ಹೊಸದಿಲ್ಲಿ: ದೇಶದಾದ್ಯಂತ ನವೆಂಬರ್ 15ರಂದು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳಲ್ಲಿ ʼಜನ್ ಜಾತಿಯ ಗೌರವ್ ದಿವಸ್ʼ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ.
ವೀರಯೋಧ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಅವರ ನೆನಪಿಗಾಗಿ, ನವೆಂಬರ್ 15ರಂದು ʼಜನ್ ಜಾತಿಯ ಗೌರವ ದಿನʼವನ್ನಾಗಿ ಆಚರಿಸುವಂತೆ, ಕಳೆದ ವರ್ಷ ಕೇಂದ್ರಸರ್ಕಾರ ಅಧಿಕೃತವಾಗಿ ಪ್ರಕಟಿಸುತ್ತು.

ನವೆಂಬರ್ 15 ಬುಡಕಟ್ಟು ಸಮುದಾಯದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಬಿರ್ಸಾ ಮುಂಡಾರವರ ಜನ್ಮ ಜಯಂತಿಯ ಹಿನ್ನಲೆಯಲ್ಲಿ, ಅವರನ್ನು ಗೌರವಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿರ್ಸಾ ಮುಂಡಾರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಸಮಾಜ ಸುಧಾರಕ ಮತ್ತು ಬುಡಕಟ್ಟು ನಾಯಕರಾಗಿ ಗುರುತಿಸಿಕೊಂಡಿದ್ದರು. ಇದಲ್ಲದೆ ಬ್ರಿಟೀಷ್ ಹೊಸಹತುಶಾಹಿ ಸರ್ಕಾರದ ಶೋಷಣೆ ವ್ಯವಸ್ಥೆಯ ವಿರುದ್ಧ ಹೋರಾಡುವ ಮೂಲಕ, ಬುಡಕಟ್ಟು ಸಮುದಾಯದವರಲ್ಲಿ ಹೋರಾಟದ ʼಕಿಚ್ಚುʼ ಹಚ್ಚಿಸಿದ್ದವರು.
ʼಜನ ಜಾತಿಯ ಗೌರವʼ ದಿನದ ಅಂಗವಾಗಿ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಣನಿಯ ಗೌರವ ಸಲ್ಲಿಸಿದ ಜನಜಾತಿಯ ವೀರರ ಕೊಡುಗೆ ಭವಿಷ್ಯದ ಕುರಿತು, ಚರ್ಚಾಸ್ಪರ್ಧೇ ಏರ್ಪಡಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.