ನವದೆಹಲಿ : ವಿಶ್ವದ ನಂಬರ್ ಒನ್ ಇ-ಕಾಮರ್ಸ್ ಕಂಪನಿ ಎಂದು ಹೆಸರು ಪಡೆದುಕೊಂಡಿರುವ ಅಮೆಜಾನ್ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ಕೊಟ್ಟಿದ್ದು, ಬರೋಬ್ಬರು 14,000 ಉದ್ಯೋಗಿಗಳನ್ನು ಲೇ ಆಫ್ (Amazon Layoffs) ಮಾಡಿದೆ.
ಎಐ ಅಳವಡಿಕೆಗೆ ಒತ್ತು
ಕಳೆದ ಕೆಲ ಸಮಯದಿಂದ ಅಮೆಜಾನ್ ಸಂಸ್ಥೆಯು ಎಐ ಅಳವಡಿಕೆ ಮೇಲೆ ಒತ್ತು ನೀಡುತ್ತಿದೆ. ಈ ಕಾರಣದಿಂದಾಗಿಯೇ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದಿಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ಅಮೆಜಾನ್ ಕಂಪನಿಯಲ್ಲಿ ಇನ್ನೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಈ ಉದ್ಯೋಗ ಕಡಿತದ ಬಗ್ಗೆ ಅಮೆಜಾನ್ ಸಿಇಒ ಆ್ಯಂಡಿ ಜ್ಯಾಸಿ ಅವರು ಜೂನ್ ತಿಂಗಳಲ್ಲಿಯೇ ಹೇಳಿದ್ದರು.ಎಐಗಳ ಕಾರಣದಿಂದಾಗಿ ಮುಂದಿನ ಕೆಲ ಸಮಯದಲ್ಲಿ ಅಮೆಜಾನ್‌ನ ಕಂಪನಿಯಲ್ಲಿ ಕಾರ್ಪೊರೇಟ್ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಲಿದ್ದು ಎಂದು ಹೇಳಿದ್ದರು. ಅಲ್ಲದೇ, ನಿನ್ನೆಯಿಂದ ಸುಮಾರು 30 ಸಾವಿರ ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧಾರ ಮಾಡಿದೆ, ಇದು ಸಾಂಕ್ರಾಮಿಕ ರೋಗದ ನಂತರ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮರು ಸಮತೋಲನಗೊಳಿಸುವ ಕ್ರಮ ಎಂದು ಪರಿಗಣಿಸಲಾಗಿದೆ. ಅದರ ಮೊದಲ ಹಂತವಾಗಿ ಈಗ 14 ಸಾವಿರ ಜನರ ಕೆಲಸ ಹೋಗಿದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರಾ ಸಾವಿರ ಜನ?
ಸದ್ಯದ ಮಾಹಿತಿಗಳ ಪ್ರಕಾರ, ಅಮೆಜಾನ್ ಭಾರತದಲ್ಲಿರುವ ಅದರ ಕಚೇರಿಗಳಲ್ಲಿ ಸುಮಾರು 800 ರಿಂದ ಸಾವಿರ ಉದ್ಯೋಗಿಗಳನ್ನ ಮನೆಗೆ ಕಳುಹಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅದಿಕೃತ ಮಾಹಿತಿ ಇಲ್ಲ. ಭಾರತ ಕಚೇರಿಗಳಲ್ಲಿ ಫಿನಾನ್ಸ್, ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸ್, ಟೆಕ್ ಇಲಾಖೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗಿದ್ದು, ವಿಶ್ವದ ಬೇರೆ ಬೇರೆ ಟೀಮ್‌ಗಳಿಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿರುವ ಉದ್ಯೋಗಿಗಳೇ ಹೆಚ್ಚಾಗಿ ಕೆಲಸ ಕಳೆದುಕೊಂಡಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ, ಕಂಪನಿಯು ತನ್ನ ಸಾಧನಗಳು ಮತ್ತು ಪಾಡ್‌ಕ್ಯಾಸ್ಟಿಂಗ್ ವಿಭಾಗಗಳು ಸೇರಿದಂತೆ ಇದೇ ಕ್ಷೇತ್ರಗಳಲ್ಲಿ ಸಣ್ಣ ಕಡಿತಗಳನ್ನು ಮಾಡಿದೆ. ಕಂಪನಿಯ ಕೆಲವು ಒಳಗಿನವರ ಮಾಹಿತಿ ಪ್ರಕಾರ, ಅಮೆಜಾನ್‌ನ ಮಾನವ ಸಂಪನ್ಮೂಲ ಘಟಕವು ಅದರ ಸಿಬ್ಬಂದಿಗಳಲ್ಲಿ ಶೇಕಡಾ 15 ರಷ್ಟು ವರೆಗೆ ಕಡಿತ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 2022 ರ ಅಂತ್ಯದ ನಂತರ, ಸುಮಾರು 27,000 ಉದ್ಯೋಗಿಗಳನ್ನ ತೆಗೆದುಹಾಕಿದಾಗಿನಿಂದ ಇದು ಅಮೆಜಾನ್‌ನ ಅತಿದೊಡ್ಡ ಉದ್ಯೋಗ ಕಡಿತ ಕ್ರಮವಾಗಿದೆ. ಈ ಉದ್ಯೋಗಿಗಳನ್ನ ವಜಾ ಮಾಡುವುದರಿಂದ ಅಮೆಜಾನ್‌ನ ಮಾನವ ಸಂಪನ್ಮೂಲ ವಿಭಾಗ – ಆಂತರಿಕವಾಗಿ ಪೀಪಲ್ ಎಕ್ಸ್‌ಪೀರಿಯೆನ್ಸ್ ಮತ್ತು ಟೆಕ್ನಾಲಜಿ (PXT) ತಂಡ ಎಂದು ಕರೆಯಲ್ಪಡುವ ಜನರ ಮೇಲೆ ಇದು ಪರಿಣಾಮ ಬೀರಲಿದೆ. ಅದರ ಕಾರ್ಯಾಚರಣೆಗಳು, ಸಾಧನಗಳು ಮತ್ತು ಅಮೆಜಾನ್ ವೆಬ್ ಸೇವೆಗಳು (AWS) ಸೇರಿದಂತೆ ಹಲವಾರು ವಿಭಾಗಗಳ ಮೇಲೆ ಸಹ ಈ ಉದ್ಯೋಗಿಗಳ ಕಡಿತ ಪರಿಣಾಮ ಬೀರುವ ನಿರೀಕ್ಷೆಯಿದೆ
