Sunday, April 28, 2024

ಸತ್ಯ | ನ್ಯಾಯ |ಧರ್ಮ

ಆನೆನಾಡಿನಲ್ಲಿ ದೀಪಾವಳಿ ಕವಿಗೋಷ್ಟಿ

ಆನೇಕಲ್‌: ಪ್ರಜಾತಾರೆ, ಸಂಕ್ರಮಣ ಬಳಗ ಮತ್ತು ಕಲಾ ಸಮೂಹ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆನೆನಾಡಿನಲ್ಲಿ ದೀಪಾವಳಿ ಕವಿಗೋಷ್ಟಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಆನೇಕಲ್‌ನ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಉದ್ಘಾಟಿಸಿದರು. ನಂತರ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕವನ ವಾಚನ ಮಾಡಿದರು.

ಕಾರ್ಯಕ್ರಮದ ಕುರಿತು ನೆರಳೂರು ಗ್ರಾಮ ಪಂಚಾಯತಿ ಸದಸ್ಯರು ಮಂಜುಳ ರಾಮಕೃಷ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಮಕ್ಕಳ ಪಾಲ್ಗೊಳ್ಳುವಿಕೆ, ಆಸಕ್ತಿಯನ್ನು ಮೂಡಿಸುವುದು ಬಹಳ ಮುಖ್ಯ, ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ ನೋಡಿ ಹಬ್ಬದ ದಿನ ಎಲ್ಲ ವಿಧಧ ತಿನಿಸು ತಿಂದು, ವಿವಿಧ ಪಟಕಿಗಳನ್ನಾ ಸಿಡಿಸಿದಂತೆ ಭಾಸವಾಯ್ತು, ಕಾರ್ಯಕ್ರಮದಲ್ಲಿ ಎಲ್ಲಾರ ಭಾಗವಹಿಸುಕೆ ದೊಡ್ಡವರು ಸಣ್ಣವರು ಎನ್ನುವ ಯಾವುದೇ ಭೇದ ಭಾವ ಇಲ್ಲದೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕವಿಗೋಷ್ಠಿಯಲ್ಲದೆ, ಗುರಿ, ಧ್ಯೇಯ ಹಾಗೂ ಕನಸುಗಳ ಹಾದಿ, ವಿಧ್ಯಾರ್ಥಿಗಳ ಪೋಷಕರ ಕರ್ತವ್ಯ ಬಗ್ಗೆ, ವಿಧ್ಯಾರ್ಥಿಗಳು ಇಂತಹ ಸಾಹಿತ್ಯಾಸಕ್ತಿ, IAS, KAS, ಲಾಯರ್ ಆಗುವ ಕನಸುಗಳ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಡಾ. ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಸಾಹಿತ್ಯ ಸಂಸ್ಕೃತಿ ಭಾರತೀಯ ಪರಂಪರೆಯ ಜೀವಂತಿಕೆಯನ್ನು ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ, ತಂದೆ, ತಾಯಿ ಪರಿಸರ, ಶಾಲೆ, ಶಿಕ್ಷಣ, ನೆರೆ ಹೊರೆ, ತಮ್ಮ ಗುರಿ ಉದ್ದೇಶಗಳನ್ನು ನಮ್ಮ ಪರಂಪರೆಯ ಬಗ್ಗೆ ಕವನಗಳನ್ನು ಬರೆದಿರುವುದು ಅರ್ಥಪೂರ್ಣವಾಗಿದೆ ಎಂದರು.

ಆದೂರು ಪ್ರಕಾಶ್ ಮಾತನಾಡಿ, ಹಿರಿಯರ ಅನುಭವ ನಮಗೆ ಬಹಳ ಮುಖ್ಯ, ನಮಗೆ ಆದರ್ಶವಾಗಬೇಕು, ನಮ್ಮ ಮನಸಿನ ಕತ್ತಲು ಹೋಡಿಸಿ ಬೆಳಕು ತುಂಬಿಕೊಳ್ಳಬೇಕು ಎಂದು ಹೇಳಿದರು.

ಮಮತಾ ಗಮನ ಮಾತನಾಡಿ, ಇಡೀ ದೇಶ ದ್ವೇಶದ ಗಾಳಿಯನ್ನು ಹರಡುತ್ತಿರುವಾಗ ಮನದೊಳಗಿನ ಕಸವನ್ನು, ಕಲ್ಮಶವನ್ನು ದ್ವೇಷ ಅಸುಯನ್ನು ಬಿಟ್ಟು ಪ್ರೀತಿಯ ದೀಪವನ್ನು ಬೆಳಗಿಸಿದೆ ಈ ಕವಿ ಗೋಷ್ಟಿ ಎಂದರು.

ವಕೀಲರಾದ ಅನುರಾಧಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಅವರ ಭಾವನೆಗಳನ್ನು ಅಭಿವ್ಯಕ್ತಿಸಲು ಇದು ಉತ್ತಮ ವೇದಿಕೆ ಎಂದು ಹೇಳಿದರು.

ನೆಸೆನೂರು ಮುಖ್ಯೋಪಾಧ್ಯಾಯರಾದ ಯಶೋಧ, ವಕೀಲರಾದ ಪುರಷೋತ್ತಮ, ಸಾಮಾಜಿಕ ಕಾರ್ಯಕರ್ತೆ ಅನುರಾಧಾ ಆರ್, ಗಂಧದ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ್‌, ಜಿಲ್ಲಾಧ್ಯಕ್ಷರಾದ ಸ್ವಾಭಿಮಾನಿ ಸತೀಶ್‌ರವರು, ಸಾಹಿತಿಗಳಾದ ಅಂಬರೀಶ್, ಮದನ್, ಮಿಥುನ್, ಅಂಜಲಿ, ದಿವ್ಯಕಿರುನಗೆ, ಸಂಧ್ಯ ಎಂ, ಕಾವ್ಯ, ಶಶಿಜನದಿನಿ, ತೇಜಸ್ವಿನಿ ಅನಲ, ಶೋಭಾ, ಶ್ರವಂತಿಸಿರಿ, ಸಿಂಚನ, ವಿಧ್ಯ, ಕವಿತ, ಉಮೇಕುಲ್ಸುಂ, ಸಾಹಿತ್ಯ, ರೈತರಾದ ಮುರುಗೇಶ್ ದಾಸನಪುರ ಮಂಜು, ವಾಣಿ, ಗೋವಿಂದ, ಶಿವು, ಮದುಶ್ರೀ ದನಲಕ್ಷ್ಮಿ, ರೂಪ,ಬಾನು, ಬಿನೀಷಾ, ಮದುಶ್ರೀ, ಹಾಡುಗಾರರಾದ ಚೈತ್ರ, ಹಿರಣ್ಣಯಿ, ಕಾರ್ಯಕ್ರಮದಲ್ಲಿ ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು