ಹಾಸನ : ನಗರದ ಮಹಾನಗರ ಪಾಲಿಕೆ ಕುವೆಂಪು ಸಭಾಂಗಣದಲ್ಲಿ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಗೌರಿ-ಗಣೇಶ ಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಬಾಗಿನ ನೀಡಿ ಗೌರವಿಸಿ ಶುಭ ಕೋರಿದರು. ಇದೆ ವೇಳೆ ಉದ್ದೇಶಿಸಿ ಮಾತನಾಡಿದ ಸಂಸದರು. ಗೌರಿ-ಗಣೇಶ ಹಬ್ಬವನ್ನು ಅರ್ಥ ಗರ್ಭಿತವಾಗಿ ಆಚರಿಸುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ತಮ್ಮದೆಯಾದ ಗೌರವವಿದೆ. ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರ ಇದ್ದು, ಹಂತ ಹಂತವಾಗಿ ಪೌರಕಾರ್ಮಿಕರ ಸಮಸ್ಯೆ ಏನಿದೆ ಬಗೆಹರಿಸಲಾಗುವುದು. ಕಳೆದ ಸಭೆಯಲ್ಲಿ ಕಾರ್ಮಿಕರ ನಿವೇಶನ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ಇದೆ ವೇಳೆ ಮೊದಲು ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದ ಬಳಿಕ ಪುರುಷ ಕಾರ್ಮಿಕರಿಗೂ ಕೂಡ ಬಟ್ಟೆ ವಿತರಿಸಿ ಎಲ್ಲಾರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಚನ್ನೇಗೌಡ ಇತರರು ಉಪಸ್ಥಿತರಿದ್ದರು.