ನವದೆಹಲಿ: ದೇಶಾದ್ಯಾಂತ 1 ಕೋಟಿಗೂ ಅಧಿಕ ರಾಷ್ಟ್ರಧ್ವಜಗಳನ್ನು 1.5 ಲಕ್ಷ ಅಂಚೆ ಕಛೇರಿಗಳು ಮತ್ತು ಆನ್‌ಲೈನ್ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನದಡಿ ಮಾರಾಟ ಮಾಡಲಾಗಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ.
ಕೇವಲ ಹತ್ತು ದಿನಗಳಲ್ಲಿ ಅಂಚೆ ಕಛೇರಿಯ ಸರ್ವವ್ಯಾಪಿ ಜಾಲದೊಂದಿಗೆ ಪ್ರತಿಯೊಬ್ಬ ನಾಗರಿಕನಿಗೂ ರಾಷ್ಟ್ರಧ್ವಜ ತಲುಪಿಸುವ ಉದ್ದೇಶದಿಂದ ಸುಮಾರು 1 ಕೋಟಿಗೂ ಅಧಿಕ ರಾಷ್ಟ್ರಧ್ವಜಗಳನ್ನು 25 ರೂ. ಗಳಿಗೆ ಮಾರಾಟಮಾಡಲಾಗಿದೆ ಮತ್ತು ರಾಷ್ಟ್ರಧ್ವಜ ಕೊಳ್ಳುವವರಿಗೆ ಆಗಸ್ಟ್ 15 ರವರೆಗೆ ನಿಮ್ಮ ಸ್ಥಳೀಯ ಅಂಚೆ ಕಛೇರಿಯಲ್ಲಿ ಪಡೆಯಲು ಅವಕಾಶ ಇದೆ ಎಂದು ಸಚಿವಾಲಯವು ಸೂಚಿಸಿದೆ.