ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಪೋಸ್ಟ್ ಮಾಡಿ ಕಂಗನಾ ರಾಣಾವತ್ ಕೆಲವೇ ಸಮಯದ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಆ ನಂತರ ಡಿಲೀಟ್ ಮಾಡಿದ್ದಕ್ಕೆ ಸಮರ್ಥನೆ ನೀಡುತ್ತಾ.. ಜೆಪಿ ನಡ್ಡಾ ಅವರ ಸೂಚನೆಯಂತೆ ಡಿಲೀಟ್ ಮಾಡಿದ್ದೇನೆ. ಕ್ಷಮೆ ಇರಲಿ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ವಿವಾದಾತ್ಮಕ ನಟಿ ಎಂದೇ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದ ಕಂಗನಾ ರಾಣಾವತ್ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ. ಸಧ್ಯ ಭಾರತ ಪಾಕಿಸ್ತಾನ ನಡುವಿನ ಕಾಶ್ಮೀರ ಗಡಿಯಲ್ಲಿನ ಉದ್ವಿಗ್ನತೆ ನಡುವೆ ಅಮೇರಿಕಾ ಮಧ್ಯಸ್ಥಿಕೆ ವಹಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹರಿಬಿಟ್ಟಿರುವ ಕಂಗನಾ ಟ್ರಂಪ್ ಮತ್ತು ನರೇಂದ್ರ ಮೋದಿ ನಡುವೆ ಹೋಲಿಕೆ ಕಾಣುವ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ.
ಡಿಲೀಟ್ ಮಾಡಿದ ಪೋಸ್ಟ್ನಲ್ಲಿ ಏನಿತ್ತು?:
‘ಟ್ರಂಪ್ ನಡೆಗೆ ಕಾರಣವೇನಿರಬಹುದು..?
1) ಅವರು ಅಮೆರಿಕದ ಅಧ್ಯಕ್ಷರು.. ಆದರೆ ವಿಶ್ವದ ಅತ್ಯಂತ ಪ್ರೀತಿಯ ನಾಯಕ ನಮ್ಮ ಭಾರತೀಯ ಪ್ರಧಾನಿ.
2) ಟ್ರಂಪ್ರದ್ದು ಎರಡನೇ ಅವಧಿ.. ಆದರೆ ಭಾರತೀಯ ಪ್ರಧಾನಿಯದ್ದು ಮೂರನೇ ಅವಧಿ.
3) ನಿಸ್ಸಂದೇಹವಾಗಿ ಟ್ರಂಪ್ ಸಾಮಾನ್ಯ ಪುರುಷ.. ಆದರೆ ನಮ್ಮ ಪ್ರಧಾನಿ ಮಹಾಪುರುಷ. ನಿಮ್ಮ ಅಭಿಪ್ರಾಯವೇನು? ಇದು ವೈಯಕ್ತಿಕ ಅಸೂಯೆಯೋ ಅಥವಾ ರಾಜತಾಂತ್ರಿಕ ಅಭದ್ರತೆಯೋ?
ಆ ನಂತರ ಕೆಲವೇ ಸಮಯದ ನಂತರ ಆ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ಅದು ನನ್ನ ವಯಕ್ತಿಕ ಅಭಿಪ್ರಾಯ ಎಂದು ಇನ್ನೊಂದು ಟ್ವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರು ವೈಯಕ್ತಿಕವಾಗಿ ನನಗೆ ಕರೆ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರವರ ವಿರುದ್ದ ಪೋಸ್ಟ್ ಹಾಕಿದ್ದಕ್ಕೆ ಆಪಲ್ ಸಿಇಒ ಟಿಮ್ ಕುಕ್ ಅವರು ಭಾರತದಲ್ಲಿ ಆಪಲ್ ಕಂಪನಿಯ ಹೂಡಿಕೆಯಿಂದ ಹಿಂದೆ ಸರಿದಿದ್ದಾರೆ. ಟ್ರಂಪ್ ಬಗ್ಗೆ ನೀವು ಮಾಡಿದ ಟ್ವೀಟ್ ಡಿಲೀಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ನನ್ನ ತೀರಾ ವಯಕ್ತಿಕ ಅಭಿಪ್ರಾಯದ ಪೋಸ್ಟ್ ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಹೀಗಾಗಿ ನಾನು ಇನಿಸ್ಟಾಗ್ರಾಂ ನಲ್ಲಿ ಮಾಡಿದ ಪೋಸ್ಟ್ ನ್ನು ಡಿಲೀಟ್ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಸಧ್ಯ ಈ ಒಂದು ವಿಚಾರ ಬಾರಿ ಚರ್ಚೆಗೆ ಗ್ರಾಸವಾಗಿದೆ.