ಹೊಸದಿಲ್ಲಿ : ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಮೀಸಲಾತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಇಂದು ತೀರ್ಪು ಹೊರಹಾಕಿದ್ದು, ನ್ಯಾಯಾಲಯದ ನಾಲ್ವರು ನ್ಯಾಯಾಮೂರ್ತಿಗಳು ಸೇರಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಎತ್ತಿ ಹಿಡಿದಿದ್ದಾರೆ.
EWS ಮೀಸಲಾತಿಯು ಮೂಲಭೂತ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಇಂದು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಹಿಡಿದಿದೆ. EWS ತಿದ್ದುಪಡಿ ಕುರಿತು ನಾಲ್ವರು ನ್ಯಾಯಮೂರ್ತಿಗಳಿಂದ ಪರವಾಗಿ ತೀರ್ಪು ನೀಡಿದ್ದು ಒಬ್ಬರು ವಿರುದ್ದವಾದ ತೀರ್ಪು ನೀಡಿದ್ದರು.
103 ನೇ ಸಾಂವಿಧಾನಿಕ ತಿದ್ದುಪಡಿಯು EWS ನ ಪ್ರತ್ಯೇಕ ವರ್ಗವನ್ನು ಸೃಷ್ಟಿಸುತ್ತದೆ. ಎಸ್‌ಇಬಿಸಿಗಳನ್ನು ಹೊರಗಿಡುವುದು ತಾರತಮ್ಯ ಅಥವಾ ಸಂವಿಧಾನ ಉಲ್ಲಂಘನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾ.ತ್ರಿವೇದಿ ತೀರ್ಪಿನ ಸಮನದಲ್ಲಿ ಹೇಳಿದರು.
ನ್ಯಾ. ಪರ್ದಿವಾಲಾ, ʼಮೀಸಲಾತಿಯನ್ನು ಪಟ್ಟಭದ್ರ ಹಿತಾಸಕ್ತಿಯಾಗಲು ಬಿಡಬಾರದು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಕೊನೆಗೊಳಿಸಬೇಕಿದೆ. ಆಂದೋಲನ 7 ದಶಕಗಳ ಹಿಂದೆ ಪ್ರಾರಂಭವಾಗಿದ್ದು ಅಂತರವನ್ನು ಕಡಿಮೆ ಮಾಡಲು ದೀರ್ಘಕಾಲೀನ ಅಭಿವೃದ್ಧಿ ಮತ್ತು ಶಿಕ್ಷಣ ಸಹಾಯ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.
ಆದರೆ ಸುಪ್ರೀಂ ಕೋರ್ಟ್ ಇಂದು ನಾಲ್ವರ ಬಹುಮತದ ತೀರ್ಪಿನೊಂದಿಗೆ ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಶೇ.10% ಮೀಸಲಾತಿಯನ್ನು ನೀಡಬೇಕೆಂದು ಆದೇಶ ನೀಡಿದೆ.