಅಭಿವೃದ್ಧಿ ಮಾಡಬಹುದು. ಇನ್ನು ಶಾಸಕರ ನಿಧಿಯಿಂದ ಅಭಿವೃದ್ಧಿಗೆ ೫ ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಸಮುದಾಯ ಭವನ, ಹಾಲ್, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು. ಬಾರಿಯ ಚುನಾವಣೆಯಲ್ಲಿ ಎರಡು ಕಡೆಯಿಂದಲೂ ರಾಜಕೀಯ ಪ್ರವೇಶ ಆಗಿರುವುದು ದುರದೃಷ್ಟಕರ ಎಂದು ಹೇಳಿದ ಅವರು ರಾಜಕೀಯ ಹೊರತಾಗಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡುವುದಾಗಿ ಮತ್ತು ಗೆಲುವಿಗೆ ಸಹಕರಿಸಿದ ಸರ್ಕಾರಿ ನೌಕರರು ನಿರ್ದೇಶಕರು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಮುಂದೆ ಎಲ್ಲರ ಸಲಹೆ ಸಹಕಾರ ಪಡೆದು ಕೆಲಸ ಮಾಡುತ್ತೇವೆ. ಆದರೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ರಾಜಕೀಯ ಹೆಚ್ಚು ಸದ್ದು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

      ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಈ. ಕೃಷ್ಣೇಗೌಡ, ಖಜಾಂಚಿ ಹೇಮಂತ್ ಕುಮಾರ್, ಆಶಾ, ಗೋಪಾಲಕೃಷ್ಣ, ಕುಮಾರ್, ಲಕ್ಷ್ಮೀಕಾಂತ್, ವಿಷ್ಣು ಪ್ರಕಾಶ್ ಇತರರು ಉಪಸ್ಥಿತರಿದ್ರು.

You cannot copy content of this page

Exit mobile version