ಮಣಿಪುರದಲ್ಲಿ ಕುಕಿ ಜನಾಂಗದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಆನೇಕಲ್ ಪಟ್ಟಣದ ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪಟ್ಟಣದ ವೆಂಕಟೇಶ್ವರ ಸಿನಿಮಾ ಥಿಯೇಟರಿನಿಂದ ಪ್ರಾರಂಭಗೊಂಡ ಮೆರವಣಿಗೆಯು, ತಿಲಕ್ ವೃತ್ತದ ತನಕ ಹೋಗಿ ನಂತರ ತಹಶಿಲ್ದಾರ ಕಚೇರಿ ಮುಂದೆ ಸೇರಿ ಘೋಷಣೆಯನ್ನು ಕೂಗಿ ತಹಶಿಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಲವಾರು ಕಾಲೇಜ್ ವಿದ್ಯಾರ್ಥಿಗಳು ಸೇರಿದ್ದು ವಿಶೇಷವಾಗಿತ್ತು.

ರಾವಣ (ದಲಿತ ಮುಖಂಡರು), ಮಮತಾ ಯಜಮಾನ್ (ಮಹಿಳಾ ಪರ ಹೋರಾಟಗಾರ್ತಿ, ಸ್ತ್ರೀವಾದಿ, ನಾವಿದ್ದೂ ನಿಲ್ಲದಿದ್ದರೆ – ಸ್ಟೇಟ್ ಲೆವೆಲ್ ನೆಟವರ್ಕ್) ನಾಗವೇಣಿ, ತ್ರಿಪುರ ಸುಂದರಿ (ಮಾಜಿ ಗ್ರಾಮ ಪಂಚಾಯತ್ ಸದಸ್ಯೆ, ಬಳ್ಳೂರು), ಪಾದರ್. ಕೆವಿನ್ ( ಸಮಗ್ರ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆ)
ಮಮತಾ ಯಜಮಾನ್ ಅವರು ಮಾತನಾಡಿ “ಮಣಿಪುರದಲ್ಲಿ ನಡೆಯಿತ್ತಿರುವ ದೌರ್ಜನ್ಯದ ಕುರಿತು ಪ್ರಧಾನಿ ಮೋದಿಯವರು ಮೌನ ಮುರಿಯಬೇಕು ಮತ್ತು ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ದೇಶದ ರಾಷ್ಟ್ರಪತಿ ದಲಿತ ಮಹಿಳೆಯಾಗಿದ್ದರೂ ಮಣಿಪುರದ ವಿಷಯದಲ್ಲಿ ಮೌನವಹಿಸಿರುವುದು ತೀರ ನೋವಿನ ಸಂಗತಿ. ಕೂಡಲೆ ಈ ಕುರತು ಕ್ರಮ ಕೈಗೊಳ್ಳಬೇಕು. ಇಲ್ಲದ್ದಿದರೆ ಮುಂದಿನ ದಿನಗಳಲ್ಲಿ ತೀವ್ರವಾಗಿ ಹೋರಾಟ ನಡೆಸುತ್ತೇವೆ” ಎಂದು ಹೇಳಿದರು.