ಧರ್ಮಸ್ಥಳದಲ್ಲಿ 13 ವರ್ಷಗಳ ಹಿಂದೆ 17 ವರ್ಷದ ಬಾಲಕಿಯೊಬ್ಬಳು ಕಾಣೆಯಾದ ಪ್ರಕರಣ ಹೊಸದಾಗಿ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ದೂರನ್ನು ಸ್ವೀಕರಿಸಲು ಸತಾಯಿಸಿದ್ದ ದಕ್ಷಿಣ ಕನ್ನಡ ಪೊಲೀಸರು ಆಕೆಯ ಸಹೋದರ ಸಲ್ಲಿಸಿದ ದೂರನ್ನು ಅಂತಿಮವಾಗಿ ಸ್ವೀಕರಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಾವಳಮುದೂರು ನಿವಾಸಿ ನಾರಾಯಣ ದೇವಾಡಿಗ ಅವರ ಪುತ್ರಿ ಹೇಮಾವತಿ ಅಲಿಯಾಸ್ ಹೇಮಲತಾ (17) ಎಂಬುವರನ್ನು ಅಂಗನವಾಡಿ ಕಾರ್ಯಕರ್ತೆ ವಸಂತಿ ಎಂಬುವರು 2012ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ವಸಂತಿ ಮನೆಗೆ ಹಿಂದಿರುಗಿದರೂ, ಹೇಮಲತಾ ಮತ್ತೆ ಬರಲಿಲ್ಲ.
ಖಾಸಗಿ ಸುದ್ದಿ ವಾಹಿನಿಗೆ ಸಹೋದರ ನಿತಿನ್ ದೇವಾಡಿಗ ಮಾತನಾಡಿದ ಪ್ರಕಾರ, “ಅವಳು ಕಾಣೆಯಾದ ತಕ್ಷಣ 2012 ರಲ್ಲಿ ನಾವು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆವು. ಆದರೆ ಪೊಲೀಸರು ಅದನ್ನು ದಾಖಲಿಸಲು ನಿರಾಕರಿಸಿದರು. ಅವರು ಅವಳನ್ನು ಹುಡುಕುವುದಾಗಿ ಹೇಳಿ ನಮ್ಮನ್ನು ಕಳುಹಿಸಿದರು, ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಹೇಳಿದರು.
ವಸಂತಿ ಹೇಮಲತಾಳನ್ನು ಈ ಹಿಂದೆಯೂ ಒಮ್ಮೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ವಸಂತಿಯೊಂದಿಗೆ ಎರಡನೇ ಬಾರಿ ಭೇಟಿ ನೀಡಿದಾಗ, ಹೇಮಲತಾ ಕಾಣೆಯಾಗಿದ್ದಾರೆ, ಎಂದು ನಿತಿನ್ ದೇವಾಡಿಗ ದೂರಿನಲ್ಲಿ ತಿಳಿಸಿದ್ದಾರೆ.
ಹೇಮಲತಾ ಸಂಪರ್ಕಿಸಿದ್ದ ವಸಂತಿ ಸುಳ್ಳು ಹೇಳಿದ್ದರು. ಹೇಮಲತಾ ಕುಟುಂಬ ಆಗ ತೀವ್ರ ಬಡತನ ಇದ್ದ ಕಾರಣ ಕುಟುಂಬ ನಿರ್ವಹಣೆ ತೀರಾ ಕಷ್ಟಕರವಾಗಿತ್ತು. ವಸಂತಿ ಅವರ ಭೇಟಿಗೆ ಅಂಗನವಾಡಿ ಕೇಂದ್ರದ ಕೆಲಸದ ಬಗ್ಗೆ ತಿಳಿದುಕೊಳ್ಳಲು ಭೇಟಿ ನೀಡುತ್ತಿದ್ದರು. ಹೀಗಾಗಿ ವಸಂತಿ ಭೇಟಿಯ ಬಗ್ಗೆ ಹೇಮಲತಾ ಗೌಪ್ಯತೆ ಕಾಯ್ದಿದ್ದರು.
ಆರ್ಥಿಕ ಸಂಕಷ್ಟದ ಕಾರಣ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಧರ್ಮಸ್ಥಳದಲ್ಲಿ ಕಾಣೆಯಾದ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಜುಲೈ 19, 2025 ರಂದು ವಿಶೇಷ ತನಿಖಾ ತಂಡ (SIT) ರಚಿಸಿದ ನಂತರ, ನಿತಿನ್ ದೇವಾಡಿಗ ಕಾಣೆಯಾದ ತಮ್ಮ ಸಹೋದರಿ ಹೇಮಲತಾ ಬಗ್ಗೆ ಅರ್ಜಿಯನ್ನು ಸಲ್ಲಿಸಿದರು. SIT ಅವರಿಗೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲು ಸೂಚಿಸಿದ ನಂತರ ಈಗ ಪುಂಜಾಲಕಟ್ಟೆ ಪೊಲೀಸರು ದೂರು ಅರ್ಜಿ ಸ್ವೀಕರಿಸಿದ್ದಾರೆ.

ಧರ್ಮಸ್ಥಳದಲ್ಲಿ ಕಾಣೆಯಾದ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಜುಲೈ 19, 2025 ರಂದು ವಿಶೇಷ ತನಿಖಾ ತಂಡ (SIT) ರಚಿಸಿದ ನಂತರ, ದೇವಾಡಿಗ ಕಾಣೆಯಾದ ವ್ಯಕ್ತಿಯ ಬಗ್ಗೆ ಅರ್ಜಿಯನ್ನು ಸಲ್ಲಿಸಿದರು. SIT ಅವರಿಗೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲು ಸೂಚಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಮೂರು ಬಾರಿ ಹೇಮಲತಾ ಕುಟುಂಬವನ್ನು ಭೇಟಿ ಮಾಡಿ ಆಕೆಯ ಬಗ್ಗೆ ಎಲ್ಲಾ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ನಡುವೆ ಹೇಮಲತಾ ಬಳಿ ಸಂಪರ್ಕದಲ್ಲಿದ್ದ ವಸಂತಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತು ಆಕೆಯನ್ನು ಮತ್ತೊಮ್ಮೆ ಪೊಲೀಸರು ಭೇಟಿಗೆ ಹೋದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಸಂತಿ ಪೊಲೀಸರಿಗೆ ಬೆದರಿಕೆ ಹಾಕಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.