Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಲಡಾಖ್ : ಸೇನಾ ವಾಹನ ಅಪಘಾತ, ಸೈನಿಕರ ದುರ್ಮರಣ

ಲಡಾಖ್ : ಸೇನಾ ವಾಹನ ಅಪಘಾತ, ಸೈನಿಕರ ದುರ್ಮರಣ

0

ಭಾರತ ಪಾಕೀಸ್ತಾನದ ಗಡಿ ರೇಖೆ ಲಡಾಕ್ ನಲ್ಲಿ ನದಿಯನ್ನು ದಾಟುವಾಗ ಸೇನೆಯ 7 ಮಂದಿ ಸೈನಿಕರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಡಾಖ್ ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕ್ ನಲ್ಲಿ ನದಿಯನ್ನು ದಾಟುವಾಗ ಈ ಅಪಘಾತ ಸಂಭವಿಸಿದೆ.

ಮಾಹಿತಿಗಳ ಪ್ರಕಾರ ಲಡಾಕ್ ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ ಮೋರ್ಹ್ ಬಳಿ ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

7 ಮಂದಿ ಸೈನಿಕರನ್ನು ಹೊತ್ತ ಟಿ -72 ಟ್ಯಾಂಕ್ ನದಿಯನ್ನು ದಾಟುವಾಗ ತೀವ್ರ ಪ್ರವಾಹದಿಂದಾಗಿ ಟ್ಯಾಂಕ್ ನದಿಯಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಟ್ಯಾಂಕ್ ನಲ್ಲಿ ಒಬ್ಬ ಜೆಸಿಒ ಮತ್ತು 6 ಮಂದಿ ಸೇರಿದಂತೆ ಒಟ್ಟು ಏಳು ಮಂದಿ ಸೈನಿಕರು ಇದ್ದರು ಎಂದು ತಿಳಿದು ಬಂದಿದೆ.

ಈಗಾಗಲೇ ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು, ಇತರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version