Home ವಿದೇಶ ಸಿಂಧೂ ನದಿ ನೀರು ಒಪ್ಪಂದದ ಪರಿಶೀಲನೆಗೆ ನಾವು ಸಿದ್ಧ: ಭಾರತಕ್ಕೆ ಪಾಕಿಸ್ತಾನದಿಂದ ಪತ್ರ

ಸಿಂಧೂ ನದಿ ನೀರು ಒಪ್ಪಂದದ ಪರಿಶೀಲನೆಗೆ ನಾವು ಸಿದ್ಧ: ಭಾರತಕ್ಕೆ ಪಾಕಿಸ್ತಾನದಿಂದ ಪತ್ರ

0

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಮಾತುಕತೆಗಳನ್ನು ಪುನರಾರಂಭಿಸಲು ಮತ್ತು ಅದರ ಪರಿಶೀಲನೆಗೆ ಸಿದ್ಧವಿರುವುದಾಗಿ ತಿಳಿಸಿದೆ.

ಈ ಕುರಿತು ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಅವರಿಂದ ಒಂದು ವಾರದ ಹಿಂದೆ ಭಾರತದ ಜಲಸಂಪನ್ಮೂಲ ಕಾರ್ಯದರ್ಶಿ ದೇವಶ್ರೀ ಮುಖರ್ಜಿ ಅವರಿಗೆ ಪತ್ರ ಬಂದಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಸಿಂಧೂ ಜಲ ಆಯುಕ್ತರೊಂದಿಗೆ ಮಾತುಕತೆ ನಡೆಸಲು ಪ್ರತಿನಿಧಿಯನ್ನು ನೇಮಿಸುವಂತೆ ಪತ್ರದಲ್ಲಿ ಕೋರಲಾಗಿದೆ.

ಪತ್ರವನ್ನು ಕಳುಹಿಸಲಾದ ನಿಖರ ದಿನಾಂಕವನ್ನು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ. ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಲು ಭಾರತೀಯ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಸಿಂಧೂ ನದಿ ನೀರು ಒಪ್ಪಂದದ ಕುರಿತು ಎರಡೂ ದೇಶಗಳ ಸರ್ಕಾರಗಳು ಮರು ಮಾತುಕತೆ ನಡೆಸಬೇಕು ಎಂಬುದು ಭಾರತದ ನಿಲುವು. ಕಳೆದ ಸೆಪ್ಟೆಂಬರ್‌ನಲ್ಲಿ ಭಾರತವು ಶಾಶ್ವತ ಸಿಂಧೂ ಆಯೋಗದ (ಪಿಐಸಿ) ಸಭೆಗಳು ನಡೆಯುವವರೆಗೆ ಅವುಗಳನ್ನು ನಡೆಸಲಾಗುವುದಿಲ್ಲ ಎಂದು ಹೇಳಿತ್ತು.

ಜನವರಿ 2023ರಿಂದ ಭಾರತವು ಪಾಕಿಸ್ತಾನಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದು, ಒಪ್ಪಂದವನ್ನು ಪರಿಷ್ಕರಿಸುವ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವಂತೆ ಕೇಳಿಕೊಂಡಿದೆ. ಪಾಕಿಸ್ತಾನದಿಂದ ತೃಪ್ತಿದಾಯಕ ಪ್ರತಿಕ್ರಿಯೆ ಸಿಕ್ಕಿರಲಿಲದಲ. ಪ್ರಸ್ತುತ ಸಂದರ್ಭಗಳಲ್ಲಿ ಸಭೆಯನ್ನು ನಡೆಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳುತ್ತಿದೆ.

You cannot copy content of this page

Exit mobile version