Home ಬ್ರೇಕಿಂಗ್ ಸುದ್ದಿ ಹಾಸನ ಎಫ್.ಆರ್.ಎಸ್. ನಿಲ್ಲಿಸಲು ಅಂಗನವಾಡಿ ನೌಕರರ ಸಂಘದಿಂದ ಸಹಿ ಸಂಗ್ರಹದ ಮನವಿ

ಎಫ್.ಆರ್.ಎಸ್. ನಿಲ್ಲಿಸಲು ಅಂಗನವಾಡಿ ನೌಕರರ ಸಂಘದಿಂದ ಸಹಿ ಸಂಗ್ರಹದ ಮನವಿ

ಹಾಸನ : ಎಫ್.ಆರ್.ಎಸ್. ನಿಲ್ಲಿಸಲು” ಒತ್ತಾಯಿಸಿ ಕಪ್ಪು ದಿನಾಚರಣೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸಹಿ ಸಂಗ್ರಹದ ಮನವಿಯನ್ನು ನೆರವೇರಿಸಿ ಮನವಿ ಸಲ್ಲಿಕೆ ಮಾಡಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಪುಷ್ಪ ಮಾತನಾಡಿ, ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕಿರುವ ಏಕೈಕ ಯೋಜನೆ ಐಸಿಡಿಎಸ್ ಮಾತ್ರ. ಈ ಯೋಜನೆಗೆ ಇಂದು 50 ವರ್ಷಗಳಾಗುತ್ತಾ ಬರುತ್ತಿದೆ. ಈ ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಅದರ ಬದಲಾಗಿ ಸಂಕೀರ್ಣಗೊಳಿಸಲಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ಕೊಡದೇ ಮುಖಚರ್ಯೆ ಗುರ್ತಿಸುವ ಕ್ರಮವನ್ನು ಅಳವಡಿಸಿದ್ದರಿಂದ ಕ್ಷೇತ್ರಮಟ್ಟದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. 2013ರ ಆಹಾರ ಭದ್ರತಾ ಕಾಯ್ದೆಯ ಆಶಯವೇನೆಂದರೆ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಮತ್ತು ಸುಪ್ರಿಂ ಕೋರ್ಟ್ ನಿರ್ದೇಶನದ ಆಶಯವೇನೆಂದರೆ, ಆಧಾರ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಹಾಗೂ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳಿಗೆ ವಂಚನೆಯಾಗಬಾರದು. ಈ ಆಶಯಗಳನ್ನು ಸಂರಕ್ಷಣೆ ಮಾಡಬೇಕಾದ ಸರ್ಕಾರಗಳು ಇಂದು ಕಡ್ಡಾಯಗೊಳಿಸುವ ಮುಖಾಂತರ ಫಲಾನುಭವಿಗಳ ಹಕ್ಕನ್ನು ನಿರಾಕರಿಸುತ್ತಿವೆ ಎಂದರು. ಎಫ್.ಆರ್.ಎಸ್. ಮುಖಾಂತರ ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ವಿಪರೀತ ಸೈಬರ್ ವಂಚನೆಗಳು ಹೆಚ್ಚುತ್ತಿರುವುದು ತಮಗೆ ತಿಳಿದಿದೆ. ಆಹಾರ ಭದ್ರತಾ ಕಾಯ್ದೆಯ ಆಶಯವೇನೆಂದರೆ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಮತ್ತು ಸುಪ್ರಿಂ ಕೋರ್ಟ್ ನಿರ್ದೇಶನದ ಆಶಯವೇನೆಂದರೆ, ಆಧಾರ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಹಾಗೂ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳಿಗೆ ವಂಚನೆಯಾಗಬಾರದು. ಈ ಆಶಯಗಳನ್ನು ಸಂರಕ್ಷಣೆ ಮಾಡಬೇಕಾದ ಸರ್ಕಾರಗಳು ಕಡ್ಡಾಯಗೊಳಿಸುವ ಮುಖಾಂತರ ಫಲಾನುಭವಿಗಳ ಹಕ್ಕನ್ನು ನಿರಾಕರಿಸುತ್ತಿವೆ. ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ವಿಪರೀತ ಸೈಬರ್ ವಂಚನೆಗಳು ಹೆಚ್ಚುತ್ತಿರುವುದು ತಮಗೆ ತಿಳಿದಿದೆ. 60% ತನ್ನ ಪಾಲಿನ ವಂತಿಗೆಯನ್ನು ನೀಡಬೇಕಾದ ಕೇಂದ್ರ ಸರ್ಕಾರ ನಂತಹ ನಿರ್ಬಂಧಗಳನ್ನು ಹಾಕುವ ಮುಖಾಂತರ ತನ್ನ ಪಾಲಿನ ಹಣ ಕಡಿಮೆ ಮಾಡಲು ಮುಂದಾಗಿದೆ. ಚಟುವಟಿಕೆ ಆಧಾರದಲ್ಲಿ ಹಣ ಬಿಡುಗಡೆ ಮಾಡುವ ವಿಧಾನಗಳು ಮತ್ತು ಭಾರತದಲ್ಲಿ ಐಸಿಡಿಎಸ್ ಫಲಾನುಭವಿಗಳನ್ನು ಕಡಿಮೆ ತೋರಿಸಿ ಹಣ ಕಡಿತ ಮಾಡುವ ಯೋಜನೆ ಇದಾಗಿದೆ ಎಂದು ಹೇಳಿದರು.


ಈಗಾಗಲೇ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ 135 ನೇ ಸ್ಥಾನದಲ್ಲಿರುವ ಭಾರತ ಇದರಿಂದ ಮತ್ತಷ್ಟು ಕಳೆಗುಂದುತ್ತಿದೆ. ಎಫ್.ಆರ್.ಎಸ್ ನ್ನು ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಸಿ ಮತ್ತು ಡಿ ಗುಂಪಿನ ನೌಕರರೆಂದು ಪರಿಗಣಿಸಬೇಕು, 2018 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಿ, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಿಸಬೇಕು ಎಂದು ಒತ್ತಾಯಿಸಿ 2025ರ ಆಗಸ್ಟ್ 21 ರಂದು ಕಪ್ಪು ಪಟ್ಟಿ ಧರಿಸುವ ಮುಖಾಂತರ ಕಪ್ಪು ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಸರ್ಕಲ್ ಮತ್ತು ಸಹಾಯಕಿಯರು ಸಹಿ ಮಾಡಿದ ಮನವಿಯನ್ನು ತಮಗೆ ಕಳುಹಿಸುತ್ತಿದ್ದೇವೆ. ಪ್ರಾಜೆಕ್ಟ್ನ ಕಾರ್ಯಕರ್ತರು ಈ ಮನವಿಗೆ ಸ್ಪಂದಿಸದಿದ್ದರೆ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಕೇಂದ್ರ ಸಚಿವರ ಮನೆಯ ಮುಂದೆ ಅನಿರ್ಧಿಷ್ಟ ಅವಧಿಯ ಹೋರಾಟ ರೂಪಿಸಲಾಗುವುದು ಎಂಬ ಎಚ್ಚರಿಕೆಯನ್ನು ಈ ಮುಖಾಂತರ ಕೊಡುತ್ತಿದ್ದೇವೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಹೆಚ್. ಜಯಂತಿ, ಖಜಾಂಚಿ ಮೀನಾಕ್ಷಿ, ಮುಖಂಡರಾದ ರಿಹಾನಾಭಾನು, ಬಿ.ಎಸ್. ಮಧು, ರಿಜ್ವಾನ್ ಭಾನು ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version