Home Uncategorized Asia cup : ಭಾರತಕ್ಕೆ 127 ರನ್ ಟಾರ್ಗೆಟ್‌ ನೀಡಿದ ಪಾಕಿಸ್ತಾನ

Asia cup : ಭಾರತಕ್ಕೆ 127 ರನ್ ಟಾರ್ಗೆಟ್‌ ನೀಡಿದ ಪಾಕಿಸ್ತಾನ

0

ದುಬೈ : ಪಾಕಿಸ್ತಾನ (Pakistan) ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್​ನ (Asia cup) ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ (India) ಅಕ್ಷರಶಃ ಅಬ್ಬರಿಸಿದೆ. ಪಾಕಿಸ್ತಾನವನ್ನು ಕೇವಲ 127 ರನ್​ಗೆ ಕಟ್ಟಿಹಾಕಿದೆ.

ದುಬೈನ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ 6ನೇ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಘಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಿತು. ಪಾಕಿಸ್ತಾನದ ಪರ ಓಪನರ್ ಆಗಿ ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್ ಕ್ರೀಸ್​ಗೆ ಆಗಮಿಸಿದ್ರು.

ಭಾರತದ ಅಬ್ಬರ ಹೇಗಿತ್ತು ಅಂದ್ರೆ, ಪಂದ್ಯದ ಮೊದಲ ಓವರ್​ನ ಮೊದಲ ಬಾಲ್​ನಲ್ಲೇ ಮೊದಲ ವಿಕೆಟ್ ಬಿತ್ತು. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನದ ಆರಂಭಿಕ ಸೈಮ್ ಅಯೂಬ್​​ ವಿಕೆಟ್ ತೆಗೆದ್ರು.
ಮೊದಲ ಓವರ್​ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಪಾಕ್ ಎದೆಯಲ್ಲಿ ಕವಳ ಕುಟ್ಟೋ ರೀತಿ ಬೌಲ್ ಮಾಡಿದರು. ಮೊದಲ ಓವರ್​ನ ಮೊದಲ ಬಾಲ್ ಅನ್ನು ಪಾಂಡ್ಯ ವೈಡ್ ಹಾಕಿದ್ರು. ಮತ್ತೊಂದು ಬಾಲ್​ನಲ್ಲಿ ಪಾಕ್ ಓಪನರ್ ಸೈಮ್ ಅಯೂಬ್​ನನ್ನ ಡಕೌಟ್ ಮಾಡಿದ್ರು. ಬಳಿಕ ಆರಂಭವಾಗಿದ್ದೇ ಬೂಬ್ ಬೂಮ್ ಬುಮ್ರಾ ಅಬ್ಬರ.

ಯುಎಇ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನವನ್ನು ಗೆಲ್ಲಿಸಿದ್ದ ಮೊಹಮ್ಮದ್ ಹ್ಯಾರಿಸ್​ನನ್ನ ಬುಮ್ರಾ ಔಟ್ ಮಾಡಿದ್ರು. 5 ಎಸೆತ ಎದುರಿಸಿದ ಹ್ಯಾರಿಸ್, 3 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್​ಗೆ ನಡೆದರು. ಬಳಿಕ ಶುರುವಾಗಿದ್ದೇ ಸ್ಪಿನ್ನರ್​ಗಳ ಅಬ್ಬರ.

ಫಕರ್ ಜಮಾನ್ ಹಾಗೂ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾನನ್ನು ಅಕ್ಷರ್ ಪಟೇಲ್ ಪೆವಿಲಿಯನ್​ಗೆ ಕಳಿಸಿದರು. ಆಗ ಎಂಟ್ರಿ ಕೊಟ್ಟಿದ್ದೇ ಕುಲ್ದೀಪ್ ಯಾದವ್. ಬಿಗ್ ಹಿಟ್ಟರ್ ಮೊಹಮ್ಮದ್ ನವಾಜ್ ಹಾಗೂ ಮೊಹಮ್ಮದ್​ ನವಾಜ್​ರನ್ನು ಬ್ಯಾಕ್ ಟು ಬ್ಯಾಕ್ 2 ಬಾಲ್​ಗಳಲ್ಲಿ ಔಟ್ ಮಾಡಿದರು. ಬಳಿಕ ಕ್ರಿಸ್​ಗೆ ಅಂಟಿಕೊಂಡು ಆಡುತ್ತಿದ್ದ ಸಾಹಿಬ್ಜಾದಾ ಫರ್ಹಾನ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಕೊನೇ ಓವರ್​ಗಳಲ್ಲಿ ಶಹೀನ್ ಶಾ ಅಫ್ರೀದಿ ಅಬ್ಬರಿಸಿದರು. ಕೇವಲ 16 ಎಸೆತಗಳಲ್ಲಿ 33 ರನ್​ಗಳಿಸಿ ಅಜೇಯರಾಗಿ ಉಳಿದರು. ಅಫ್ರೀದಿ ಇನ್ನಿಂಗ್ಸ್​​ನಲ್ಲಿ ಭರ್ಜರಿ 4 ಸಿಕ್ಸರ್ ಇದ್ದವು.

You cannot copy content of this page

Exit mobile version