Sunday, April 28, 2024

ಸತ್ಯ | ನ್ಯಾಯ |ಧರ್ಮ

ಆಂಡ್ರಾಯ್ಡ್‌ ಮೊಬೈಲ್‌ ಸ್ಥಾನ ಮಾರುಕಟ್ಟೆಗಳಲ್ಲಿ ದುರ್ಬಳಕೆ : ಗೂಗಲ್‌ಗೆ 1337.76 ಕೋಟಿ ರೂ. ದಂಡ

ಸಾಧನ ವ್ಯವಸ್ಥೆಯ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ಗೆ ಬರೋಬ್ಬರಿ 1337.76 ಕೋಟಿ ರೂ. ದಂಡ ವಿಧಿಸಿದೆ.

ದಂಡದ ಜೊತೆಗೆ ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರು ಉಳಿಯುವಂತೆ ಸಿಸಿಐ ಗೂಗಲ್‌ಗೆ ಹೇಳಿದ್ದು, ತನ್ನ ನಡೆಯನ್ನು ಬದಲಾಯಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಯೂಟ್ಯೂಬ್‌ ಮೂಲಕ ಆನ್‌ಲೈನ್ ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ (ಓವಿಎಚ್‌ಪಿ) ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲು ಮತ್ತು ಅಲ್ಲಿ ಗಳಿಸಿಕೊಂಡಿರುವ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಷನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಗೂಗಲ್‌ ಬಳಸಿಕೊಂಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಶನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಬಳಸಿಕೊಂಡು ಆನ್‌ಲೈನ್‌ ಸಾಮಾನ್ಯ ಹುಡುಕಾಟದಲ್ಲಿ ತಾನು ಹೊಂದಿರುವ ಸ್ಥಾನವನ್ನು ಗೂಗಲ್‌ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ 1337.76 ಕೋಟಿ ರೂ. ದಂಡ ಹಾಕಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು