ಹಾಸನ : ನಮ್ಮ ಮಹಾಕಾವ್ಯದಲ್ಲೂ ಜಾನಪದದ ಉಲ್ಲೇಖವಿದ್ದು, ಜಾನಪದ ಎಂದರೇ ಜನರ ಜ್ಞಾನ, ಜನರ ಅನುಭವ ಹಾಗೂ ಅದಕ್ಕೂ ಮಿಗಿಲಾದುದ್ದು. ಮಾನವ ಕುಲಕ್ಕೆ ಬೇಕಾಗಿರುವ ಸಂಸ್ಕಾರವೆ ಜಾನಪದ ಎಂದು ಅಪರ ಜಿಲ್ಲಾಧಿಕಾರಿ ವಿ. ಮಂಜುನಾಥ್ ತಿಳಿಸಿದರು. ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಿಳಾ ಸರಕರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕಾಲೇಜು ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಜ್ಯೋತಿ ಬೆಳಗಿ ಡೋಲು ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಎಂದರೇ ವಿಶಾಲವಾಗಿದ್ದು, ಹಲವಾರು ರಾಜ್ಯಗಳಿದ್ದರೂ ನಮ್ಮ ಕರ್ನಾಟಕದಲ್ಲಿ ಜಾನಪದ ವಿಶ್ವ ವಿದ್ಯಾಲಯ ಇದೆ ಎಂದರೇ ಮಾನವ ಕುಲಕ್ಕೆ ಹೆಮ್ಮೆಯ ಸಂಗತಿ. ಜಾನಪದ ಎಂಬುದು ಇವತ್ತಿನ ನೆನ್ನೆಯ ಕಲ್ಪನೆಯಲ್ಲ. ಕ್ರಿಶ್ತ ಪೂರ್ವದಿಂದಲೂ ಬಂದಿರುವುದು. ನಮ್ಮ ಮಹಾಕಾವ್ಯದಲ್ಲೂ ಜಾನಪದದ ಉಲ್ಲೇಖವಿದೆ. ಜಾನಪದ ಎಂದರೇ ಜನರ ಜ್ಞಾನ, ಜನರ ಅನುಭವ. ಅದಕ್ಕೂ ಮಿಗಿಲಾದುದ್ದು ಮಾನವ ಕುಲಕ್ಕೆ ಬೇಕಾಗಿರುವ ಸಂಸ್ಕಾರವೆ ಜಾನಪದ ಎಂದರು.
ಕರ್ನಾಟಕದಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೂಡ ಮಾಡಿದೆ. ನಮ್ಮ ಜಾನಪದ ಸಂಸ್ಕೃತಿ ಎಂಬುದು ಎಲ್ಲೆಡೆ ಪ್ರಖ್ಯಾತಿಯನ್ನು ಪಡೆದಿದೆ. ಕಲೆಗಳನ್ನು ಪೂಜಿಸಬೇಕು, ಕಲೆಗೆ ಇರುವ ಬದ್ಧತೆ ಇರಬೇಕು. ಜಾನಪದ ಶೈಲಿಯಲ್ಲಿ ಹಲವಾರು ವಿಧಗಳಿವೆ. ಕಲೆಗೆ ಯಾವ ವಯಸ್ಸಿಲ್ಲ. ಇತಿಹಾಸ ಬಲ್ಲದವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇರುವ ಅವಕಾಶದಿಂದ ವಂಚಿತರಾಗದೇ ಬಳಸಿಕೊಳ್ಳಿ. ಇರುವ ಪ್ರತಿಭೆಯನ್ನು ಹೊರ ತನ್ನಿ. ಜನಪದ ಎಂಬುದು ಅಮುಲ್ಯವಾದುದ್ದು ಎಂದು ಹೇಳಿದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಜನಪದ ಕಲೆಗಳ ಮುಂದಿನ ತಲೆಮಾರಿಗೂ ಕೊಂಡೊಯ್ಯಲು ಮುಂದಾಗಬೇಕು. ಜನ ಎಲ್ಲಿ ಇರುತ್ತಾರೆ ಅಲ್ಲಿ ಜನಪದ ಕಲೆ ಇರುತ್ತದೆ. ಜನರು ಇಲ್ಲದಿದ್ದರೇ ಜನಪದ ಅಂದು ಉಳಿಯುವುದಿಲ್ಲ. ಜನಪದ ಕಲೆಗಳಿಗೆ ಜಾತಿ ಎಂಬುದು ಇರುವುದಿಲ್ಲ ಎಂದರು. ಒಂದು ಸಮುದಾಯ ತನ್ನ ಜಾನಪದ ಉಳಿಸಿ ಬೆಳೆಸುವುದು ಜವಾಬ್ಧಾರಿ ಇರುತ್ತದೆ. ಯುವ ಜನಾಂಗ ಹೆಚ್ಚು ಆಸಕ್ತಿ ವಹಿಸಬೇಕು. ಯುವ ಜನಾಂಗಕ್ಕೆ ಜಾಗೃತಿ ಮೂಡಿದಲು ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಡೀ ಭಾರತದಲ್ಲಿ ಅಕಾಡೆಮಿ ಸ್ಥಾಪನೆ ಮಾಡಿದೆ ಎಂದರೆ ಅದು ಕರ್ನಾಟಕ ಮಾತ್ರ. ಎಂದು ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಮೊದಲು ನಗರದ ಎಂ.ಜಿ. ರಸ್ತೆ ಬಳಿಯಿಂದ ಆಕರ್ಷಕ ಸಾಂಸ್ಕೃತಿಕ ಕಲಾತಂಡದೊಡನೆ ಮೆರವಣಿಗೆ ಮೂಲಕ ಮಹಿಳಾ ಸರಕಾರಿ ಕಾಲೇಜಿಗೆ ಆಗಮಿಸಿದರು. ಇದೆ ವೇಳೆ ಮಹಿಳಾ ಸರಕರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಕೆ.ಜಿ. ಕವಿತಾ, ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ, ಸಾಹಿತಿ ಎನ್.ಎಲ್. ಚನ್ನೇಗೌಡ, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಹೆಚ್. ರಾಮೇಗೌಡ, ಐ.ಕ್ಯೂ.ಎ.ಸಿ. ಸಂಚಾಲಕ ಎಸ್. ಯೋಗೇಶ್, ಕಲಾವಿದರ ಸಂಘದ ಅಧ್ಯಕ್ಷ ಮೈಕ್ ಕುಮಾರ್, ಕಲಾವಿದ ದುದ್ದ ಯೋಗೇಂದ್ರ, ಕಾರ್ಯದರ್ಶಿ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು. ಪುರುಷೋತ್ತಮ್ ಸ್ವಾಗತಿಸಿದರು. ಸಿಂಚನಾ ನಿರೂಪಿಸಿದರು.